ಉಡುಪಿ ಜಿಲ್ಲೆಯ ಮೂವರು ಪೊಲೀಸ್ ಸಾಧಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ರಾಜ್ಯ ಮಟ್ಟದ ಅತ್ಯುನ್ನತ ಗೌರವ ಲಭಿಸಿರುವುದಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಹರಿರಾಮ್ ಶಂಕರ್ ಐಪಿಎಸ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

cm gold medal 2025 : ಉಡುಪಿ: ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ವಿಶಿಷ್ಟ ಮತ್ತು ಶ್ಲಾಘನೀಯ ಸೇವೆಯನ್ನು ಗುರುತಿಸಿ ನೀಡಲಾಗುವ 2025ನೇ ಸಾಲಿನ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ ಘೋಷಣೆಯಾಗಿದ್ದು, ಉಡುಪಿ ಜಿಲ್ಲೆಯ ಮೂವರು ಪೊಲೀಸ್ ಸಿಬ್ಬಂದಿ ಈ ಪ್ರತಿಷ್ಠಿತ ಗೌರವಕ್ಕೆ ಭಾಜನರಾಗಿದ್ದಾರೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ, ಕರಾವಳಿ ಭದ್ರತೆ ಮತ್ತು ನಕ್ಸಲ್ ನಿಗ್ರಹ ಪಡೆಯಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗಾಗಿ ಈ ಪದಕಗಳನ್ನು ನೀಡಲಾಗಿದೆ.

ಚಂದ್ರ ಶೆಟ್ಟಿ (ಸಹಾಯಕ ಉಪನಿರೀಕ್ಷಕರು, ಉಡುಪಿ ನಗರ ಠಾಣೆ):

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿರುವ ಚಂದ್ರ ಶೆಟ್ಟಿ ಅವರು ತಮ್ಮ ಸುದೀರ್ಘ ಸೇವಾವಧಿಯಲ್ಲಿ ಅನೇಕ ಜಟಿಲ ಪ್ರಕರಣಗಳನ್ನು ಭೇದಿಸುವಲ್ಲಿ ಮತ್ತು ಸಾರ್ವಜನಿಕ ಸೇವೆಯಲ್ಲಿ ತೋರಿದ ದಕ್ಷತೆಗಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

Also Read : ಕರಾವಳಿಯಲ್ಲಿ ವರುಣನ ಅಟ್ಟಹಾಸ: ದಕ್ಷಿಣ ಕನ್ನಡ, ಉಡುಪಿಯಲ್ಲಿ 2 ದಿನ ‘ಎಲ್ಲೋ ಅಲರ್ಟ್’ ಘೋಷಣೆ

ಸಂತೋಷ್ ಶೆಟ್ಟಿ (ಎಎಚ್‌ಸಿ–82, ಕರಾವಳಿ ಕಾವಲು ಪೊಲೀಸ್):

ಕರಾವಳಿ ತೀರದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ‘ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್’ ವಿಭಾಗದ ಸಂತೋಷ್ ಶೆಟ್ಟಿ ಅವರು ಸಮುದ್ರ ಮಾರ್ಗದ ಅಕ್ರಮ ತಡೆ ಮತ್ತು ಕರಾವಳಿ ರಕ್ಷಣೆಯಲ್ಲಿ ತೋರಿದ ಚತುರತೆಗಾಗಿ ಚಿನ್ನದ ಪದಕ ಪಡೆದಿದ್ದಾರೆ.

ಮಂಜುನಾಥ ದೇವರಮನೆ (ಆರ್‌ಎಸ್‌ಐ, ನಕ್ಸಲ್ ನಿಗ್ರಹ ಪಡೆ):

ಕಾರ್ಕಳದ ನಕ್ಸಲ್ ನಿಗ್ರಹ ಪಡೆಯಲ್ಲಿ (ANF) ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಅವರು ಕಾಡಿನ ಒಳಗಿನ ಕಾರ್ಯಾಚರಣೆಗಳಲ್ಲಿ ತೋರಿದ ಧೈರ್ಯ ಮತ್ತು ಶ್ರೇಷ್ಠ ಸೇವೆಗೆ ಈ ಪದಕ ಮುಡಿಗೇರಿಸಿಕೊಂಡಿದ್ದಾರೆ.

Also Read : ಕರಾವಳಿ ಪ್ರವಾಸದಲ್ಲಿ ಘೋರ ದುರಂತ: ಬೈಂದೂರಿನಲ್ಲಿ ಲಾರಿಗೆ ಕಾರು ಢಿಕ್ಕಿ, ಬೆಂಗಳೂರಿನ ತಾಯಿ-ಮಗಳು ಸಾವು

ಎಸ್ಪಿ ಹರಿರಾಮ್ ಶಂಕರ್ ಅಭಿನಂದನೆ

ಜಿಲ್ಲೆಯ ಮೂವರು ಸಿಬ್ಬಂದಿಗೆ ರಾಜ್ಯ ಮಟ್ಟದ ಅತ್ಯುನ್ನತ ಗೌರವ ಲಭಿಸಿರುವುದಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಹರಿರಾಮ್ ಶಂಕರ್ ಐಪಿಎಸ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಇಲಾಖೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಈ ಪ್ರಶಸ್ತಿ ಸ್ಫೂರ್ತಿಯಾಗಲಿದೆ ಎಂದು ಅವರು ಸಾಧಕರನ್ನು ಅಭಿನಂದಿಸಿದ್ದಾರೆ.

udupi police officers win cm gold medal 2025 winners list

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories