IT Returns Filing: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಇದೇ ಜುಲೈ 31 ಕೊನೆಯ ದಿನ!!

ಆದಾಯ ತೆರಿಗೆ ರಿಟರ್ನ್ಸ್‌(IT Returns) ಸಲ್ಲಿಸಲು 2021-22 ರ ಹಣಕಾಸು ವರ್ಷ ಮತ್ತು 2022–23 ನೇ ಸಾಲಿನ ಮೌಲ್ಯಮಾಪನ ವರ್ಷ ಇದೇ ಜುಲೈ 31(Last Date July 31) ರಂದು ಕೊನೆಗೊಳ್ಳಲಿದೆ(IT Returns Filing). ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ರಿಟರ್ನ್ಸ್‌ಗಳನ್ನು ಸಲ್ಲಿಸಬೇಕಾಗಿದೆ. ಶುಕ್ರವಾರ, ಆದಾಯ ತೆರಿಗೆ (IT) ಇಲಾಖೆ ಟ್ವಿಟರ್‌ನಲ್ಲಿ ತೆರಿಗೆದಾರರರು ಕೊನೆಯ ನಿಮಿಷದ ತೊಂದರೆಗಳಿಂದ ತಪ್ಪಿಸಿಕೊಳ್ಳಲು ರಿಟರ್ನ್ಸ್‌ ಸಲ್ಲಿಸುವಂತೆ ಮನವಿ ಮಾಡಿದೆ.

“ನೀವು ಎಷ್ಟು ಬೇಗ IT ರಿಟರ್ನ್ಸ್‌ ಸಲ್ಲಿಸುತ್ತೀರೋ ಅಷ್ಟು ಹೆಚ್ಚು ನೀವು ರೆಲ್ಯಾಕ್ಸ್‌ ಆಗಬಹುದು! IT ರಿಟರ್ನ್ಸ್‌ AY 2022-23 ಯು e-filing ಪೋರ್ಟಲ್ಲ್‌ನಲ್ಲಿ ಲಭ್ಯವಿದೆ. ರಿಟರ್ನ್ಸ್‌ ಫೈಲ್‌ ಮಾಡಲು ನೀವೇ ಮೊದಲಿಗರಾಗಿರಿ ಮತ್ತು ಕೊನೆಯ ನಿಮಿಷದ ಧಾವಂತವನ್ನು ತಪ್ಪಿಸಲು ಈಗಲೇ ರಿಟರ್ನ್ಸ್‌ ಸಲ್ಲಿಸಿ. #FileNow. ದಯವಿಟ್ಟು www.incometax.gov.in ಭೇಟಿ ಕೊಡಿ . #ITR” ಎಂದು ಇನ್‌ಕಮ್‌ ಟ್ಯಾಕ್ಸ್‌ ಇಂಡಿಯಾ ಟ್ವೀಟ್‌ ಮಾಡಿದೆ.

ನೀವು ರಿಟರ್ನ್ಸ್‌ ಸಲ್ಲಿಸುವಾಗ ನಿಮ್ಮ IT ಫಾರ್ಮ್‌ ನಲ್ಲಿ ಕೆಲವು ವಿವರಗಳನ್ನು ಸರಿಯಾಗಿ ನಮೂದಿಸಬೇಕು. ನೀವು ಈ ವಿವರಗಳನ್ನು ಮರೆಮಾಚಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ IT ಇಲಾಖೆಯಿಂದ ನಿಮಗೆ ನೋಟಿಸ್‌ ನೀಡುವ ಅಪಾಯವಿದೆ.

ಹಾಗಾದರೆ ಯಾವ ವಿವಿರಗಳನ್ನು ಮರೆಮಾಚದೇ ಸಲ್ಲಿಸಬೇಕು :

  1. ಆಸ್ತಿ ಖರೀದಿ ಮತ್ತು ಮಾರಾಟ:
    ಏಪ್ರಿಲ್‌ 1, 2021 ರಿಂದ ಮಾರ್ಚ್‌ 31, 2022 ರ ನಡುವೆ ಯಾವುದೇ ಆಸ್ತಿ ಖರೀದಿ ಮತ್ತು ಮಾರಾಟದ ಮಾಹಿತಿಯನ್ನು IT ರಿಟರ್ನ್ಸ್‌ ಫಾರ್ಂ ನ ಕ್ಯಾಪಿಟಲ್‌ ಗೇನ್ಸ್‌ ಕಾಲಂನಲ್ಲಿ ನಮೂದಿಸಲೇಬೇಕು.
  2. ಮನೆ ನವೀಕರಣ:
    ಒಂದು ವೇಳೆ ನೀವು ಮನೆಯನ್ನು ಕಳೆದ ಆರ್ಥಿಕ ವರ್ಷದಲ್ಲಿ ನವೀಕರಿಸಿದ್ದರೆ ಅದನ್ನೂ ಸಹ ಫಾರಂ ನ ‘ಕ್ಯಾಪಿಟಲ್‌ ಗೇನ್‌’ ಕಾಲಂನಲ್ಲಿ ವಿವರಗಳನ್ನು ನೀಡಬೇಕು.
  3. PF ಖಾತೆ ಯ ಮೇಲಿನ ಬಡ್ಡಿ:
    ನಿಮ್ಮ ಭವಿಷ್ಯ ನಿಧಿ(PF) ಖಾತೆಯಲ್ಲಿ ನೀವು 2.5 ಲಕ್ಕಕ್ಕಿಂತ ಅಧಿಕ ಬಡ್ಡಿ ಪಡೆದಿದ್ದರೆ ಅದನ್ನು ಅಗತ್ಯವಾಗಿ ನಮೂದಿಸಲೇಬೇಕಾಗಿದೆ.

ಇದನ್ನೂ ಓದಿ : Check Provident Fund Balance : ಭವಿಷ್ಯ ನಿಧಿ (PF) ಬ್ಯಾಲೆನ್ಸ್‌ ಅನ್ನು ಹೇಗೆಲ್ಲಾ ಚೆಕ್‌ ಮಾಡಬಹುದು ಗೊತ್ತಾ? ಇಲ್ಲಿದೆ 5 ಸರಳ ಮಾರ್ಗಗಳು

ಇದನ್ನೂ ಓದಿ : FD In Post Office : ಪೋಸ್ಟ್‌ ಆಫೀಸ್‌ನಲ್ಲಿ FD ಮಾಡುವುದರಿಂದ ಸಿಗುವ ಪ್ರಯೋಜನಗಳು ನಿಮಗೆ ಗೊತ್ತೇ?

(IT Returns Filing : File IT Returns before July 31to avoid getting notice from tax department)

Comments are closed.