ಕರ್ನಾಟಕದಲ್ಲಿ ಮತ್ತೆ ದಲಿತ ಸಿಎಂ ಕೂಗು; ಯಾವ ಸಮುದಾಯಕ್ಕೆ ಎಷ್ಟು ಬಾರಿ ಅಧಿಕಾರ ?

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಈ ನಡುವಲ್ಲೇ ದಲಿತ ಸಿಎಂ (Dalit CM demand) ಕೂಗು ಬಲವಾಗಿ ಕೇಳಿಬಂದಿದೆ.

ಕರ್ನಾಟಕದಲ್ಲಿ ಇದುವರೆಗೂ ದಲಿತ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರ ಹೆಸರು ಹಲವು ಬಾರಿ ಪ್ರಸ್ತಾಪಗೊಂಡಿದ್ದರೂ ಕೂಡ ಅವರಿಗೆ ಅವಕಾಶ ಸಿಕ್ಕಿಲ್ಲ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ವರ್ಷ ಕಳೆದಿದೆ. ಡಿಕೆ ಶಿವಕುಮಾರ್‌ ಹೈಕಮಾಂಡ್‌ ಮಟ್ಟದಲ್ಲಿ ಸಿಎಂ ಹುದ್ದೆಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದಲಿತ ಸಿಎಂ ಅಸ್ತ್ರ ಮೊಳಗಿಸಲಾಗಿದೆ.

ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ನಡುವೆ ಪೈಪೋಟಿ ಜೋರಾದ್ರೆ ಖಂಡಿತವಾಗಿಯೂ ಮೂರನೇಯವರಿಗೆ ಲಾಭವಾಗೋದು ಖಚಿತ. ಒಂದೊಮ್ಮೆ ಮಲ್ಲಿಕಾರ್ಜುನ ಖರ್ಗೆ ಅವರಿ ಮುಖ್ಯಮಂತ್ರಿ ಹುದ್ದೆಗೆ ಏರುವುದಾದ್ರೆ ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಕೂಡ ಬೆಂಬಲ ಕೊಡಬಹುದು.

ಕರ್ನಾಟಕ ಸಿಎಂ : ಯಾವ ಸಮುದಾಯಕ್ಕೆ ಎಷ್ಟು ಬಾರಿ ?

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರಾಬಲ್ಯ ಮೆರೆದಿವೆ. ಹಾಗಾದ್ರೆ ಯಾವ ಸಮುದಾಯದವರು ಎಷ್ಟು ಬಾರಿ ಸಿಎಂ ಆಗಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಲಿಂಗಾಯತ ಸಮುದಾಯ: ಲಿಂಗಾಯತರು ಅತಿ ಹೆಚ್ಚು ಬಾರಿ, ಅಂದರೆ ಸುಮಾರು 14 ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ.

ಒಕ್ಕಲಿಗ ಸಮುದಾಯ: ಕರ್ನಾಟಕದಲ್ಲಿ ಒಟ್ಟು 8 ಬಾರಿ ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿ ಸ್ಥಾನ ಹುದ್ದೆ ಅಲಂಕರಿಸಿದ್ದಾರೆ.

ಇತರ ಸಮುದಾಯಗಳು: ಬ್ರಾಹ್ಮಣ, ಕುರುಬ, ಅರಸು, ದೇವಾಡಿಗ, ರಜಪೂತ ಮತ್ತು ಈಡಿಗ ಸಮುದಾಯದ ನಾಯಕರು ಕೂಡ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ದೇವರಾಜ ಅರಸು ಅವರು ಹಿಂದುಳಿದ ವರ್ಗದ ಮೊದಲ ಮುಖ್ಯಮಂತ್ರಿಯಾಗಿದ್ದರು, ಹಾಗೂ ಸಿದ್ದರಾಮಯ್ಯನವರು ಕುರುಬ ಸಮುದಾಯದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

ಕರ್ನಾಟಕದಲ್ಲಿ ದಲಿತ ಸಿಎಂ ಆಗ್ತಾರಾ ?

ರಾಜ್ಯದಲ್ಲಿ ‘ದಲಿತ ಸಿಎಂ’ ಆಗಬೇಕು ಎಂಬ ಕೂಗು ದಶಕಗಳಿಂದ ಕೇಳಿ ಬರುತ್ತಿದೆ ಮತ್ತು ಅದು ಆಗಾಗ್ಗೆ ಚರ್ಚೆಗೆ ಬರುತ್ತದೆ. ಪ್ರಸ್ತುತ ರಾಜಕೀಯ ವಲಯದಲ್ಲೂ ಈ ಚರ್ಚೆ ಜೀವಂತವಾಗಿದೆ.

ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ದಲಿತ ನಾಯಕರು ದಲಿತ ಸಿಎಂ ಕುರಿತು ಬಹಿರಂತ ಹೇಳಿಕೆ ನೀಡಿದ್ದಾರೆ. ತಮ್ಮ ಸಮುದಾಯಕ್ಕೆ ಅವಕಾಶ ಸಿಗಬೇಕೆಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ದಲಿತ ಸಿಎಂ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಡಿಕೆ ಶಿವಕುಮಾರ್‌ ಒಂದು ಬಾರಿಯಾದ್ರೂ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿರುವ ಈ ಇಬ್ಬರೂ ಪ್ರಬಲ ನಾಯಕರ ನಡುವೆ ಅಧಿಕಾರಕ್ಕಾಗಿ ಆಂತರಿಕ ಪೈಪೋಟಿ ಇದ್ದು, ಮೂರನೇ ವ್ಯಕ್ತಿಗೆ ಸುಲಭವಾಗಿ ಅವಕಾಶ ನೀಡುವ ಸಾಧ್ಯತೆಗಳು ಸದ್ಯಕ್ಕಿಲ್ಲ.

ದಲಿತ ಸಮುದಾಯದ ನಾಯಕರ ಬೇಡಿಕೆಗಳು ಮತ್ತು ಹೈಕಮಾಂಡ್‌ನ ಒತ್ತಡಗಳು ಭವಿಷ್ಯದಲ್ಲಿ ಯಾವ ತಿರುವು ಪಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Also Read : ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷಗಾಧಿಗೆ ಪೈಪೋಟಿ

ಕರ್ನಾಟಕದ ಮುಖ್ಯಮಂತ್ರಿಗಳು :

ಕರ್ನಾಟಕ ರಾಜ್ಯವು ಮೈಸೂರು ರಾಜ್ಯವಾಗಿ ರೂಪುಗೊಂಡ ನಂತರ (1947) ದಿಂದ ಇಲ್ಲಿಯ ವರೆಗೆ ಹಲವು ಮುಖ್ಯಮಂತ್ರಿಗಳನ್ನು ಕಂಡಿದೆ. ಕೆಲವು ಮುಖ್ಯಮಂತ್ರಿಗಳು ಒಂದಕ್ಕಿಂತ ಹೆಚ್ಚು ಬಾರಿ ಅಧಿಕಾರ ನಡೆಸಿದ್ದಾರೆ.

ನಾಲ್ಕು ಬಾರಿ ಮುಖ್ಯಮಂತ್ರಿಯಾದವರು:

  • ಬಿ. ಎಸ್. ಯಡಿಯೂರಪ್ಪ: ಬಿಜೆಪಿಯ ಹಿರಿಯ ನಾಯಕರು. ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾದ ದಾಖಲೆ ಹೊಂದಿದ್ದಾರೆ.
  • ಮೂರು ಬಾರಿ ಮುಖ್ಯಮಂತ್ರಿಯಾದವರು:
  • ರಾಮಕೃಷ್ಣ ಹೆಗಡೆ: ಜನತಾ ಪಕ್ಷದ ನಾಯಕರಾಗಿದ್ದ ಇವರು, ಮೂರು ಬಾರಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು.

ಎರಡು ಬಾರಿ ಮುಖ್ಯಮಂತ್ರಿಯಾದವರು:

  • ಎಸ್. ನಿಜಲಿಂಗಪ್ಪ: ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
  • ವೀರೇಂದ್ರ ಪಾಟೀಲ್: ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು.
  • ಡಿ. ದೇವರಾಜ ಅರಸು: ಹಿಂದುಳಿದ ವರ್ಗದ ನಾಯಕರಾಗಿ ಎರಡು ಬಾರಿ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದ್ದರು.
  • ಎಚ್. ಡಿ. ಕುಮಾರಸ್ವಾಮಿ: ಜನತಾ ದಳ (ಜಾತ್ಯತೀತ) ಪಕ್ಷದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ.
  • ಸಿದ್ದರಾಮಯ್ಯ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Also Read : 2026ಕ್ಕೆ ಭಾರತದ ಪ್ರಧಾನಿ ಆಗ್ತಾರಾ ಯೋಗಿ ಆದಿತ್ಯನಾಥ್‌ ?

ಒಂದು ಬಾರಿ ಮುಖ್ಯಮಂತ್ರಿಯಾದವರು:

  • ಕೆ. ಚೆಂಗಲರಾಯ ರೆಡ್ಡಿ
  • ಕೆಂಗಲ್ ಹನುಮಂತಯ್ಯ
  • ಕಡಿದಾಳ್ ಮಂಜಪ್ಪ
  • ಬಿ.ಡಿ. ಜತ್ತಿ
  • ಎಸ್.ಆರ್. ಕಂಠಿ
  • ಎಸ್.ಆರ್. ಬೊಮ್ಮಾಯಿ
  • ಆರ್. ಗುಂಡೂರಾವ್
  • ಎಸ್. ಬಂಗಾರಪ್ಪ
  • ಎಂ. ವೀರಪ್ಪ ಮೊಯ್ಲಿ
  • ಎಚ್. ಡಿ. ದೇವೇಗೌಡ
  • ಜೆ. ಎಚ್. ಪಟೇಲ್
  • ಎಸ್. ಎಂ. ಕೃಷ್ಣ
  • ಎನ್. ಧರಂ ಸಿಂಗ್
  • ಡಿ.ವಿ. ಸದಾನಂದ ಗೌಡ
  • ಜಗದೀಶ್ ಶೆಟ್ಟರ್
  • ಬಸವರಾಜ ಬೊಮ್ಮಾಯಿ

ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರೂ, ಅವರ ಒಂದು ಅವಧಿಯು ಕೇವಲ 7 ದಿನಗಳಾಗಿತ್ತು.

ಕರ್ನಾಟಕದ ಇತಿಹಾಸದಲ್ಲಿಯೇ ಮಾಜಿ ಸಿಎಂ ಡಿ. ದೇವರಾಜ ಅರಸು ಸುದೀರ್ಘ ಅವಧಿಗೆ (7 ವರ್ಷಕ್ಕೂ ಹೆಚ್ಚು ಕಾಲ) ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆ ಹೊಂದಿದ್ದಾರೆ.

ಸಿದ್ದರಾಮಯ್ಯ ಅವರು ಪೂರ್ಣಾವಧಿಗೆ (5 ವರ್ಷ) ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಕೆಲವೇ ಕೆಲವು ಮುಖ್ಯಮಂತ್ರಿಗಳಲ್ಲಿ ಒಬ್ಬರು.

Dalit CM demand again in Karnataka; How many times has power been given to which community Kannada News

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories