ಬೆಂಗಳೂರು : IND vs NED world cup 2023 : ಭಾರತ ನೆದರ್‌ಲ್ಯಾಂಡ್ (india Vs Netherland) ವಿರುದ್ದದ ವಿಶ್ವಕಪ್ ಅಂತಿಮ ಲೀಗ್ ಪಂದ್ಯದಲ್ಲಿ ಭರ್ಜರಿ 160 ರನ್‌ಗಳ ಗೆಲುವು ದಾಖಲಿಸಿದೆ. ಭಾರತದ ಇಬ್ಬರು ಆಟಗಾರರ ಶತಕ ಹಾಗೂ ಐದು ಆಟಗಾರರು ಅರ್ಧ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಭಾರತ ಅಜೇಯವಾಗಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದ್ದು, ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ (Rohit Sharma) ಹಾಗೂ ಶುಭಮನ್ ಗಿಲ್ (Shubman Gill) ಉತ್ತಮ ಆರಂಭ ಒದಗಿಸಿದ್ರು. ಈ ಜೋಡಿ ಶತಕದ ಜೊತೆಯಾಟ ಆಡುವ ಮೂಲಕ ಭಾರತ ತಂಡ ದೊಡ್ಡ ಮೊತ್ತಕ್ಕೇರಿಸಲು ಸಹಕಾರಿಯಾದ್ರು.

ಭಾರತ ತಂಡ 100 ರನ್ ಗಳಿಸಿದ್ದ ಹೊತ್ತಲೇ ಶುಭಮನ್ ಗಿಲ್ ವಿಕೆಟ್ ಒಪ್ಪಿಸಿದ್ರು. ಆಗ ಶುಭಮನ್ ಗಿಲ್ 35 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಶುಭಮನ್ ಗಿಲ್ ಔಟಾದ ಬೆನ್ನಲ್ಲೇ ವಿರಾಟ್ ಕೊಹ್ಲಿ ಜೊತೆಯಾದ ರೋಹಿತ್ ಶರ್ಮಾ ಮತ್ತೆ ಇನ್ನಿಂಗ್ಸ್ ಕಟ್ಟಲು ಮುಂದಾದ್ರು. ಆದರೆ 54 ಎಸೆತಗಳಲ್ಲಿ 61 ರನ್ ಗಳಿಸಿ ಆಡುತ್ತಿದ್ದ ವೇಳೆಯಲ್ಲಿ ವಿಕೆಟ್ ಒಪ್ಪಿಸಿದ್ದಾರೆ.
ಇದನ್ನೂ ಓದಿ : ವಿರಾಟ್ ಕೊಹ್ಲಿ ಶತಕ ವಿಶ್ವದಾಖಲೆ : ತನ್ನ ದಾಖಲೆ ಸರಿಗಟ್ಟಿದ ಕೊಹ್ಲಿ ಬಗ್ಗೆ ಸಚಿನ್ ತೆಂಡೂಲ್ಕರ್ ಹೀಗೆ ಹೇಳಿದ್ಯಾಕೆ ?
ವಿರಾಟ್ ಕೊಹ್ಲಿ ಹಾಗೂ ಶ್ರೈಯಸ್ ಅಯ್ಯರ್ ಉತ್ತಮ ಜೊತೆ ಆಟ ವಾಡಿದ್ದಾರೆ. ವಿರಾಟ್ ಕೊಹ್ಲಿ 56 ಎಸೆತಗಳಲ್ಲಿ 51 ರನ್‌ಗಳಿಸಿದ್ದ ವೇಳೆಯಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದ್ರು. ಆಗ ಕ್ರೀಸ್‌ಗೆ ಬಂದ ಕನ್ನಡಿಗ ಕೆಎಲ್ ರಾಹುಲ್ ಸ್ಪೋಟಕ ಆಟಕ್ಕೆ ಮನ ಮಾಡಿದ್ರು. ಕೆಎಲ್ ರಾಹುಲ್ ಕೇವಲ 64 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 10 ಬೌಂಡರಿ ನೆರವಿನಿಂದ ಬರೋಬ್ಬರಿ 102 ರನ್ ಗಳಿಸಿ ಔಟಾದ್ರು.

ಶ್ರೇಯಸ್ ಅಯ್ಯರ್ ಕೂಡ ಶತಕ ಬಾರಿಸಿದ್ದು, 94 ಎಸೆತಗಳಲ್ಲಿ ಬರೋಬ್ಬರಿ 128 ರನ್ ಗಳಿಸಿ ಅಜೇಯವಾಗಿ ಉಳಿದಿದ್ದಾರೆ. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 410 ರನ್ ಗಳಿಸಿದೆ. ಭಾರತ ತಂಡ ಪರ ಶ್ರೇಯಸ್ ಅಯ್ಯರ್ ಹಾಗೂ ರಾಹುಲ್ ಶತಕ ಸಿಡಿಸಿದ್ರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಅರ್ಧ ಶತಕ ಸಿಡಿಸಿದ್ದಾರೆ.
ಇದನ್ನೂ ಓದಿ : ಒಂದೇ ಒಂದು ಎಸೆತ ಎದುರಿಸದೇ ಔಟ್ ಆದ ಅಂಜಲೋ ಮ್ಯಾಥ್ಯೂಸ್ ! ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಟೈಮ್‌ಔಟ್
ಭಾರತ ನೀಡಿದ್ದ ದಾಖಲೆಯ ಮೊತ್ತವನ್ನು ಬೆನ್ನತ್ತಲು ಹೊರಟ ನೆದರ್ ಲ್ಯಾಂಡ್ ತಂಡಕ್ಕೆ ಆರಂಭೀಕ ಆಘಾತ ಎದುರಾಗಿತ್ತು. ವೆಸ್ಲಿ ಬ್ಯಾರೆಸಿ ಕೇವಲ ೪ರನ್ ಗಳಿಗೆ ವಿಕೆಟ್ ಒಪ್ಪಿಸಿದ್ರು. ನಂತರ ಮ್ಯಾಕ್ಸ್ ಕ್ಲೌಡ್ ಹಾಗೂ ಕಾಲಿನ್ ಮಕರ್ಮನ್ ಉತ್ತಮ ಜೊತೆಯಾಟದ ಭರವಸೆ ನೀಡಿದ್ದರು. ಆದರೆ ಭಾರತದ ಸ್ಪಿನ್ ಬೌಲರ್‌ಗಳಾದ ರವೀಂದ್ರ ಜಡೇಜಾ ಹಾಗೂ ಕುಲದೀಪ್ ಯಾದವ್ ಅವಕಾಶವನ್ನೇ ನೀಡಲಿಲ್ಲ.
ನೆದರ್ ಲ್ಯಾಂಡ್ ತಂಡದ ಪರ ತೇಜ ನಿಡಮನೂರು 35 ಎಸೆತಗಲ್ಲಿ ಅರ್ಧ ಶತಕ ಬಾರಿಸಿದ್ದಾರೆ. ಜೊತೆಗೆ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ೮೦ ಎಸೆತಗಳಲ್ಲಿ ೪೫ ರನ್ ಹೊರತುಪಡಿಸಿ ಉಳಿದ ಯಾವ ಆಟಗಾರರು ಸ್ಥಿರ ಆಟದ ಪ್ರದರ್ಶನವನ್ನು ನೀಡಿಲ್ಲ. ಜಡೇಜಾ ಯಾವದ್ ಬೆನ್ನಲ್ಲೇ ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಬೌಲಿಂಗ್ ಆರ್ಭಟ ಮುಂದುವರಿಸಿದ್ದರು.
ಇದನ್ನೂ ಓದಿ : ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತ್ತುಗೊಳಿಸಿದ ಐಸಿಸಿ : ಅನಿಶ್ಚಿತತೆಯಲ್ಲಿ T20 ವಿಶ್ವಕಪ್ ಭವಿಷ್ಯ
ಅಂತಿಮವಾಗಿ ನೆದರ್‌ಲ್ಯಾಂಡ್ ತಂಡ 47.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 259 ರನ್ ಬಾರಿಸಿದ್ದಾರೆ. ಭಾರತ ತಂಡ ಪರ ಮೊಹಮ್ಮದ್ ಸಿರಾಜ್, ಜಸ್ಪ್ರಿತ್ ಬೂಮ್ರಾ, ರವೀದ್ರ ಜಡೇಜಾ, ಕುಲದೀಪ್ ಯಾದವ್ ತಲಾ 2 ವಿಕೆಟ್ ಹಾಗೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.
IND vs NED world cup 2023 world record win for India against Netherlands, India will face New Zealand in the semi-finals