ಸಾಸ್ತಾನ : ತೇಜಸ್​ ಅಪಹರಣ ಪ್ರಕರಣ : 7 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಆರೋಪಿಗಳ ವಿರುದ್ಧ ಕೋಟ ಠಾಣಾ ಪೊಲೀಸರು ಸಂಘಟಿತ ಅಪರಾಧ ತಡೆ ಕಾಯ್ದೆ ಕೋಕಾ(2000)ನ್ನು ಅನ್ವಯಿಸಿದ್ದಾರೆ.

ಉಡುಪಿ : ಜಿಲ್ಲೆಯ ಕೋಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ತೇಜಸ್​ ಅಪಹರಣ ಪ್ರಕರಣ ಸಂಬಂಧ ಪೊಲೀಸರು 7 ಮಂದಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರನ್ನು ದೇವಿ ಪ್ರಸಾದ್​ ಶೆಟ್ಟಿ, ಸುಜಿತ್​, ಸುದೀಪ್​, ಶ್ರೀಷಾ ಆನಂದ ಶೆಟ್ಟಿ, ಮಿಥುನ್​, ಸುಹಾಸ್​ ಹಾಗೂ ಮನೋಜ್​ ವಿ. ಕೋಟ್ಯಾನ್​ ಎಂದು ಗುರುತಿಸಲಾಗಿದೆ. ಈ ಆರೋಪಿಗಳ ವಿರುದ್ಧ ಕೋಟ ಠಾಣಾ ಪೊಲೀಸರು ಸಂಘಟಿತ ಅಪರಾಧ ತಡೆ ಕಾಯ್ದೆ ಕೋಕಾ(2000)ನ್ನು ಅನ್ವಯಿಸಿದ್ದಾರೆ.

ಏನಿದು ಪ್ರಕರಣ ?

ಕಳೆದ ವರ್ಷ ನವೆಂಬರ್​ 19ರಂದು ಈ ಘಟನೆ ಸಂಭವಿಸಿದ್ದು ಪ್ರಜ್ವಲ್​ ಎಂಬಾತ​, ತೇಜಸ್​ನ ಸ್ನೇಹಿತನಾಗಿದ್ದು ತೇಜಸ್​ ತಂದೆಗೆ ಕರೆ ಮಾಡಿ ಸಾಸ್ತಾನದಲ್ಲಿರುವ ಕೋಸ್ಟಲ್​ ಪ್ಯಾರಡೈಸ್​​ ಹೋಟೆಲ್​ ಎದುರು ರಸ್ತೆಯಲ್ಲಿ ಯಾರೋ ಅಪರಿಚಿತರು ನಿಮ್ಮ ಮಗನನ್ನು ಕಿಡ್ನಾಪ್​ ಮಾಡಿಕೊಂಡು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದ. ಕೂಡಲೇ ತೇಜಸ್​ ತಂದೆ ಮೋಹನ್​ ದಾಸ್​ ಶೆಟ್ಟಿ ಸಾಸ್ತಾನಕ್ಕೆ ಆಗಮಿಸಿದ್ದಿ. ಈ ವೇಳೆ ತೇಜಸ್​ನ ಕಾರು ಹಾಗೂ ಕಾರಿನ ಒಳಗೆ ಕೀ ಕೂಡ ಇರುವುದು ಕಂಡುಬಂದಿದೆ.

ಈ ಸಂಬಂಧ ಪ್ರಜ್ವಲ್​ ಬಳಿ ಕೇಳಿದಾಗ ತೇಜಸ್​ನ ವಾಟ್ಸಾಪ್​ ಸಂಖ್ಯೆಯಿಂದ ನನಗೆ ಕರೆಬಂದಿದ್ದು. ತನ್ನನ್ನು ಮೂರು ಮಂದಿ ಅಪರಿಚಿತರು ಕಿಡ್ನಾಪ್​ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದ ಎಂದು ತಿಳಿಸಿದ್ದಾನೆ. ಅಲ್ಲದೇ ತೇಜಸ್​ನ ಮೊಬೈಲ್​ನಿಂದಲೇ ಅಪರಿಚಿತ ವ್ಯಕ್ತಿಯು ನನಗೆ ಕರೆ ಮಾಡಿದ್ದು, ತೇಜಸ್​ನನ್ನು ಬಿಡಿಸಬೇಕು ಎಂದರೆ 50 ಲಕ್ಷ ರೂಪಾಯಿ ಬೇಕೆಂದು ಬೇಡಿಕೆಯಿಟ್ಟಿರುವುದಾಗಿ ತೇಜಸ್​ ತಂದೆಗೆ ಪ್ರಜ್ವಲ್ ಮಾಹಿತಿ ನೀಡಿದ್ದ.

Also Read : ಹೆಂಡತಿ ನೆರೆಯವರ ಮನೆಯಲ್ಲಿ ಕುಳಿತಿದ್ದಕ್ಕೆ ಕಿರಿಕ್: ಕಾರ್ಕಳದ ಮಿಯ್ಯಾರಿನಲ್ಲಿ ಗೃಹಿಣಿಯ ಮೇಲೆ ಕಲ್ಲು ತೂರಾಟ

ಅಲ್ಲದೇ ಈ ಹಣ ನೀಡದೇ ಹೋದಲ್ಲಿ ತೇಜಸ್​ನನ್ನು ಸಾಯಿಸುವುದಾಗಿ ಅಪರಿಚಿತರು ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ತಿಳಿಸಿದ್ದ. ಇದಾದ ಬಳಿಕ 3 ಕೋಟಿ ರೂಪಾಯಿ ಡಿಮ್ಯಾಂಡ್​ ಮಾಡುತ್ತಿದ್ದಾರೆ ಎಂದು ತೇಜಸ್​ ತಂದೆಗೆ ಪ್ರಜ್ವಲ್​ ಮಾಹಿತಿ ನೀಡಿದ್ದ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕೋಟ ಠಾಣಾ ಪೊಲೀಸರು, ತನಿಖೆ ದೇವಿ ಪ್ರಸಾದ್ ಶೆಟ್ಟಿ, ಸುಜಿತ್, ಸುದೀಪ್, ಶ್ರೀಷಾ ಆನಂದ ಶೆಟ್ಟಿ, ಮಿಥುನ್, ಸುಹಾಸ್ ಮತ್ತು ಮನೋಜ್ ವಿ. ಕೊಟ್ಯಾನ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Also Read : ಮಣಿಪಾಲ: ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಐಫೋನ್ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದ ಯುವಕ ಅರೆಸ್ಟ್‌

ಈ ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ ಕೋಡಿಕೆರೆ (42) ಮತ್ತು ಚೇತನ್ ಪಡೀಲ್ (38) ಪರಾರಿಯಾಗಿದ್ದು, ಇವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಇನ್ನು ತಲೆಮರೆಸಿಕೊಂಡಿರುವ ಈ ಆರೋಪಿಗಳ ಪತ್ತೆಗೆ ಪೊಲೀಸರು ನಗದು ಬಹುಮಾನವನ್ನೂ ಘೋಷಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿಗಳ ನಗದು ಬಹುಮಾನ ನೀಡುವುದಾಗಿ ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಎಚ್​.ಡಿ ಕುಲಕರ್ಣಿ ತಿಳಿಸಿದ್ದಾರೆ. ಅಲ್ಲದೇ ಸುಳಿವು ನೀಡಿದ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿ ಇಡುವುದಾಗಿ ಪೊಲೀಸ್​ ಇಲಾಖೆ ಭರವಸೆ ನೀಡಿದೆ.

sastana tejas kidnap case 7 accused judicial custody Udupi news

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories