Caste Survey: ಬಿಲ್ಲವ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಬಳಕೆ ಆರ್ಯ ಈಡಿಗ ಸಂಘ ವಿರೋಧ
Caste Survey: :ಕರ್ನಾಟಕ ಹಿಂದುಳಿದ ವರ್ಗಗಳ (Karnataka Backward Commission)ಆಯೋಗ ಜಾತಿ ಸಮೀಕ್ಣೆ ನಡೆಸುತ್ತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಗಳ ಪಟ್ಟಿಯಲ್ಲಿ ಬಿಲ್ಲವ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್ ಎಂದು ಪ್ರಕಟಿಸಿರುವುದಕ್ಕೆ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಹಿಂದುಳಿದ ವರ್ಗಗಳ ಆಯೋಗವು ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಗಳ ಪಟ್ಟಿಯಲ್ಲಿ ಕ್ರಮಸಂಖ್ಯೆ 190 ಮತ್ತು 319ರಲ್ಲಿ ಅನುಕ್ರಮವಾಗಿ ಬಿಲ್ಲವ ಕ್ರಿಶ್ಚಿಯನ್ ಮತ್ತು ಈಡಿಗ ಕ್ರಿಶ್ಚಿಯನ್ ಎಂದು ಪ್ರಕಟಿಸಿದೆ.
30-03-2002 ಅನುಬಂಧ-1ರ ಅನ್ವಯ ಹಿಂದುಳಿದ ವರ್ಗಗಳ ಈಡಿಗ ಜನಾಂಗವನ್ನು ಪ್ರವರ್ಗ 11ಎ ನಲ್ಲಿ ಕ್ರಮ ಸಂಖ್ಯೆ 4ರಲ್ಲಿ ಎ ಯಿಂದ ಜಡ್ ವರೆಗೆ ಈಡಿಗ, ಬಿಲ್ಲವ, ಪೂಜಾರಿ, ಧಿವರ, ನಾಡಾರ್, ನಾಮಧಾರಿ, ಬಂಧಾರಿ, ಬೆಲ್ಡದ್, ಹಾಲ ಕ್ಷತ್ರಿಯ, ದೇಶ ಬಂಡಾರಿ, ದೇವರ, ದೇವರ ಮಕ್ಕಳು, ಎಳವ, ಗಾಮಲ್ಲ, ಗೌಂಡ್ಲ, ಹಳೇ ಪೈಕರು, ಹಳೇ ಪೈಕ್, ಇಲ್ಲಾವನ್, ಕಲಾಲ್, ಮಲಯಾಳಿ ಬಿಲ್ಲವ, ಥೀಯಾನ್, ಇಳಿಗ, ಗುಂಡ್ಲ, ತಿಯನ್ ದಾಖಲು ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
ಆದರೆ ಹಿಂದುಳಿದ ವರ್ಗಗಳ ಆಯೋಗವು ಹಿಂದುಳಿದ ವರ್ಗಕ್ಕೆ ಸೇರಿದ ಜಾತಿಗಳ ಹೆಸರನ್ನು ಕ್ರಮಸಂಖ್ಯೆ 190 ಮತ್ತು 319ರಲ್ಲಿ ಅನುಕ್ರಮವಾಗಿ ಬಿಲ್ಲವ ಕ್ರಿಶ್ಚಿಯನ್ ಮತ್ತು ಈಡಿಗ ಕ್ರಿಶ್ಚಿಯನ್ ಎಂದು ಪ್ರಕಟಿಸಿರುವುದನ್ನು ಈಡಿಗ ಹಾಗೂ ಎಲ್ಲಾ 25 ಪಂಗಡಗಳು ವಿರೋಧಿಸುತ್ತದೆ. ಮೂಲ ಜಾತಿಯ ಹೆಸರನ್ನು ಬಳಸುವುದನ್ನು ಖಂಡಿಸುತ್ತದೆ.
ಆದ್ದರಿಂದ ಕ್ರಮಸಂಖ್ಯೆ 190 ಮತ್ತು 319ರಲ್ಲಿ ಸೇರಿಸಿ ಪ್ರಕಟಿಸಿರುವ ಬಿಲ್ಲವ ಕ್ರಿಶ್ಚಿಯನ್ ಮತ್ತು ಈಡಿಗ ಕ್ರಿಶ್ಚಿಯನ್ ಎಂಬ ಹೆಸರನ್ನು ತೆಗೆಯಬೇಕೆಂದು ಜನಾಂಗದ ಪರವಾಗಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ಡಾ.ಎಂ. ತಿಮ್ಮೇಗೌಡ ಅವರು ವಿನಂತಿಸಿದ್ದಾರೆ.
ಇದನ್ನೂ ಓದಿ: ಮಾನಸಿಕ ನೆಮ್ಮದಿಗಾಗಿ ಸರ್ಕಾರಿ ಬ್ಯಾಂಕ್ ಕೆಲಸಕ್ಕೆ ರಿಸೈನ್ ಮಾಡಿದ ಮಹಿಳೆ



