ಮಲೆಯಾಳಂ ನಟಿ ಮನಗೆದ್ದ ಜ್ಯೂನಿಯರ್ ಚಿರು…! ನನ್ನ ಪ್ರೀತಿಯ ಚುಂಬಕ್ ಎಂಬ ನ್ರಜಿಯಾ ನಜೀಮ್… !!

ಪ್ರತಿನಿತ್ಯ ಹೊಸ ಹೊಸ ತುಂಟಾಟಗಳ ಮೂಲಕ ಅಮ್ಮನ ಮುದ್ದಿನ ಮಗನಾಗಿ ಬೆಳೆಯುತ್ತಿರುವ ನಟಿ ಮೇಘನಾ ರಾಜ್ ಪುತ್ರ ಜ್ಯೂನಿಯರ್ ಚಿರು ಈಗಲೇ ಸಖತ್ ಪಬ್ಲಿಸಿಟಿ ಗಳಿಸಿದ್ದಾನೆ. ಮೊನ್ನೆಯಷ್ಟೇ ಮೇಘನಾ ರಾಜ್ ರಿಲೀಸ್ ಮಾಡಿದ 6 ತಿಂಗಳ ಸಂಭ್ರಮದ ಪೋಟೋ ಸಖತ್ ವೈರಲ್ ಆಗಿದ್ದು, ಮಲೆಯಾಳಂ ನಟಿ ನ್ರಜಿಯಾ ನಾಜಿಮ್ ಪೋಟೋ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.

ಈ ವಿಧಾನಸಭಾ ಕ್ಷೇತ್ರದಲ್ಲಿದೆ ಬರೋಬ್ಬರಿ 14 ‌ಸರಕಾರಿ ಆಸ್ಪತ್ರೆ ! ಕೊರೊನಾ ಸಂಕಷ್ಟದಲ್ಲಿ ನೆನಪಾದ ಮಾಜಿ‌ ಸಚಿವ ರಮಾನಾಥ ರೈ ಸಾಧನೆ ..!

ಅಕ್ಟೋಬರ್ 22 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಪುತ್ರ ಜ್ಯೂನಿಯರ್ ಚಿರು ಹುಟ್ಟುತ್ತಿದ್ದಂತೆ ಎಲ್ಲರ ಪ್ರೀತಿ-ಅಭಿಮಾನಕ್ಕೆ ಪಾತ್ರವಾಗಿದ್ದ. ಮೊನ್ನೆಯಷ್ಟೇ 6 ತಿಂಗಳು ಕಂಪ್ಲೀಟ್ ಮಾಡಿದ ಜ್ಯೂನಿಯರ್ ಚಿರುಗಾಗಿ ಮೇಘನಾ ಮನೆಯಲ್ಲೇ ಚಿಕ್ಕಪಾರ್ಟಿ, ಕೇಕ್ ಕಟ್ಟಿಂಗ್ ಹಾಗೂ ಪೋಟೋಶೂಟ್ ನಡೆಸಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ 135 ಶಿಕ್ಷಕರು ಕೊರೊನಾ ಗೆ ಬಲಿ

ಅಷ್ಟೇ ಅಲ್ಲ ಕಿಂಗ್ ಕಾನ್ಸೆಪ್ಟ್ ನಲ್ಲಿ ನಡೆದ ಈ ಪೋಟೋಶೂಟ್ ನಲ್ಲಿ ಮೊದಲ ಬಾರಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟ ಮಗನ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಮುದ್ದಾದ ಜ್ಯೂನಿಯರ್ ಚಿರು ಪೋಟೋಗಳನ್ನು ಮೇಘನಾ ಹಂಚಿಕೊಳ್ಳುತ್ತಿದ್ದಂತೆ ಮೇಘನಾ ಬೆಸ್ಟ್ ಪ್ರೆಂಡ್ ಹಾಗೂ ನಟಿ ನಜ್ರಿಯಾ ನಾಜಿಮ್ ಈ ಪೋಟೋ ಶೇರ್ ಮಾಡಿಕೊಂಡಿದ್ದು, ಮೈ ಲಿಟ್ಲ್ ಚುಂಬಕ್ ಎಂಬ ಟೈಟಲ್ ನೀಡಿದ್ದಾರೆ.

https://kannada.newsnext.live/breaking/small-screen-kannada-nayananagraj-oximeter-thermometer-monitor/ನ್ರಜಿಯಾ ನಾಜೀಮ್ ಶೇರ್ ಮಾಡಿಕೊಂಡಿರೋ ಸ್ಟೇಟಸ್ ನ್ನು ಮೇಘನಾ ಮತ್ತೆ ಹಂಚಿಕೊಂಡಿದ್ದಾರೆ. ಮೇಘನಾ ಹಾಗೂ ನಜ್ರಿಯಾ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಚಿರು ನಿಧನರಾದಾಗ ಹಾಗೂ ಜ್ಯೂನಿಯರ್ ಚಿರು ಜನಿಸಿದಾಗ ನಜ್ರಿಯಾ ಹಾಗೂ ಅವರ ಪತಿ ಮೇಘನಾ ಭೇಟಿಗೆ ಆಗಮಿಸಿದ್ದರು.

ಚಿರು ನಿಧನದ ನಂತರ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಮೇಘನಾ ರಾಜ್ ಕೂಡ, ತಾನು ಎಲ್ಲವನ್ನು ಎದುರಿಸಿ ಮುನ್ನಡಲೇ ತನ್ನ ಇಬ್ಬರೂ ಸ್ನೇಹಿತೆಯರಾದ ನಜ್ರಿಯಾ ಹಾಗೂ ಅನನ್ಯಾ ಮುಖ್ಯಕಾರಣ. ಅವರೆಲ್ಲರ ಸಹಾಯದಿಂದ ನಾನು ಚೇತರಿಸಿಕೊಂಡೇ ಎಂದಿದ್ದರು.

ಈಗ ಜ್ಯೂನಿಯರ್ ಚಿರು ಪೋಟೋವನ್ನು ಒಂದಿಷ್ಟು ಹಾರ್ಟ್ ಶೇಪ್ ಇಮೋಜಿಗಳ ಜೊತೆ ನಜ್ರಿಯಾ ನಾಜಿಮ್ ಹಂಚಿಕೊಂಡಿದ್ದು, ಇದಕ್ಕೆ ಮೇಘನಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.