Amazon Flipkart parcels : ಅಮೆಜಾನ್, ಫ್ಲಿಪ್ ಕಾರ್ಟ್ ಪಾರ್ಸಲ್ ಗಳ ಗತಿ ಏನಾಯ್ತು ನೋಡಿದ್ರೆ ನೀವೇ ಶಾಕ್ ಆಗ್ತೀರಾ

ಅಮೇಜಾನ್ ಅಥವಾ ಫ್ಲಿಪ್ ಕಾರ್ಟ್ ನಲ್ಲಿ ಏನಾದ್ರೂ ವಸ್ತುಗಳನ್ನ ಬುಕ್ ಮಾಡಿದ್ದೀರಾ. Amazon Flipkart parcels ಅದು ನಿಮ್ಮ ಮನೆ ಬಾಗಿಲಿಗೆ ಬರೋ ಮುನ್ನ ಏನೆಲ್ಲ ಕಷ್ಟಗಳನ್ನ ಅನುಭವಿಸಿ ಬರುತ್ತೆ ಅನ್ನೋದನ್ನ ನೀವಿಲ್ಲಿ ನೋಡಬಹುದು. ಈ ವಿಡಿಯೋ ನೋಡಿದ ಮೇಲೆ ಆನ್ ಲೈನ್ ನಲ್ಲಿ ಬುಕ್ ಮಾಡೋ ಮುನ್ನ ಹತ್ತು ಬಾರಿ ಯೋಚನೆ ಮಾಡಬಹುದು.

ರೈಲು ನಿಲ್ದಾಣದಲ್ಲಿ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ಪಾರ್ಸೆಲ್ ಬಾಕ್ಸ್ ಗಳನ್ನ ಮನಸೋ ಇಚ್ಛೆ ಎತ್ತಿ ಬಿಸಾಡುತ್ತಿರೋ ಈ ದೃಶ್ಯ ಆನ್ ಲೈನ್ ಶಾಪಿಂಗ್ ಪ್ರಿಯರನ್ನ ಆಘಾತಕ್ಕೀಡುಮಾಡಿದೆ.

ಅಭಿಷೇಕ್ ಯಾದವ್ ಅನ್ನೋರು ಟ್ವೀಟ್ಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಟ್ವೀಟ್ಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್ ಮಂದಿ ವಿಡಿಯೋ ನೋಡಿ ಶಾಕ್ ಆಗಿದ್ದಾರೆ.

ಆನ್ ಲೈನ್ ಶಾಪಿಂಗ್ ಈಗ ಜೀವನದ ಅವಿಭಾಜ್ಯ ದಿನಚರಿ ಆಗಿದೆ. ಮನೆ ಬಾಗಿಲಿಗೆ ನಾವು ಬಯಸಿದ ವಸ್ತುಗಳನ್ನ ತಂದು ಕೊಡೋದ್ರಿಂದ ಜನರು ಸಹ ಆನ್ ಲೈನ್ ಮೂಲಕವೇ ತಮಗೆ ಬೇಕಾದ ವಸ್ತುಗಳನ್ನ ಬುಕ್ ಮಾಡಿ ಮನೆಗೆ ತರಿಸಿಕೊಳ್ತಾರೆ. ಆನ್ ಲೈನ್ ಸರ್ವೀಸ್ ಕಂಪನಿಗಳಾದ ಫ್ಲಿಪ್ ಕಾರ್ಟ್ ಮತ್ತು ಅಮೇಜಾನ್ ಸೇವೆಗಳನ್ನೇ ಸಾಮಾನ್ಯವಾಗಿ ಎಲ್ಲರೂ ಆಯ್ಕೆ ಮಾಡಿಕೊಳ್ತಾರೆ. ಆದ್ರೆ ನಾವು ಆನ್ ಲೈನ್ ನಲ್ಲಿ ಬುಕ್ ಮಾಡೋ ವಸ್ತುಗಳು ಕೆಲವೊಮ್ಮೆ ಅಸ್ಥವ್ಯಸ್ಥ ಸ್ಥಿತಿಯಲ್ಲಿ ನಮ್ಮ ಕೈಗೆ  ಸಿಗುತ್ತವೆ. ಹೀಗೆ ಬೆಲೆ ಬಾಳೋ ವಸ್ತುಗಳು ಇರುವ ಪಾರ್ಸೆಲ್ ಗಳನ್ನ ಖಾಲಿ ಡಬ್ಬಾಗಳಂತೆ ಬಿಸಾಕೋದ್ರಿಂದಲೇ ಈ ರೀತಿಯ ಅದ್ವಾನಗಳಾಗುತ್ತೆ , ಇದ್ರಿಂದ ಕಂಪನಿಗಳಿಗೂ ಕೆಟ್ಟ ಹೆಸರು ಬರುತ್ತೆ ಅಂತಾ ಇನ್ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

Amazon Flipkart parcels-Parcels Tossed Out Of Train At Railway Station- Shocking Video

Comments are closed.