ಯೆಮೆನ್ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ16ರಂದು ಗಲ್ಲುಶಿಕ್ಷೆ : ಏನಿದು ಪ್ರಕರಣ ?

ಯೆಮೆನ್ : ಕೇರಳ ಮೂಲದ ನರ್ಸ್‌ ನಿಮಿಷಾ ಪ್ರಿಯಾ (Nimisha Priya) ಗೆ ಗಲ್ಲು ಶಿಕ್ಷೆ ಫಿಕ್ಸ್‌ ಆಗಿದೆ. ಜುಲೈ 16 ರಂದು ನಿಮಿಷಾ ಪ್ರಿಯ ಗಲ್ಲುಗೇರಿಸುವ ಕುರಿತು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟಕ್ಕೂ ಏನಿದು ಪ್ರಕರಣ ? ನರ್ಸ್‌ ನಿಮಿಷಾ ಪ್ರಿಯ ಮಾಡಿದ ತಪ್ಪೇನು ?

Nimisha Priya : ಏನಿದು ನಿಮಿಷಾ ಪ್ರಿಯ ಪ್ರಕರಣ ?

ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರು 2017ರಲ್ಲಿ ಯೆಮೆನ್‌ನಲ್ಲಿ ಯೆಮೆನ್ ಪ್ರಜೆಯಾದ ತಲಾಲ್ ಅಬ್ದು ಮೆಹ್ದಿ (Talal Abdo Mahdi) ಅವರನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಸಾಬೀತಾಗಿದ್ದು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.

ನಿಮಿಷಾ ಪ್ರಿಯಾ ಮೆಹ್ದಿ ಸಹಕಾರದೊಂದಿಗೆ ಯೆಮೆನ್‌ನಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಆದರೆ ಮೆಹ್ದಿ ತನ್ನ ಪಾಸ್‌ಪೋರ್ಟ್ ವಶಕ್ಕೆ ತೆಗೆದುಕೊಂಡು ಹಣಕಾಸಿನ ಕಿರುಕುಳ ನೀಡುತ್ತಿದ್ದರು. ಪಾಸ್‌ಪೋರ್ಟ್‌ ವಾಪಾಸ್‌ ಪಡೆಯುವ ಹಿನ್ನೆಲೆಯಲ್ಲಿ ಮೆಹ್ದಿಗೆ ನಿದ್ರೆ ಮಾತ್ರೆ ನೀಡಿದ್ದರು.

ಆದರೆ ನಿಮಿಷ ಪ್ರಿಯ ನೀಡಿದ್ದ ಮಾತ್ರೆಯ ಪ್ರಮಾಣ ಹೆಚ್ಚಾಗಿದ್ದರಿಂದಾಗಿ ಮೆಹ್ದಿ ಸಾವನ್ನಪ್ಪಿದ್ದ. ನಂತರ ದೇಹವನ್ನು ವಿಲೇವಾತಿ ಮಾಡಲು ಪ್ರಯತ್ನಿಸುವ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

Also Read : ಮೊಬೈಲ್‌ ನೀಡದಕ್ಕೆ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

Nimisha Priya : ಫಲಕೊಡದ ಕಾನೂನು ಹೋರಾಟ

ಯೆಮೆನ್ ಕಾನೂನಿನ ಪ್ರಕಾರ, ಕೊಲೆಯಾದ ವ್ಯಕ್ತಿಯ ಕುಟುಂಬವು ನಿಮಿಷಾ ಪ್ರಿಯ ಅವರ ಕಡೆಯಿಂದ ಹಣವನ್ನು ಸ್ವೀಕಾರ ಮಾಡಿದ್ರೆ ಬಿಡುಗಡೆ ಆಗುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಹಣ ಸಂಗ್ರಹ ಮಾಡುವ ಕಾರ್ಯವೂ ನಡೆಯುತ್ತಿತ್ತು.

ನಿಮಿಷಾ ಪ್ರಿಯಾ ಉಳಿಸಿ ಆಕ್ಷನ್ ಕೌನ್ಸಿಲ್ (Save Nimisha Priya Action Council) ಎಂಬ ಸಮಿತಿಯು ಯೆಮೆನ್‌ನಲ್ಲಿರುವ ತಲಾಲ್ ಅವರ ಕುಟುಂಬದೊಂದಿಗೆ ಸಂಧಾನ ನಡೆಸುತ್ತಿದೆ.

ಇದುವರೆಗೆ ಕುಟುಂಬವು ಅಪಾರ ಪ್ರಮಾಣದ ಹಣವನ್ನು (ಸುಮಾರು $1 ಮಿಲಿಯನ್ USD ಅಥವಾ ಅಂದಾಜು 8 ಕೋಟಿ ಭಾರತೀಯ ರೂಪಾಯಿಗಳು) ಬೇಡಿಕೆ ಇಟ್ಟಿತ್ತು ಎಂದು ವರದಿಯಾಗಿದೆ.

Nimisha Priya : ನಿಮಿಷಾ ಪ್ರಿಯ ಬಿಡುಗಡೆಗೆ ಭಾರತ ಸರಕಾರದ ಪ್ರಯತ್ನ

ಭಾರತ ಸರಕಾರ ಕೂಡ ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ಮಾನವೀಯ ಆಧಾರದ ಮೇಲೆ ಸಹಾಯ ಮಾಡುತ್ತಿದೆ. ಯೆಮೆನ್ ಮತ್ತು ಓಮನ್‌ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಗಳು ಈ ಕುರಿತು ಪ್ರಯತ್ನ ನಡೆಸುತ್ತಿವೆ.

ಭಾರತೀಯ ಸುಪ್ರೀಂ ಕೋರ್ಟ್‌ ಕೂಡ ನಿಮಿಷಾ ಪ್ರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸೂಚನೆಯನ್ನು ನೀಡಿದೆ.

ನಿಮಿಷಾ ಪ್ರಿಯ ಬಿಡುಗಡೆ ಸಾಧ್ಯವೇ ?

ಯೆಮೆನ್‌ನಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧ ಮತ್ತು ಅಸ್ಥಿರ ರಾಜಕೀಯ ಪರಿಸ್ಥಿತಿಯ ಕಾರಣದಿಂದಾಗಿ ಮೆಹ್ದಿ ಕುಟುಂಬದ ಜೊತೆಗೆ ಸಂಧಾನ ಕಾರ್ಯ ನಡೆಸೋದು ಕಷ್ಟಕರವಾಗಿದೆ.

ತಲಾಲ್ ಅವರ ಕುಟುಂಬವು ಪ್ರಸ್ತುತ ಯೆಮೆನ್‌ನಲ್ಲಿ ಎಲ್ಲಿ ನೆಲೆಸಿದ್ದಾರೆ ಎಂದು ಪತ್ತೆ ಹಚ್ಚುವುದು, ಅವರ ಜೊತೆಗೆ ನೇರವಾಗಿ ಮಾತನಾಡುವುದು ಕಷ್ಟಕರವಾಗಿದೆ ಎನ್ನಲಾಗುತ್ತಿದೆ.

ನಿಮಿಷಾ ಪ್ರಿಯಾ ಅವರ ಪ್ರಕರಣವು ಅಂತರಾಷ್ಟ್ರೀಯ ಕಾನೂನು, ಮಾನವೀಯ ನೆರವು ಮತ್ತು ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಮೇಲೆ ನಿರ್ಧಾರವಾಗಿದೆ.

Also Read : ಬೃಹತ್‌ ವೇಶ್ಯಾವಾಟಿಕೆ ಜಾಲ ಪತ್ತೆ: ಶೌಚಾಲಯದಲ್ಲಿ ರಹಸ್ಯ ಸುರಂಗ !

ದೈಹಿಕ, ಮಾನಸಿಕ ಕಿರುಕುಳ ಕೊಟ್ಟಿದ್ನಾ ತಲಾಲಾ ?

ಯೆಮೆನ್ ಪ್ರಜೆಯಾದ ತಲಾಲ್ ಅಬ್ದು ಮೆಹ್ದಿ ಅವರನ್ನು ನಂಬಿ ನಿಮಿಷಾ ಪ್ರಿಯ ದೂರದ ಓಮನ್‌ನಲ್ಲಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದಳು. ಆದರೆ ತಲಾಲ್‌ ಈಕೆಯ ಪಾಸ್‌ಪೋರ್ಟ್‌ ಇಟ್ಟುಕೊಂಡಿದ್ದ.

ನಿಮಿಷಾ ಪ್ರಿಯ ಅವರ ಪತಿ ಹಾಗೂ ಮಗಳು ಕೇರಳದಲ್ಲಿದ್ದರು. ಆದರೆ ತಲಾಲ್‌ ನಿಮಿಷಾ ಅವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳವನ್ನು ನೀಡಿದ್ದಾನೆ ಅನ್ನೋ ಆರೋಪವೂ ಇದೆ.

ನಿಮಿಷಾ ಪ್ರಿಯ ಸಂಪೂರ್ಣವಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ತಲಾಲ್‌ನಿಂದ ಪಾಸ್‌ ಪೋರ್ಟ್‌ ಪಡೆಯುವ ಸಲುವಾಗಿಯೇ ನಿದ್ರೆ ಮಾತ್ರೆಗಳನ್ನು ನೀಡಿದ್ದರು.

ತಲಾಲ್‌ ನಿದ್ರೆಗೆ ಜಾರುತ್ತಿದ್ದಂತೆಯೇ ಪಾಸ್‌ಪೋರ್ಟ್‌ ಪಡೆದುಕೊಳ್ಳುವುದು ಈಕೆಯ ಯೋಜನೆಯಾಗಿತ್ತು. ಆದರೆ ಮಾತ್ರೆ ಸೇವಿಸಿದ್ದ ತಲಾಲ್‌ ಚಿರನಿದ್ರೆಗೆ ಜಾರಿದ್ದಾನೆ.

ಯಾರು ಈ ನಿಮಿಷಾ ಪ್ರಿಯ ?

ದೂರದ ಯೆಮೆನ್‌ನಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿರೋ ಈ ನಿಮಿಷಾ ಪ್ರಿಯ ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಕೊಲ್ಲಂಗೋಡ್‌ ಮೂಲದವರು. 57 ವರ್ಷ ಪ್ರಾಯದ ಆಕೆಯ ತಾಯಿ ಪ್ರೇಮಾ ಕುಮಾರಿ ಮಗಳಿಗಾಗಿ ಹೋರಾಟವನ್ನೇ ನಡೆಸುತ್ತಿದ್ದಾರೆ.

ಈಗಾಗಲೇ ಯೆಮನ್‌ಗೆ ತೆರಳಿರೋ ಪ್ರೇಮಾ ಕುಮಾರಿ ಅವರು ತಲಾಲ್‌ ಕುಟುಂಬಕ್ಕೆ ನೀಡಬೇಕಾಗಿದ್ದ ಹಣ ಸಂಗ್ರಹದ ಕಾರ್ಯವನ್ನು ನಡೆಸುತ್ತಿದ್ದಾರೆ.

ನಿಮಿಷಾ ಪ್ರಿಯಾ ಅವರ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲ. ತಂದೆ, ತಾಯಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದರು. ಜೀವನ ನಿರ್ವಹಣೆಗಾಗಿಯೇ ಈಕೆ ವಿದೇಶಕ್ಕೆ ತೆರಳಿದ್ದಳು.

ndian Nurse Nimisha Priya On Death Row in Yemen July 16 in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories