Udupi Accident : ಕಾಪು : ಭೀಕರ ಅಪಘಾತದ ಬೆನ್ನಲ್ಲೇ ಮತ್ತೊಂದು ಸರಣಿ ಅಫಘಾತ

Udupi Accident : ಕಾಪು : ಟೆಂಪೋ ಪಲ್ಟಿಯಾಗಿ ಐದು ಮಂದಿ ಸಾವನ್ನಪ್ಪಿದ ಘಟನೆಯ ಬೆನ್ನಲ್ಲೇ ಕಾಪು ಸಮೀಪದ ಕುರ್ಕಾಲು ಎಂಬಲ್ಲಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಿಂದಾಗಿ ಮೂರು ಕಾರುಗಳು ನುಜ್ಜುಗುಜ್ಜಾಗಿದೆ.

ಉಡುಪಿ ಜಿಲ್ಲೆಯ ಕಾಪುವಿನ ಕೊತ್ತಲಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಉತ್ತರ ಪ್ರದೇಶ ಐವರು ಕಾರ್ಮಿಕರು ಸಾವನ್ನಪ್ಪಿದ್ದರು. ಕಾಪುವಿನಿಂದ ಉಡುಪಿ ಕಡೆಗೆ ಈವೆಂಟ್‌ ಗೆ ಸಂಬಂಧಿಸಿದ ಸಾಮಗ್ರಿಗಳನ್ನು ಸಾಗಿಸುವ ವೇಳೆಯಲ್ಲಿ ಈ ದುರಂತ ಸಂಭವಿಸಿತ್ತು.

Udupi Accident after Kaup Major Accident case

ಇದರ ಬೆನ್ನಲ್ಲೆ ಉಡುಪಿ ಜಿಲ್ಲೆಯ ಕುರ್ಕಾಲು ಎಂಬಲ್ಲಿ ಸರಣಿ ಅಪಘಾತ ಸಂಭವಿಸಿದೆ. ಕಟಪಾಡಿಯಿಂದ ಶಿರ್ವದ ಕಡೆಗೆ ತೆರಳುತ್ತಿದ್ದ ಕಾರು ಏಕಾಏಕಿ ಬಲ ಮಗ್ಗುಲಿಗೆ ತಿರುಗಿದೆ. ಇದರಿಂದಾಗಿ ಹಿಂದಿನಿಂದ ಬಂದ ಎರಡು ಕಾರು ಪರಸ್ಪರ ಢಿಕ್ಕಿಯಾಗಿದೆ.

ಅಪಘಾತದಲ್ಲಿ ಒಟ್ಟು ಮೂರು ಕಾರುಗಳು ಸಂಪೂರ್ಣವಾಗಿ ಜಖಂ ಆಗಿವೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Udupi Accident after Kaup Major Accident case

ಉಡುಪಿ ಜಿಲ್ಲೆಯ ಕುರ್ಕಾಲು ಪರಿಸರದಲ್ಲಿ ಜಾತ್ರೆಯ ಜೊತೆ ಅನೇಕ ಸಮಾರಂಭಗಳು ಇದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಧಿಕವಾಗಿತ್ತು. ಇದರಿಂದಲೇ ಈ ಅಪಘಾತಗಳು ಸಂಭವಿಸಿದೆ ಎನ್ನಲಾಗುತ್ತಿದೆ. ಮತ್ತೊಂದು ಸರಣಿ ಅಫಘಾತ

Udupi Accident after Kaup Major Accident case

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories