Jambu Savari: ಮೈಸೂರಿನಲ್ಲಿ ಜಂಬೂ ಸವಾರಿ ಮಾದರಿಯಲ್ಲಿ ನಡೆಯಲಿದೆ ಗ್ರಾಮೀಣ ದಸರೆ

ಮೈಸೂರು : Jambu Savari : ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಗೊಂಡಿದೆ. ದಿನ ಒಂದಿಲ್ಲೊಂದು ಕಾರ್ಯಕ್ರಮ ನಡೆಯುತ್ತಿದ್ದು ದಸರಾ ವೈಭವವನ್ನು ಇನ್ನಷ್ಟು ರಂಗೇರಿಸಿದೆ. ಇನ್ನು ಮೈಸೂರು ದಸರಾ ಭಾಗವಾಗಿ ನಾಳೆ ಗ್ರಾಮೀಣ ದಸರಾ ಆಚರಣೆ ನಡೆಯಲಿದೆ. ದಸರಾ ಮಹೋತ್ಸವದಲ್ಲಿ ಈ ಕಾರ್ಯಕ್ರಮದ ಮೂಲಕ ಶಾಸಕ ಜಿ.ಡಿ ದೇವೆಗೌಡ ಹೊಸ ಮುನ್ನುಡಿ ಬರೆದಿದ್ದು, ಜಂಬೂ ಸವಾರಿ ಮಾದರಿಯಲ್ಲಿಯೇ ಗ್ರಾಮೀಣ ದಸರೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಾಳೆ ಅರಮನೆಯಿಂದ ಎರಡು ಆನೆಗಳು ಗ್ರಾಮೀಣ ದಸರೆಯಲ್ಲಿ ಭಾಗಿಯಾಗಲಿದೆ. ಶಾಸಕ ಜಿಟಿ ದೇವೇಗೌಡ ನೇತೃತ್ವದಲ್ಲಿ ಮೈಸೂರು ತಾಲ್ಲೂಕಿನ ಗ್ರಾಮಗಳಲ್ಲಿ ಈ ಗ್ರಾಮೀಣ ದಸರಾ ಕಾರ್ಯಕ್ರಮ ನಡೆಯಲಿದೆ. ಚಾಮುಂಡೇಶ್ವರಿ ಕ್ಷೇತ್ರದ ದಾರಿಪುರದಿಂದ ಜಯಪುರದ ವರೆಗೆ ದಸರಾ ಮೆರವಣಿಗೆಯು ನಡೆಯಲಿದೆ. ಇನ್ನು ವಿಶೇಷ ಅಂದ್ರೆ ಸಾಂಸ್ಕೃತಿಕ ಕಲಾ ತಂಡಗಳು, ವಾದ್ಯಗೋಷ್ಠಿಗಳು ಇದರಲ್ಲಿ ಭಾಗಿಯಾಗಲಿದೆ. ಮೆರವಣಿಗೆಯಲ್ಲಿ ಗಜಪಡೆ ಅಶ್ವ ಪಡೆಯೂ ಭಾಗಿಯಾಗಲಿದೆ.

ಗ್ರಾಮೀಣ ದಸರೆಗೆ ಎರಡು ಆನೆಗಳನ್ನ ಕೇಳಿದ್ದೇವೆ ಎಂದು ಶಾಸಕ ಜಿ.ಟಿ ದೇವೆಗೌಡ ಹೇಳಿದ್ದಾರೆ. ನಾಳೆ ಆನೆಗಳನ್ನ ಕಳುಹಿಸಿ ಕೊಡುತ್ತಾರೆ.ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆಗೆ ಬರಲಿದ್ದಾರೆ ಎಂದು ಜಿಟಿಡಿ ಮಾಹಿತಿ ನೀಡಿದ್ದಾರೆ. ನಗರ ದಸರೆಯಂತೆ ಗ್ರಾಮೀಣ ಭಾಗದಲ್ಲೂ ದಸರೆ ಆಚರಣೆ ಮಾಡೋಣ ಅಂತ ನಿನ್ನೆಯಷ್ಟೇ ಪ್ಲಾನ್ ಮಾಡಿಕೊಂಡಿದ್ದೇವೆ. ಸಚಿವರು ಸೇರಿದಂತೆ ಹಲವರು ನಾಳಿನ ಗ್ರಾಮೀಣ ದಸರೆಯಲ್ಲಿ ಭಾಗಿಯಾಗಲಿದ್ದೇವೆ ಎಂದು ಮೈಸೂರಿನಲ್ಲಿ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.

ಇನ್ನು ಅದ್ದೂರಿ ದಸರಾದಲ್ಲಿ ಹಲವು ಕಾರ್ಯಕ್ರಮಗಳನ್ನು ರದ್ದು ಮಾಡಿರುವ ವಿಚಾರದಲ್ಲಿ ಶಾಸಕ ಜಿಟಿ ದೇವೇಗೌಡ ಜಿಲ್ಲಾಡಳಿತವನ್ನು ಸಮರ್ಥಿಸಿಕೊಂಡಿದ್ದಾರೆ. ಸಚಿವರಿಗೆ ದಸರಾ ಕಾರ್ಯಕ್ರಮಗಳನ್ನ ಮತ್ತಷ್ಟು ಚುರುಕುಗೊಳಿಸಲು ಸಲಹೆ ನೀಡುತ್ತೇನೆ. ಈಗಾಗಲೇ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ.ಪ್ರವಾಸಿಗರ ಸಂಖ್ಯೆ ವಿರಳವಿದ್ದರೂ ಮುಂದಿನ ದಿನಗಳಲ್ಲಿ ಹೆಚ್ಚಾಗಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಈ ಬಾರಿಯೂ ದಸರಾ ಯಶಸ್ವಿಯಾಗಿ ನಡೆಸಲು ನಮ್ಮೆಲ್ಲರ ಸಹಕಾರವಿದೆ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.

ಇದನ್ನು ಓದಿ : Mangalore’s Malali Masjid:ಮಂಗಳೂರಿನ ಮಳಲಿ‌ ಮಸೀದಿ ವರ್ಸಸ್ ಹಿಂದೂ ದೇವಾಲಯ ವಿವಾದ,ಅಕ್ಟೋಬರ್ 17ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್

ಇದನ್ನೂ ಓದಿ : BCCI Election : ಅಕ್ಟೋಬರ್ 18ಕ್ಕೆ ಬಿಸಿಸಿಐ ಚುನಾವಣೆ; ಅಮಿತ್ ಶಾ ಮಗ ಅಧ್ಯಕ್ಷರಾದ್ರೆ ದಾದಾ ಕಥೆಯೇನು ?

Rural Dussehra will be held in Mysore in Jambu Savari style

Comments are closed.