ರಶ್ಮಿಕಾ ಕೈಯಲ್ಲಿದೆ ಸ್ಪೆಶಲ್ ಉಂಗುರ…! ರಿಂಗ್ ನ ವಿಶೇಷತೆ ಬಗ್ಗೆ ಕಿರಿಕ್ ಬೆಡಗಿ ಹೇಳಿದ್ದೇನು ಗೊತ್ತಾ…!!

ಸ್ಯಾಂಡಲ್ ವುಡ್ ನಿಂದ ಜರ್ನಿ ಆರಂಭಿಸಿ ತಮಿಳು,ತೆಲುಗು  ಚಿತ್ರರಂಗ ದಾಟಿ  ಬಾಲಿವುಡ ಅಂಗಳ ತಲುಪಿದ ನಟಿ ರಶ್ಮಿಕಾ ಸ್ಪೆಶಲ್ ಉಂಗುರವೊಂದರ ಜೊತೆ ಇಂಟ್ರಸ್ಟಿಂಗ್ ವಿಚಾರ ಹೇಳಿಕೊಂಡಿದ್ದಾರೆ. ನಟಿಮಣಿ ಕೊಟ್ಟ ಸಿಹಿಸುದ್ದಿಗೆ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇಷ್ಟಕ್ಕೂ ರಶ್ಮಿಕಾ ಕೊಟ್ಟ ಸ್ವೀಟ್ ನ್ಯೂಸ್ ಏನು ಗೊತ್ತಾ?  ಈ ಸ್ಟೋರಿ ಓದಿ.

ಸಿನಿಮಾ ನಟ-ನಟಿಯರ ಅಭಿಮಾನಿಗಳನ್ನು ಸದಾ ಕಾಡುವ ಪ್ರಶ್ನೆ, ತಮ್ಮ ನೆಚ್ಚಿನ ನಟ-ನಟಿ ಯಾರನ್ನು ಪ್ರೀತಿಸುತ್ತಾರೆ? ಯಾರನ್ನು ಮದುವೆಯಾಗುತ್ತಾರೆ? ಎಂಬುದು. ಅವಕಾಶ ಸಿಕ್ಕಾಗಲ್ಲೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಶ್ನೆ ಕೇಳಿ ಉತ್ತರ ಪಡೆಯೋ ಸರ್ಕಸ್ ನಲ್ಲಿರುತ್ತಾರೆ ಫ್ಯಾನ್ಸ್.

ಕೊಡಗಿನ ಕುವರಿ ರಶ್ಮಿಕಾ ಸದ್ಯಕ್ಕೆ ತಮ್ಮ ಕೆರಿಯರ್ ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತಮಿಳು,ತೆಲುಗು,ಹಿಂದಿ ಹೀಗೆ  ಬಹುಭಾಷೆಯಲ್ಲಿ ಚಿತ್ರಗಳಲ್ಲಿ ಅವಕಾಶ ಪಡೆದುಕೊಂಡಿರೋ ರಶ್ಮಿಕಾ ಮುಂಬೈ-ಹೈದ್ರಾಬಾದ್ ಅಂತ ಓಡಾಡಿಕೊಂಡಿದ್ದಾರೆ.

ಇಷ್ಟೆಲ್ಲ ಬ್ಯುಸಿಯಾಗಿದ್ದರೂ ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗಿರೋ ರಶ್ಮಿಕಾ ಮೊನ್ನೆ ಮೊನ್ನೆ ಫೇಸ್ ಬುಕ್ ಲೈವ್ ಬಂದಿದ್ದರು.

ಈ ವೇಳೆ ಅಭಿಮಾನಿಗಳು ನೊರೆಂಟು ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡಿದ್ದಾರೆ. ಅದರಲ್ಲಿ ನೀವು ಯಾರೊಂದಿಗೆ ಡೇಟ್ ಮಾಡುತ್ತೀದ್ದೀರಿ ಎಂಬ ಪ್ರಶ್ನೆ ಹಲವಾರು ಭಾರಿ ರಿಪೀಟ್ ಆಗಿದೆ. ಆದರೆ ಇದಕ್ಕೆ ತಾಳ್ಮೆಯಿಂದಲೇ ಉತ್ತರ ನೀಡಿರೋ ರಶ್ಮಿಕಾ ನಾನು ನನ್ನ ಕೆಲಸದ ಜೊತೆ ಮಾತ್ರ ಡೇಟ್ ಮಾಡುತ್ತಿದ್ದೇನೆ. ನನಗ್ಯಾರೂ ಬಾಯ್ ಪ್ರೆಂಡ್ ಇಲ್ಲ ಎಂದಿದ್ದಾರೆ.

ಹಾಗಿದ್ದರೇ ನಿಮ್ಮ ಕೈಯಲ್ಲಿನ ಉಂಗುರ ಯಾರು ಕೊಟ್ಟಿದ್ದು, ಅದ್ಯಾಕೆ ನಿಮಗೆ ಸ್ಪೆಶಲ್ ಎಂದು ಕೇಳಿದ್ದಾರೆ.   ಈ ಪ್ರಶ್ನೆಗೆ ಖುಷಿ ಖುಷಿಯಾಗಿ ಮುಖ ಕೆಂಪಾಗಿಸಿಕೊಂಡು ಉತ್ತರ ನೀಡಿರೋ ರಶ್ಮಿಕಾ,  ಇದು ನನಗೆ ಅಭಿಮಾನಿಯೊಬ್ಬರು ನೀಡಿದ ಉಂಗುರ. ಎಲ್ಲ ಅಭಿಮಾನಿಗಳ ಪರವಾಗಿ ಇದನ್ನು ಸ್ವೀಕರಿಸಿದ್ದೇನೆ ಎಂದಿದ್ದಾರೆ.

ಅಭಿಮಾನಿಗಳ ಅಭಿಮಾನದ ಸಂಕೇತವಾದ  ಉಂಗುರವನ್ನು  ರಶ್ಮಿಕಾ ಧರಿಸಿದ್ದನ್ನು ಲೈವ್ ನಲ್ಲಿ ಹೇಳಿಕೊಳ್ಳುತ್ತಿದ್ದಂತೆ ಫ್ಯಾನ್ಸ್ ಫುಲ್ ಖುಷಿಯಾಗಿದ್ದು, ನೆಚ್ಚಿನ ನಟಿಯ ಮಾತು ಕೇಳಿ ಸಂಭ್ರಮಿಸುತ್ತಿದ್ದಾರೆ.

Comments are closed.