ವೈದ್ಯಕೀಯ ಉಪಕರಣ ಖರೀದಿ : ಉಡುಪಿ ವ್ಯಕ್ತಿಗೆ ₹1.82 ಲಕ್ಷ ಆನ್‌ಲೈನ್ ವಂಚನೆ

Udupi online Cheating : ಉಡುಪಿ: ವೈದ್ಯಕೀಯ ಉಪಕರಣಗಳನ್ನು ಮಾರಾಟ ಮಾಡುವುದಾಗಿ ನಂಬಿಸಿ ಉಡುಪಿಯ ವ್ಯಕ್ತಿಯೊಬ್ಬರಿಗೆ 1.82 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಉಡುಪಿಯ ಸಾದಿಕ್ ಅಬ್ಬು ಹಾಜಿ (49 ವರ್ಷ) ಎಂಬವರೇ ಆನ್‌ಲೈನ್ ವಂಚನೆಗೆ ಒಳಗಾದವರು. ಹಾಜಿ ಅವರಿಗೆ ಜನವರಿ 2025 ರಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು.
ತಮ್ಮ ವಾಟ್ಸಪ್ ನಂಬರ್‌ಗೆ ಮೆಡಿಕಲ್ ಇಕ್ವಿಪ್‌ಮೆಂಟ್‌ನ ವಿವರಗಳನ್ನು ಕಳುಹಿಸಲು ಆರಂಭಿಸಿದ್ದರು. ದಿಕ್ ಅಬ್ಬು ಹಾಜಿ ಅವರು ಈ ಅಪರಿಚಿತ ವ್ಯಕ್ತಿಗೆ ಕರೆ ಮಾಡಿದ್ದಾರೆ.
ಆತನು ದೆಹಲಿಯಲ್ಲಿರುವ ‘ಸುರೇನಾ ಹೆಲ್ತ್ ಕೇರ್’ ಅಂಗಡಿಯ ಮಾಲಿಕನಾಗಿದ್ದು, ವೈದ್ಯಕೀಯ ಉಪಕರಣಗಳನ್ನು ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ.
ಇದನ್ನೂ ಓದಿ : ಕೋಟ : ಇಸ್ಪೀಟ್ ಅಡ್ಡೆ ಮೇಲೆ ದಾಳಿ, 6 ಮಂದಿ ಅರೆಸ್ಟ್
ಇದನ್ನು ನಂಬಿದ ಸಾದಿಕ್ ಅಬ್ಬು ಹಾಜಿ ಅವರು ‘CPAP’ (ಕಂಟಿನ್ಯೂಯಸ್ ಪಾಸಿಟಿವ್ ಏರ್‌ವೇ ಪ್ರೆಷರ್) ಎಂಬ ಎರಡು ಮೆಷಿನ್‌ಗಳನ್ನು ಖರೀದಿಗೆ ಮುಂದಾಗಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ನಂಬಿ ಮೊದಲ ಕಂತಿನಲ್ಲಿ ₹80,000 ಹಣವನ್ನು NEFT ಮೂಲಕ ವರ್ಗಾಯಿಸಿದ್ದಾರೆ.
ಆದರೆ ಹಣ ಪಡೆದ ನಂತರದಲ್ಲಿ ಅಪರಿಚಿತ ವ್ಯಕ್ತಿಯು ಎರಡು CPAP ಮೆಷಿನ್‌ಗಳನ್ನು ಸಾದಿಕ್ ಅಬ್ಬು ಹಾಜಿ ಅವರಿಗೆ ಕಳುಹಿಸಿಕೊಟ್ಟಿದ್ದಾನೆ. ಮೊದಲ ವ್ಯವಹಾರ ಯಶಸ್ವಿದ ನಂತರ ಹೊಸ (refurbished) ಎರಡು CPAP ಯಂತ್ರಗಳನ್ನು ಖರೀದಿಸಲು ಮುಂದಾಗಿದ್ದಾರೆ.
ಜುಲೈ 7 ರಂದು ಅಪರಿಚಿತ ವ್ಯಕ್ತಿಯ ಖಾತೆಗೆ 1.02 ಲಕ್ಷ ರೂಪಾಯಿಯನ್ನು ವರ್ಗಾಯಿಸಿದ್ದಾರೆ. ಆದರೆ ಅಪರಿಚಿತ ವ್ಯಕ್ತಿಯು ವೈದ್ಯಕೀಯ ಉಪಕರಣವನ್ನು ಕಳುಹಿಸಿಲ್ಲ. ಅಲ್ಲದೇ ಹಣವನ್ನು ವಾಪಾಸ್ ನೀಡದೆ ವಂಚಿಸಿದ್ದಾನೆ.
ತಾನು ಆನ್‌ಲೈನ್ ಮೂಲಕ ವಂಚನೆಗೆ ಒಳಗಾಗಿರುವುದು ತಿಳಿಯುತ್ತಿದ್ದಂತೆಯೇ ಸಾದಿಕ್ ಅಬ್ಬು ಹಾಜಿ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ : Exclusive : ಪರಶುರಾಮ ವಿವಾದ inside Story : ನಿಜಕ್ಕೂ ಅವ್ಯವಹಾರ ನಡೆದಿದ್ಯಾ ?
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಆನ್‌ಲೈನ್ ಮೂಲಕ ವಂಚನೆ ಪ್ರಕರಣ ಹೆಚ್ಚುತ್ತಿದ್ದರೂ ಕೂಡ ಜನರು ಮಾತ್ರ ಬುದ್ದಿ ಕಲಿಯದೇ ಇರುವುದು ಮಾತ್ರ ದುರಂತ.
Udupi Medical equipment purchase 1 lakh 82 thousand rupees online Cheating Kannada News



