ಹೈದರಾಬಾದ್ನಲ್ಲಿ ಪೊಲಿಯೋ ಲಸಿಕೆ ಅಭಿಯಾನ : ಹೊಸ ಕ್ರಾಂತಿ ರಚಿಸಲು ಜಿಲ್ಲಾಡಳಿತ ಸರ್ವಸನದ್ಧ
ಹೈದರಾಬಾದ್: Polio vaccination campaign: ಪೊಲಿಯೋ ಲಸಿಕೆಗಳು ಮಕ್ಕಳ ಪಾಲಿಗೆ ಅಮೃತಕ್ಕೆ ಸಮಾನ. ಈ ಬಾರಿ ಪೋಲಿಯೊ ಲಸಿಕೆ ಅಭಿಯಾನದಲ್ಲಿ ಹೈದರಾಬಾದ್(Hyderabad) ಹೊಸ ಕ್ರಾಂತಿಯನ್ನೇ ಮಾಡಲು ಮುಂದಾಗಿದ್ದು, ಇಂದಿನಿಂದ ಆರಂಭಗೊಂಡಿರುವ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನದಲ್ಲಿ ಐದು ವರ್ಷದ ಒಳಗಿನ ಒಟ್ಟೂ 5,17,238 ಮಕ್ಕಳಿಗೆ ಪೊಲಿಯೋ ಹನಿಗಳನ್ನು ಪಡೆಯಲಿದ್ದಾರೆ.
ಅಕ್ಟೋಬರ್ 15ರವೆಗೆ ಈ ಅಭಿಯಾನ ನಡೆಯಲಿದೆ. ಹೈದರಾಬಾದ್ ಸೇರಿದಂತೆ ತೆಲಂಗಾಣ ರಾಜ್ಯದ ಆರು ಜಿಲ್ಲೆಗಳಲ್ಲಿ ಈ ವಿಶೇಷ ಅಭಿಯಾನ ನಡೆಸಲಾಗುತ್ತಿದೆ.
ಹೈದರಾಬಾದ್ ಜಿಲ್ಲಾಧಿಕಾರಿ ಹರಿ ಚಂದನ ದಾಸರಿ ಈ ವಿಚಾರವಾಗಿ ಮಾತನಾಡಿದ್ದು ಜಿಲ್ಲೆಯಾದ್ಯಂತ 2843 ಕಡೆಗಳಲ್ಲಿ ಪೊಲಿಯೋ ಬೂತ್ ಸ್ಥಾಪಿಸಿದ್ದೇವೆ. ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಈ ಬೂತ್ಗಳು ಕಾರ್ಯನಿರ್ವಹಿಸಲಿವೆ.
Also Read: Karuru Vijay rally : ಕರೂರು ವಿಜಯ್ ರ‍್ಯಾಲಿ ದುರಂತ: ಮೃತರ ಸಂಖ್ಯೆ 39ಕ್ಕೆ ಏರಿಕೆ, ಕೊಲೆ ಯತ್ನ ಪ್ರಕರಣ ದಾಖಲು
ನವಜಾತ ಶಿಶುಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಈ ಕೇಂದ್ರಗಳಲ್ಲಿ ಹನಿಗಳನ್ನು ಹಾಕಲಾಗುತ್ತದೆ. 11,200 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಅಕ್ಟೋಬರ್ 13 ರಿಂದ 15 ರವರೆಗೆ ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೇ ಹೈದರಾಬಾದ್ನ 164 ಕಡೆಗಳಲ್ಲಿ ಹೈ ರಿಸ್ಕ್ ಪ್ರದೇಶ ಎಂದು ಗುರುತು ಮಾಡಲಾಗಿದ್ದು ಈ ಪ್ರದೇಶಗಳಲ್ಲಿ ವಿಶೇಷ ಗಮನ ಹರಿಸಲಿದ್ದೇವೆ. ನಾಲ್ಕು ದಿನಗಳ ಈ ಅಭಿಯಾನದಲ್ಲಿ ಒಟ್ಟು 9.36 ಲಕ್ಷ ಮನೆಗಳು ಒಳಪಡಲಿವೆ ಎಂದು ಹೇಳಿದ್ದಾರೆ.
ಪೊಲಿಯೋ ಎನ್ನುವುದು ಮಕ್ಕಳಿಗೆ ಕಡ್ಡಾಯವಾಗಿ ಹಾಕಬೇಕಾದ ಲಸಿಕೆಯಾಗಿದ್ದು ಭಾರತವು ಪೊಲಿಯೋ ಮುಕ್ತ ದೇಶ ಎಂಬ ಸಾಧನೆಯನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರೂ ತಮ್ಮ ಐದು ವರ್ಷದ ಒಳಗಿನ ಮಕ್ಕಳಿಗೆ ಪೊಲಿಯೋ ಹನಿ ಹಾಕಿಸುವುದು ಕಡ್ಡಾಯವಾಗಿದೆ. ಕರ್ನಾಟಕದಲ್ಲಿಯೂ ಶೀಘ್ರದಲ್ಲಿಯೇ ಪೊಲಿಯೋ ಲಸಿಕೆ ಅಭಿಯಾನ ಆರಂಭಗೊಳ್ಳುವ ಸಾಧ್ಯತೆಯಿದೆ.



