ಶುಕ್ರವಾರ, ಜೂನ್ 6, 2025
HomeSportsCricketPBKS vs MI Punjab : ಐಪಿಎಲ್‌ 2025 ಫೈನಲ್ ಖುಷಿಯಲ್ಲಿದ್ದ ಶ್ರೇಯಸ್‌ ಅಯ್ಯರ್‌, ಪಂಜಾಬ್‌...

PBKS vs MI Punjab : ಐಪಿಎಲ್‌ 2025 ಫೈನಲ್ ಖುಷಿಯಲ್ಲಿದ್ದ ಶ್ರೇಯಸ್‌ ಅಯ್ಯರ್‌, ಪಂಜಾಬ್‌ ತಂಡಕ್ಕೆ ಬಿಸಿಸಿಐ ಶಾಕ್‌

ಪಂಜಾಬ್ ಕಿಂಗ್ಸ್ (PBKS) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಅಹಮದಾಬಾದ್‌ನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ನೇತೃತ್ವದ ಪಂಜಾಬ್‌ ಕಿಂಗ್ಸ್‌ ತಂಡ ಮುಂಬೈ ಇಂಡಿಯನ್ಸ್‌ಗೆ ಸೋಲಿನ ರುಚಿ ತೋರಿಸಿದೆ. ಜೂನ್‌ 3ರಂದು ನಡೆಯುವ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ದ ಐಪಿಎಲ್‌ ಟ್ರೋಫಿಗಾಗಿ ಪಂಜಾಬ್‌ ಸೆಣೆಸಾಡಲಿದೆ.

- Advertisement -

PBKS vs MI IPL 2025 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪ್ರೀತಿ ಜಿಂಟಾ (Preity Zinta) ಮಾಲಿಕತ್ವದ ಪಂಜಾಬ್‌ ಕಿಂಗ್ಸ್‌ ತಂಡ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ (IPL 2025 Qualifier Match) ಮುಂಬೈ ತಂಡವನ್ನು ಸೋಲಿಸಿದ ಸಂಭ್ರಮದಲ್ಲಿರುವ ಪಂಜಾಬ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಹಾಗೂ ಮುಂಬೈ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಗೆ ಬಿಸಿಸಿಐ (BCCI) ಶಾಕ್‌ ಕೊಟ್ಟಿದೆ.

ಎಡೆಬಿಡದೆ ಸುರಿದ ಬಾರೀ ಮಳೆಯ ನಡುವಲ್ಲೇ ಐಪಿಎಲ್‌ 2025 ಎರಡನೇ ಕ್ವಾಲಿಫೈಯರ್‌ ಪಂದ್ಯ ರಾತ್ರಿ 9.45ಕ್ಕೆ ಆರಂಭಗೊಂಡಿತ್ತು. ಪಂಜಾಬ್ ಕಿಂಗ್ಸ್ (PBKS) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಅಹಮದಾಬಾದ್‌ನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ನೇತೃತ್ವದ ಪಂಜಾಬ್‌ ಕಿಂಗ್ಸ್‌ ತಂಡ ಮುಂಬೈ ಇಂಡಿಯನ್ಸ್‌ಗೆ ಸೋಲಿನ ರುಚಿ ತೋರಿಸಿದೆ. ಜೂನ್‌ 3ರಂದು ನಡೆಯುವ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ದ ಐಪಿಎಲ್‌ ಟ್ರೋಫಿಗಾಗಿ ಪಂಜಾಬ್‌ ಸೆಣೆಸಾಡಲಿದೆ.

PBKS vs MI Punjab Kings to reach IPL 2025 final BCCI Fined Hardik Pandya, Shreyas Iyer

ಕ್ವಾಲಿಫೈಯರ್ 2 ಪಂದ್ಯದ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್ ಪಾಂಡ್ಯ ಅವರ ವಿರುದ್ದ ನಿಧಾನಗತಿಯ ಬೌಲಿಂಗ್‌ ನಡೆಸಿದ ಕಾರಣಕ್ಕೆ ಬಾರೀ ದಂಡ ವಿಧಿಸಿದೆ.

ಇನ್ನು ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಮುಂಬೈ ಇಂಡಿಯನ್ಸ್‌ ವಿರುದ್ದದ ಪಂದ್ಯದ ನಂತರ ಆಟಗಾರ ಶಶಾಂಕ್‌ ಸಿಂಗ್‌ ಅವರನ್ನು ನಿಂಧಿಸಿದ್ದರು. ಅಲ್ಲದೇ ಓವರ್‌ ದರ ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು. ಹೀಗಾಗಿ ಬಿಸಿಸಿಐ ಶ್ರೇಯಸ್‌ ಅಯ್ಯರ್‌ಗೆ ₹24 ಲಕ್ಷ ದಂಡ ವಿಧಿಸಿದೆ. ಅಲ್ಲದೇ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ತಂಡದ ಉಳಿದ ಆಟಗಾರರಿಗೆ ತಲಾ ₹6 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ 25%, ಯಾವುದು ಕಡಿಮೆಯೋ ಅದು ದಂಡ ಎಂದು ಪರಿಗಣಿಸಲಾಗುತ್ತದೆ.

Also Read : ಈ ಸಲ ಕಪ್‌ ನಮ್ದೆ..! ಐಪಿಎಲ್‌ನಲ್ಲಿ ಆರ್‌ಸಿಬಿ 4ನೇ ಬಾರಿಗೆ ಫೈನಲ್‌ ಎಂಟ್ರಿ : IPL 2025ನಲ್ಲಿ ಹೇಗಿತ್ತು RCB ಪಯಣ

ಕ್ವಾಲಿಫೈಯರ್‌ ಪಂದ್ಯದಲ್ಲಿ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಭಾರೀ ಹೊಡೆದ ಬಿದ್ದಿದೆ. ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ₹30 ಲಕ್ಷ ದಂಡ ವಿಧಿಸಲಾಗಿದೆ. ಅಲ್ಲದೇ ಪ್ರತಿಯೊಬ್ಬ ಸದಸ್ಯರಿಗೂ ತಲಾ ₹12 ಲಕ್ಷ ಅಥವಾ ಅವರ ಶುಲ್ಕದ 50% ದಂಡ ವಿಧಿಸಲಾಗಿದೆ.

PBKS vs MI Punjab Kings to reach IPL 2025 final BCCI Fined Hardik Pandya, Shreyas Iyer

ಕಳೆದ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಪಂದ್ಯಗಳ ಅಮಾನತು ಶಿಕ್ಷೆಯನ್ನು ಅನುಭವಿಸಿದ್ದರು. ಆದರೆ ಈ ಬಾರಿಯ ಐಪಿಎಲ್‌ 2025ರಲ್ಲಿ ನಿಯಮದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿತ್ತು. ಈ ಭಾರಿ ಅಮಾನತು ಬದಲು ನಿಧಾನಗತಿಯ ಬೌಲಿಂಗ್‌ಗಾಗಿ ದಂಡ ಹಾಗೂ ಡಿಮೆರಿಟ್‌ ಅಂಕಗಳನ್ನು ನೀಡಲಾಗುತ್ತದೆ. ಶ್ರೇಯಸ್‌ ಅಯ್ಯರ್‌ ನೇತೃತ್ವದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಕಳೆದ ಬಾರಿಯ ಐಪಿಎಲ್‌ 2024ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಬಾರಿ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನೆಡೆಸುತ್ತಿದ್ದು, ಪಂಜಾಬ್‌ ತಂಡ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.

Also Read : KL Rahul : ಐಪಿಎಲ್‌ನಲ್ಲಿ ಶತಕ : 2026 ಟಿ20 ವಿಶ್ವಕಪ್‌ ಆಡ್ತಾರೆ ಕೆಎಲ್‌ ರಾಹುಲ್‌

ಪಂಜಾಬ್ ಕಿಂಗ್ಸ್‌ ತಂಡ ಜೂನ್ 3 ರಂದು ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಇದುವರೆಗೂ ಐಪಿಎಲ್‌ ಪ್ರಶಸ್ತಿ ಗೆದ್ದಿಲ್ಲ. ಬೆಂಗಳೂರ ತಂಡದ ಅಭಿಮಾನಿಗಳು ಈ ಬಾರಿ ಕಪ್‌ ನಮ್ಡೆ ಅಂತಿದ್ದಾರೆ.

PBKS vs MI Punjab Kings to reach IPL 2025 final: BCCI Fined Hardik Pandya, Shreyas Iyer

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular