ಅನನ್ಯಾ ಭಟ್‌ ಸುಳ್ಳು ಕಥೆ, ಕ್ಷಮೆ ಕೇಳಿದ ಸುಜಾತ ಭಟ್‌ : ಆರೋಪಿಗಳ ಬಂಧನಕ್ಕೆ ಸುನಿಲ್‌ ಕುಮಾರ್‌ ಆಗ್ರಹ

ಬೆಂಗಳೂರು : ರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎನ್ನಲಾಗುತ್ತಿದ್ದ ಅನನ್ಯ ಭಟ್‌ (Ananya Bhat Case) ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಅನನ್ಯ ಭಟ್‌ ಅನ್ನೋದು ಸುಳ್ಳು ಕಥೆ, ಆಸ್ತಿ ವಿಚಾರಕ್ಕಾಗಿ ನಾನು ಮಗಳ ಸುಳ್ಳು ಕಥೆಯನ್ನು ಹೇಳಿದ್ದೇನೆ. ಧರ್ಮಸ್ಥಳಕ್ಕೆ ಧಕ್ಕೆ ತರುವಂತೆ ನನ್ನನ್ನು ಪ್ರಚೋದಿಸಿದ್ದಾರೆ ಎಂದು ಸುಜಾತ ಭಟ್‌ (Sujatha Bhat) ಹೇಳಿದ್ದಾರೆ.

ಇನ್‌ಸೈಟ್‌ ರುಶ್‌ ಅನ್ನೋ ಯೂಟ್ಯೂಬ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುಜಾತ ಭಟ್, ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ. ನಾನು ನನ್ನ ಆಸ್ತಿಗಾಗಿ ನಾನು ಅನನ್ಯ ಭಟ್‌ ಕಥೆಯನ್ನು ಕಟ್ಟಿದ್ದೇನೆ. ರಾಜ್ಯದ ಜನತೆಗೆ, ಧರ್ಮಸ್ಥಳದ ಜನತೆಗೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ನನ್ನ ಅಜ್ಜನ ಆಸ್ತಿಯನ್ನು ನನ್ನ ಸಹಿಯನ್ನು ಪಡೆಯದೇ ಧರ್ಮಸ್ಥಳದವರಿಗೆ ಸೇಲ್‌ ಮಾಡಿದ್ದಾರೆ. ನನ್ನ ಅನುಮತಿ ಪಡೆಯದೆಯೇ ಜಾಗವನ್ನು ಮಾರಾಟ ಮಾಡಲಾಗಿದೆ. ನನ್ನ ದೇವರನ್ನು ಧರ್ಮಸ್ಥಳಕ್ಕೆ ನೀಡಲಾಗಿದೆ. ಇದೇ ಕಾರಣದಿಂದಲೇ ಈ ಕಥೆಯನ್ನು ಕಟ್ಟಲಾಗಿದೆ.

ಗಿರೀಶ್‌ ಮಟ್ಟಣನವರ್‌, ಜಯಂತ್‌ ಟಿ ಎಂಬವರು ನನಗೆ ಅನನ್ಯ ಭಟ್‌ ಕಥೆಯನ್ನು ಕಟ್ಟುವಂತೆ ಪ್ರಚೋದನೆ ನೀಡಿದ್ದರು. ಅವರು ಹೇಳಿದಂತೆ ನಾನು ಕಥೆಯನ್ನು ಹೇಳಿದ್ದೇನೆ. ನಾನು ಧರ್ಮಸ್ಥಳಕ್ಕೆ, ಜನರ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಮಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ : ಕೊನೆಗೂ ಮೌನ ಮುರಿದ ಡಾ.ಡಿ.ವೀರೇಂದ್ರ ಹೆಗ್ಗಡೆ

ನಾನು ಕ್ಷೇತ್ರದ ಜನರಿಗೆ, ರಾಜ್ಯದ, ರಾಷ್ಟ್ರದ ಜನರಿಗೆ ಕ್ಷಮೆ ಕೇಳುತ್ತೇನೆ. ಇಷ್ಟೊಂದು ದೊಡ್ಡ ಮಟ್ಟಕ್ಕೆ ಹೋಗುತ್ತದೆ ಅನ್ನೋದು ನನಗೆ ಗೊತ್ತೇ ಇರಲಿಲ್ಲ. ನನಗೆ ಅವರು ಪ್ರಚೋದನೆ ಕೊಟ್ಟಿದ್ದರು. ಹೀಗಾಗಿ ನಾನು ಈ ಕಥೆಯನ್ನು ಹೇಳಿದ್ದೇನೆ ಎಂದಿದ್ದಾರೆ.

ಗಿರೀಶ್‌ ಮಟ್ಟಣನವರ್‌ ಒಬ್ಬರೇ ನನ್ನ ಬಳಿ ಬಂದು ಹೀಗೆ ಮಾತನಾಡಬೇಕು ಎಂದಿದ್ದಾರೆ. ನಿಮ್ಮ ಜೊತೆಗೆ ನಾನು ಇರುತ್ತೇನೆ ಎಂದಿದ್ದರು. ನಾನು ತೋರಿಸಿದ ಎಲ್ಲಾ ಪೋಟೋಗಳು ಕೂಡ ಫೇಕ್‌ ಎಂದು ಸುಜಾತ ಭಟ್‌ (Ananya Bhat Sujatha Bhat) ಅವರು ಸ್ಪಷ್ಟನೆ ನೀಡಿದ್ದಾರೆ.

ಧರ್ಮಸ್ಥಳ ಪ್ರಕರಣ ಯೋಜಿತ ಷಡ್ಯಂತ್ರ : ಆರೋಪಿಗಳ ಬಂಧನಕ್ಕೆ ಸುನಿಲ್‌ ಕುಮಾರ್‌ ಆಗ್ರಹʼ

ಧರ್ಮಸ್ಥಳ ಪ್ರಕರಣ ಒಂದು ಯೋಜಿತ ಷಡ್ಯಂತ್ರ ಎಂಬುದಕ್ಕೆ ಕ್ಷಣ ಕ್ಷಣಕ್ಕೂ ಮಾಹಿತಿ ಲಭಿಸುತ್ತಿದೆ. ಅನನ್ಯಾ ಭಟ್ ತನ್ನ ಮಗಳೇ ಅಲ್ಲ ಎಂದು ಈ ಪ್ರಕರಣದ ಕೇಂದ್ರ ಬಿಂದು ಸುಜಾತ ಭಟ್ ಇಂದು ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಇದನ್ನೂ ಓದಿ : ಮಹೇಶ್‌ ತಿಮರೋಡಿಗೆ 14 ದಿನ ಜೈಲು : ಜಾಮೀನು ಅರ್ಜಿ ವಜಾ, ಮುಂದಿನ ಆಯ್ಕೆಗಳೇನು ?

ಇಷ್ಟು ದಿನಗಳ ಕಾಲ ಸಮಾಜದ ದಿಕ್ಕನ್ನು ತಪ್ಪಿಸಿದ ಪ್ರತಿಯೊಬ್ಬರನ್ನೂ ಕಾನೂನು ರೀತ್ಯ ದಂಡಿಸುವುದಕ್ಕೆ ಇದು ಸಕಾಲ. ತಕ್ಷಣ ಈ ಗ್ಯಾಂಗ್ ವಿರುದ್ದ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಕಾರ್ಕಳ ಶಾಸಕರಾಗಿ ವಿ.ಸುನಿಲ್‌ ಕುಮಾರ್‌ ಆಗ್ರಹಿಸಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories