ಬಾನು ಮುಷ್ತಾಕ್‌ಗೆ ದೀಪಾ ಬಸ್ತಿ ಬಗ್ಗೆ ಯಾಕಿಲ್ಲ ಹೃದಯ ವೈಶಾಲ್ಯತೆ : ಸುನಿಲ್ ಕುಮಾರ್

ಬೆಂಗಳೂರು : ಬಾನು ಮುಷ್ತಾಕ್ (Banu Mushtaq) ಅವರ ಕೃತಿ ಬೂಕರ್ ಗೆ ನಾಮನಿರ್ದೇಶನಗೊಳ್ಳುವುದಕ್ಕೆ ಕಾರಣವಾಗಿದ್ದು, ದೀಪಾ ಬಸ್ತಿಯವರ ಅನುವಾದದಿಂದ. ಆದರೆ ನಾಡಹಬ್ಬ ದಸರಾಕ್ಕೆ ಆಹ್ವಾನ ಬಂದಾಗ ದೀಪಾ ಕೂಡ ನನ್ನ ಜೊತೆಗಿರಲಿ ಅನ್ನೋ ಹೃದಯ ವೈಶಾಲ್ಯತೆ ಪ್ರಕಟವಾಗಲೇ ಇಲ್ಲವಲ್ಲ ಎಂದು ಶಾಸಕ ಸುನಿಲ್ ಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
ಕರ್ನಾಟಕಕಕ್ಕೆ ಸೀಮಿತವಾದ ಮುಷ್ತಾಕರ ಕತೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೆರೆದುಕೊಳ್ಳುವುದಕ್ಕೆ ಕಾರಣವಾಗಿದ್ದೇ ದೀಪಾ ಅವರು ಮಾಡಿ ಇಂಗ್ಲಿಷ್ ಅನುವಾದ. ಬೂಕರ್ ಸಾಧನೆಯ ಗರಿ ಅನುವಾದಕಿಯ ಜತೆಗೆ ಮೂಲ ಲೇಖಕಿಗೂ ಸೇರಿದ್ದು. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ರಾಜ್ಯ ಸರ್ಕಾರ ದೀಪಾ ಬಸ್ತಿ ಅವರಿಗೆ ಸಮಾನ ಗೌರವ ನೀಡದೇ ಇರುವುದರ ಮರ್ಮವೇನು ? ಎಂದು ಅವರು ಪ್ರಶ್ನಿಸಿದ್ದಾರೆ.
ಅರ್ಬನ್ ನಕ್ಸಲರ ಕೈಲಾಡುವ ಗೊಂಬೆ ಸಿಎಂ ಸಿದ್ದರಾಮಯ್ಯನವರೇನೋ ನಾಡಹಬ್ಬವನ್ನೂ ಚಿಲ್ಲರೆ ರಾಜಕೀಯಕ್ಕೆ, ಒಡೆದಾಡುವ ನೀತಿಗೆ ಬಳಸಿಕೊಂಡು ಬಿಟ್ಟರು. ಆದರೆ ಬಾನು ಮುಷ್ತಾಕ್ ? ನಾಡಹಬ್ಬಕ್ಕೆ ಆಹ್ವಾನ ಬಂದಾಗ ದೀಪಾ ಕೂಡಾ ನನ್ನ ಜತೆಗಿರಲಿ ಎಂಬ ಹೃದಯ ವೈಶಾಲ್ಯತೆ ನಿಮ್ಮಿಂದ ಪ್ರಕಟವಾಗಲೇ ಇಲ್ಲವಲ್ಲ ಎಂದಿದ್ದಾರೆ.
ಇದನ್ನೂ ಓದಿ : ಜಾತಿ ಸಮೀಕ್ಷೆ ಕೈಬಿಟ್ಟ ಜಾತಿಗಳ ಸೇರ್ಪಡೆಗೆ ಅವಕಾಶ
ಕನ್ನಡ ಭಾಷೆಗೆ ದೈವೀ ಸ್ವರೂಪ ಕೊಟ್ಟು, ಅರಿಸಿನ ಕುಂಕುಮ ಹಚ್ಚಿ ನನ್ನನ್ನು ಹೊರಗಿಟ್ಟು ಬಿಟ್ಟಿರಲ್ಲ ಎಂದು ಭಾಷಣ ಬಿಗಿಯುವ ಬಾನು ಮುಷ್ತಾಕ್ ಅವರಿಗೆ ತಮ್ಮ ಕೃತಿಯನ್ನು ಲೋಕಕ್ಕೆ ಬಿತ್ತರಿಸಿದ ದೀಪಾ ಬಸ್ತಿ ನಾಡಹಬ್ಬದ ಉದ್ಘಾಟನೆಯ ಸಂದರ್ಭದಲ್ಲಿ ಜತೆಗಿರಲಿ ಎಂದೆನೆಸಲಿಲ್ಲವೇಕೆ ಎಂದಿದ್ದಾರೆ.
ಹೊರಗಿಡುವ ಸಂಸ್ಕ್ರತಿ ಯಾರ ಮನೆಯದು ಬಾನು ಮುಷ್ತಾಕ್ ಮೇಡಂ ? ಇದನ್ನೇ ನಾವು ಮಾನಸಿಕ ದಾರಿದ್ರ್ಯ ಎಂದು ಕರೆಯುವುದು ಎಂದಿದ್ದಾರೆ. ನಾಡಹಬ್ಬ ದಸರಾ ಕಾರ್ಯಕ್ರಮಕ್ಕೆ ಬಾನು ಮುಷ್ತಾಕ್ (Banu Mushtaq) ಅವರನ್ನು ಆಹ್ವಾನಿಸಿರೋದು ಬಾರೀ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಸೆಪ್ಟೆಂಬರ್ 1ರಂದು ಬಿಜೆಪಿಯಿಂದ ಧರ್ಮ ಜಾಗೃತಿ ಸಭೆ



