ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ

ನವದೆಹಲಿ : ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ (delhi cm Rekha Guptha ) ಅವರ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ನಡೆದಿದೆ. ದೆಹಲಿಯ ಸಿಎಂ ನಿವಾಸದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಬುಧವಾರ ಬೆಳಗ್ಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ನಿವಾಸದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುತ್ತಿದ್ದರು. ಈ ವೇಳೆಯಲ್ಲಿ ಕೂಗಿಕೊಂಡು ಬಂದ ವ್ಯಕ್ತಿ ಕಪಾಳ ಮೋಕ್ಷ ಮಾಡಿ ನಿಂದಿಸೋದಕ್ಕೆ ಶುರು ಮಾಡಿದ್ದ. ಅಲ್ಲದೇ ರೇಖಾ ಗುಪ್ತಾ ಅವರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ್ದಾರೆ.

ಘಟನೆಯ ಬೆನ್ನಲ್ಲೇ ಪೊಲೀಸರು ಸಿಎಂ ನಿವಾಸದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ದೆಹಲಿಯ ಪೊಲೀಸ್‌ ಆಯುಕ್ತರು ಕೂಡಲೇ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಘಟನೆಯ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಸದಾನಂದ ಮಾಸ್ತರ್‌ ರಾಜ್ಯಸಭೆಗೆ : ಕಾಲು ಕತ್ತರಿಸಿದರೂ ಛಲ ಬಿಡದ ಶಿಕ್ಷಕ

ದೆಹಲಿಯ ಪೊಲೀಸ್‌ ತಂಡಗಳು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ದೆಹಲಿ ಉತ್ತರ ಜಿಲ್ಲೆಯ ಡಿಸಿಪಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಲ್ಲಿ ಮೊಕ್ಕಾಂ ಹೂಡಿದ್ದಾರೆ.

ಸಿಎಂ ರೇಖಾ ಗುಪ್ತಾಗೆ ಗಂಭೀರ ಗಾಯವಾಗಿಲ್ಲ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ ನಡೆದಿದೆ. ಆದರೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಹೀಗಾಗಿ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿದು ಬಂದಿದೆ. ದೂರು ಸಲ್ಲಿಸುವ ನೆಪದಲ್ಲಿ ಬಂದಿದ್ದ ವ್ಯಕ್ತಿ ಈ ರೀತಿ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ : ಒಮನ್‌ನಲ್ಲಿ ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ

ಪೊಲೀಸ್‌ ವೈಫಲ್ಯವೇ ಘಟನೆಗೆ ಕಾರಣ ?

ಮುಖ್ಯಮಂತ್ರಿಗಳ ನಿವಾಸದಲ್ಲಿಯೇ ಇಂತಹ ಘಟನೆ ನಡೆದಿರೋದು ಪೊಲೀಸರ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈತ ಸಿಎಂ ನಿವಾಸದ ಒಳಗೆ ಹೇಗೆ ಪ್ರವೇಶ ಮಾಡಿದ್ದಾನೆ ? ಆತ ಕೂಗಿಕೊಂಡು ಬರುತ್ತಿದ್ದರೂ ಕೂಡ ಭದ್ರತಾ ಪೊಲೀಸರು ಈ ವೇಳೆಯಲ್ಲಿ ಏನು ಮಾಡ್ತಾ ಇದ್ರೂ ಅನ್ನೋ ಪ್ರಶ್ನೆ ಎದ್ದಿದೆ.

delhi cm Rekha Guptha Attack During Public hearing in CM house Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories