Anupama Shenoy : ಜಿರಳೆಯಲ್ಲ, ನಾನು ಮಹಿಳೆ- ಫೋಟೋ ಹಿಡಿದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ವಾಗ್ದಾಳಿ

Cockroach Janata party : ಉಡುಪಿಯಲ್ಲಿಂದು ಅನುಪಮ ಶೆಣೈ ಅವರು ರುದ್ರಾಕ್ಷಿ ಮಾಲೆ ಧರಿಸಿ ಸುದ್ದಿಗೋಷ್ಠಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಕಾಕ್ರೋಚ್‌ ಜನತಾ ಪಾರ್ಟಿಯ ಹೋರಾಟ ಸದ್ಯ ಧಂಗೆಯ ಸ್ವರೂಪವನ್ನ ಪಡೆದುಕೊಂಡಿದೆ. ನೀಟ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನೆ ನಡೆಯುತ್ತಿದೆ.

ಉಡುಪಿ ( Udupi) : ನಾನು ಜಿರಳೆಯಲ್ಲ, ನಾನು ಮಹಿಳೆ ಎಂಬ ಬರಹವಿದ್ದ ಫೋಟೋವನ್ನು ಪ್ರದರ್ಶಿಸುವ ಮೂಲಕ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಕಾಕ್ರೋಚ್‌ ಜನತಾ ಪಾರ್ಟಿ (Cockroach Janata party) ಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಕ್ರೋಚ್‌ ಜನತಾ ಪಾರ್ಟಿ ಅವರ ಧಂಗೆ ಸದ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿಂದು ಅನುಪಮ ಶೆಣೈ ಅವರು ರುದ್ರಾಕ್ಷಿ ಮಾಲೆ ಧರಿಸಿ ಸುದ್ದಿಗೋಷ್ಠಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಕಾಕ್ರೋಚ್‌ ಜನತಾ ಪಾರ್ಟಿಯ ಹೋರಾಟ ಸದ್ಯ ಧಂಗೆಯ ಸ್ವರೂಪವನ್ನ ಪಡೆದುಕೊಂಡಿದೆ. ನೀಟ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನೆ ನಡೆಯುತ್ತಿದೆ. ಕೇವಲ ನೀಟ್‌ ಪರೀಕ್ಷೆಯಲ್ಲಿ ಮಾತ್ರವಲ್ಲ, ಎಲ್ಲಾ ಪರೀಕ್ಷೆಯಲ್ಲಿಯೂ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗುತ್ತಿವೆ ಎಂದಿದ್ದಾರೆ.

ಹೋರಾಟಗಾರರು ಹೋಗುತ್ತಿರುವ ದಾರಿ ಸರಿಯಿಲ್ಲ. ನ್ಯಾಯಾಧೀಶರು ಹೇಳಿದ ಕಾಕ್ರೋಚ್‌ ಅನ್ನೋ ಪದದ ಬಳಕೆಯೇ ಈ ಹೋರಾಟಕ್ಕೆ ಕಾರಣ. ನ್ಯಾಯಾಧೀಶರು ಕೋರ್ಟ್‌ನ ಡೆಕೊರಂ ನಿಭಾಯಿಸುವ ಬದಲಿಗೆ, ಕ್ಷುಲಕ ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದ ಗೌರವ ಮತ್ತು ಘನತೆಗೆ ಧಕ್ಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ನ್ಯಾಯಮೂರ್ತಿ ಸೂರ್ಯಕಾಂತ್ ಅವರ ವಿರುದ್ದ ಲೋಕಸಭೆಯಲ್ಲಿ ಇಂಪ್ರಿಚ್ಮೆಂಟ್‌ ಮೋಶನ್‌ ಮಂಡನೆ ಮಾಡಬೇಕು. ಬಹಳ ನ್ಯಾಯಾಧೀಶರು ಇದೇ ರೀತಿ ನ್ಯಾಯ ಪೀಠದ ಮೇಲೆ ಕುಳಿತು ರಾಜಕೀಯ ಹೇಳಿಕೆ ನೀಡುತ್ತಾರೆ. ಸ್ವತಃ ಸಚಿವ ಧರ್ಮೇಂದ್ರ ಪ್ರಧಾನ್‌ ಅವರೇ ಮಂಡನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ನೀಟ್‌ ಪರೀಕ್ಷೆ ಆರಂಭವಾದಾಗ ಸ್ವತಃ ಸ್ಟಾಲಿನ್‌ ಅವರೇ ವಿರೋಧಿಸಿದ್ದರು. ಈಗ ಎಲ್ಲರೂ ಪೇಪರ್‌ಲೀಗ್‌ ಮತ್ತು ಆತ್ಮಹತ್ಯೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ನೀಟ್‌ ಪರೀಕ್ಷೆಯ ಪದ್ದತಿ ದಕ್ಷಿಣ ಭಾರತೀಯರಿಗೆ ಮಾರಕವಾಗಿದೆ. ಎಷ್ಟು ದಕ್ಷಿಣ ಭಾರತೀಯರಿಗೆ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಸಿಕ್ಕಿದೆ ? ಪ್ರಧಾನಿ ಮೋದಿಯವರೇ ಉತ್ತರ ಭಾರತೀಯರಿಗೆ ಅನುಕೂ ಆಗುವಂತೆ ನೀಟ್‌ ಪರೀಕ್ಷೆ ತಂದಿದ್ದೀರಿ. ಇವತ್ತು ಉತ್ತರ ಭಾರತೀಯರೇ ನಿಮಗೆ ಅಗ್ನಿ ಪರೀಕ್ಷೆ ತಂದಿದ್ದಾರೆ. ನೀಟ್‌ ಪರೀಕ್ಷೆಯನ್ನು ರದ್ದುಗೊಳಿಸಿ ಎಂದು ಆಗ್ರಹಿಸಿದ್ದಾರೆ.

ಪೊಲೀಸರು ಹೊಡೆದಿದ್ದಾರೆ ಎಂದು ಪ್ರತಿಭಟನಾಕಾರರು ಪ್ರತಭಟಿಸುತ್ತಿದ್ದಾರೆ. ಎರಡು ದಿನದ ಹಿಂದೆಯಷ್ಟೇ ದೀಪ್ಕೇ ಸಂಗಡಿಗರು ಪೊಲೀಸರನ್ನು ಕಿಚಾಯಿಸಿದ್ದಾರೆ. ಮಳೆ ಬರುವಾಗ ಜಿರಳೆ ಹೋರಾಟಗಾರರು ಮಳೆಯಲ್ಲಿ ನೆನೆಯುತ್ತಿದ್ದು. ನೆರಳಲ್ಲಿ ನಿಂತಿದ್ದ ಪೊಲೀಸರುನ್ನು ಕಿಚಾಯಿಸುತ್ತಿದ್ದರು. ಪೊಲೀಸ್‌ ಹೊಟ್ಟೆ ದೊಡ್ಡದಿದೆ ಎಂದು ದೀಪ್ಕೆಯ ಸ್ನೇಹಿತ ಕಿಚಾಯಿಸುತ್ತಿದ್ದ ಇದು ಬಾಡಿ ಶೇಮಿಂಗ್‌ ಅಲ್ವಾ ಅಂತ ಅನುಪಮ ಶೆಣೈ ಅವರು ಪ್ರಶ್ನಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಅನುಪಮ ಶೆಣೈ ಅವರು ಆಮ್ ಆದ್ಮಿಪಾರ್ಟಿ ಮತ್ತು ಕೇಜ್ರಿವಾಲ್‌ ವಿರುದ್ದವೂ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಗುಡಿಸುತ್ತೇನೆ ಎಂದು ಬಂದ ಕೇಜ್ರಿವಾಲ್‌ ಮತ್ತು ಅವರ ಪೊರಕೆ ಈಗ ಮೂಲೆ ಗುಂಪಾಗಿದೆ. ಆ ಪೊರಕೆಯ ಮೇಲೆ ಈಗ ಜಿರಳೆಗಳು ಕುಳಿತಿವೆ. ನನಗಂತೂ ಜಿರಳೆ ಕಂಡರೆ ಇಷ್ಟವಿಲ್ಲ. ನಾನು ಜಿರಳೆ ಕಂಡರೆ ಮೆಟ್ಟಿನಲ್ಲಿ ಹೊಡೆಯುತ್ತೇನೆ. ಪೊಲೀಸರು ಕೂಡ ಲಾಟಿಚಾರ್ಜ್‌ ಮಾಡೋದು ಬೇಡ ಮೆಟ್ಟಿನಲ್ಲಿ ಹೊಡೆಯಬೇಕು ಎಂದು ಆಗ್ರಹಿಸಿದ್ದಾರೆ.

former dysp anupama shenoy Outrage Jiraleyall Nanu Mahile

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »