ಐದು ರೂಪಾಯಿ ಅಂಚೆ ಲಕೋಟೆಯ ಪತ್ರ ವಿಳಂಬ: ದೂರು ನೀಡುತ್ತಿದ್ದಂತೆಯೇ ಚುರುಕಾದ ಅಂಚೆ ಇಲಾಖೆ

ಸುಮಾರು ಒಂದು ರಿಂದ ಒಂದೂವರೆ ವರ್ಷದ ಅವಧಿಯಲ್ಲಿ ಪರ್ಕಳ ವ್ಯಾಪ್ತಿಯಲ್ಲಿ ಅಂಚೆ ಇಲಾಖೆಯ ಸೇವೆಯಲ್ಲಿ ವಿಳಂಬ ಹಾಗೂ ಅವ್ಯವಸ್ಥೆ ಕಂಡುಬಂದಿರುವುದು ಬೆಳಕಿಗೆ ಬಂದಿದೆ.

ಉಡುಪಿ : ಸುಮಾರು ಒಂದು ರಿಂದ ಒಂದೂವರೆ ವರ್ಷದ ಅವಧಿಯಲ್ಲಿ ಪರ್ಕಳ ವ್ಯಾಪ್ತಿಯಲ್ಲಿ ಅಂಚೆ ಇಲಾಖೆಯ ಸೇವೆಯಲ್ಲಿ ವಿಳಂಬ ಹಾಗೂ ಅವ್ಯವಸ್ಥೆ ಕಂಡುಬಂದಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನ, ದೈವಸ್ಥಾನ, ಮೂಲಸ್ಥಾನ ಹಾಗೂ ವಿವಿಧ ಇಲಾಖೆಗಳ ವಾರ್ಷಿಕ ಇನ್ಶೂರೆನ್ಸ್ ಡ್ಯೂ ನೋಟಿಸ್‌ಗಳು ಸೇರಿದಂತೆ ಪ್ರಮುಖ ಪತ್ರಗಳು ಸಂಬಂಧಪಟ್ಟವರ ಕೈ ಸೇರದೇ ಕಾಣೆಯಾಗುತ್ತಿದ್ದ ಘಟನೆಗಳು ನಡೆದಿದ್ದವು.

ಈ ಕುರಿತು ಪರ್ಕಳದ ಶ್ರೀಮತಿ ಜ್ಯೋತಿ ಗಣೇಶ್ ರಾಜ್ ಅವರು ಮಾರ್ಚ್ 23ರಂದು ಸ್ಥಳೀಯ ಅಂಚೆ ಕಚೇರಿಗೆ ಲಿಖಿತ ದೂರು ಸಲ್ಲಿಸಿದರು. ದೂರು ನೀಡಿದ ಕೆಲವೇ ದಿನಗಳಲ್ಲಿ, ಏಪ್ರಿಲ್ 1ರಂದು, ದೇವಸ್ಥಾನದ ಪತ್ರಗಳು ಹಾಗೂ ಪ್ರಸಾದಗಳು ಅವರ ಮನೆಗೆ ತಲುಪಿದವು.

ವಿಶೇಷವೆಂದರೆ, ಅಧಿಕಾರಿಗಳು ದೂರು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ವಿಳಂಬಗೊಂಡಿದ್ದ ಪತ್ರ ಅವರ ಸಮ್ಮುಖದಲ್ಲಿ ದೊರೆತಿದೆ. ಪರಿಶೀಲನೆಯ ವೇಳೆ ಆ ಪತ್ರದ ದಿನಾಂಕ ಹಾಗೂ ವಿಳಾಸವನ್ನು ಗಮನಿಸಿದ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯವೈಖರಿಯಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ.

Also Read: ಉಡುಪಿ: ತುಳು ರಂಗಭೂಮಿಯ ಹಿರಿಯ ಕಲಾವಿದ ಸುಜಿತ್ ಶೆಟ್ಟಿ ಪಾದೂರು ನಿಧನ

ಬೆಣ್ಣೆ ಕುದ್ರು ನಿಂದ ಪರ್ಕಳದ ಅಚ್ಯುತ ನಗರಕ್ಕೆ ಕಳುಹಿಸಲಾದ ಐದು ರೂಪಾಯಿ ಅಂಚೆ ಲಕೋಟೆಯ ಈ ಪತ್ರ ತಲುಪಲು ಸುಮಾರು ಒಂದು ತಿಂಗಳು ಒಂಬತ್ತು ದಿನಗಳ ಕಾಲ ತೆಗೆದುಕೊಂಡಿರುವುದು ಗಮನಾರ್ಹವಾಗಿದೆ. ಈ ರೀತಿಯ ಅಂಚೆ ಸೇವೆಯ ವಿಳಂಬದಿಂದ ಸ್ಥಳೀಯರು ಅಸಮಾಧಾನಗೊಂಡಿದ್ದು, ಹಲವರು ಈಗಾಗಲೇ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ. ದೂರು ಸಲ್ಲಿಸಿದ ಬಳಿಕ ಮಾತ್ರ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಿರುವುದು ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿದೆ.

Delay of five rupee postal envelope letter As smart as the complaint the postal department

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories