ಕಾರ್ಕಳ : ಮಹಿಳಾ ವಿಶ್ವಕಪ್‌ ಕಬ್ಬಡಿ ವಿಜೇತ ಭಾರತ ತಂಡದ ಆಟಗಾರ್ತಿ ಧನಲಕ್ಷ್ಮೀಗೆ ಸನ್ಮಾನ

Indian kabaddi player Dhanalakshmi : ಕಾರ್ಕಳ : ಭಾರತದ ಮಹಿಳಾ ಕಬ್ಡಡಿ ತಂಡದ ಖ್ಯಾತ ಅಟಗಾರ್ತಿ ಕಾರ್ಕಳದ ಧನಲಕ್ಷ್ಮೀ ಅವರನ್ನು ಕಾರ್ಕಳದ ವಿಕಾಸ ಜನಸೇವಾ ಕಚೇರಿಯಲ್ಲಿಂದು ಅಭಿನಂದಿಸಲಾಯ್ತು. ಕಾರ್ಕಳ ಶಾಸಕರಾದ ವಿ.ಸುನಿಲ್‌ ಕುಮಾರ್‌ ಅವರು ಶುಭ ಹಾರೈಸಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ 2ನೇ ಮಹಿಳಾ‌ ಕಬ್ಬಡಿ ವಿಶ್ವಕಪ್- ಪಂದ್ಯಾಟದಲ್ಲಿ ಭಾರತ ತಂಡ ಚಾಂಪಿಯನ್‌ ಆಗಿ ಮೂಡಿಬಂದಿತ್ತು. ಭಾರತ ತಂಡವನ್ನು ಮೂಲತಃ ಕಾರ್ಕಳದ ಮಿಯ್ಯಾರು ಗ್ರಾಮದವರಾಗಿರುವ ಧನಲಕ್ಷ್ಮೀ ಅವರು ಪ್ರತಿನಿಧಿಸಿದ್ದರು.

Karkala Womens World Cup kabaddi Indian team player Dhanalakshmi is honoured

ಧನಲಕ್ಷ್ಮೀ ಪೋಷಕರಾದ ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿ ಸದ್ಯ ಸುರತ್ಕಲ್ ಗುಡ್ಡೆಕೊಪ್ಪದಲ್ಲಿ ನೆಲೆಸಿದ್ದಾರೆ. ಇಂದು ಧನಲಕ್ಷ್ಮೀ ಅವರು ವಿಕಾಸ ಜನಸೇವಾ ಕಚೇರಿಯಲ್ಲಿ ಪೋಷಕರ ಜೊತೆಗೆ ಅಭಿನಂದಿಸಿದ ಶಾಸಕರಾದ ಸುನಿಲ್‌ ಕುಮಾರ್‌ ಮುಂದೆ ಇನ್ನಷ್ಟು ಸಾಧನೆ ಮಾಡುವ ಮೂಲಕ ಕಾರ್ಕಳಕ್ಕೆ ನಮ್ಮ ರಾಜ್ಯಕ್ಕೆ- ದೇಶಕ್ಕೆ ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.

Karkala Womens World Cup kabaddi Indian team player Dhanalakshmi is honoured

ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಸಹ ಸಂಸ್ಥಾಪಕರಾದ ಗಣನಾಥ್‌ ಶೆಟ್ಟಿ, ಅಶ್ವಥ್‌ ಎಸ್‌ ಎಲ್‌, ಬಿಜೆಪಿ ಕ್ಷೇತ್ರಾಧ್ಯಕ್ಷರಾದ ನವೀನ್‌ ನಾಯಕ್‌, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್‌ ಬೋಳ, ಬಿಜೆಪಿ ಹಿರಿಯರಾದ ರವೀಂದ್ರ ಮಡಿವಾಳ, ಯುವ ಮೋರ್ಚಾ ಅಧ್ಯಕ್ಷರಾದ ರಾಕೇಶ್‌ ಶೆಟ್ಟಿ, ಮಹಿಳಾ ಮೋರ್ಚಾ ಪ್ರಮುಖರು ಹಾಗೂ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Karkala Womens World Cup kabaddi Indian team player Dhanalakshmi is honoured

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories