ಮಹಿಳೆಯರಲ್ಲಿ ಪುರುಷರಂತೆ ಕೂದಲು ಬೆಳೆಯಲು ಬ್ಯೂಟಿ ಸಮಸ್ಯೆ ಕಾರಣವಲ್ಲ; ಅಸಲಿ ಸತ್ಯ ಇಲ್ಲಿದೆ!
ಹೆಚ್ಚಿನ ಮಹಿಳೆಯರು ಮುಖದ ಮೇಲೆ ಕೂದಲು ಕಾಣಿಸಿಕೊಂಡ ತಕ್ಷಣ ಬ್ಯೂಟಿ ಪಾರ್ಲರ್‌ಗೆ ಓಡಿ ವ್ಯಾಕ್ಸಿಂಗ್ ಅಥವಾ ಥ್ರೆಡಿಂಗ್ ಮಾಡಿಸಿಕೊಳ್ಳುತ್ತಾರೆ. ಆದರೆ, ಇದು ಕೇವಲ ಬಾಹ್ಯ ಸಮಸ್ಯೆಯಲ್ಲ, ದೇಹದ ಒಳಗಿನ ಹಾರ್ಮೋನ್‌ಗಳ ಏರುಪೇರಿನ ಮುನ್ಸೂಚನೆ ಎನ್ನುತ್ತಾರೆ ವೈದ್ಯರು.

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಹದಿಹರೆಯದ ಹುಡುಗಿಯರಿಂದ ಹಿಡಿದು ಮಧ್ಯವಯಸ್ಕ ಮಹಿಳೆಯರವರೆಗೆ ಒಂದು ಪ್ರಮುಖ ಸಮಸ್ಯೆ ಕಾಡುತ್ತಿದೆ. ಅದೇ ಮುಖದ ಮೇಲೆ, ಅಂದರೆ ಗಲ್ಲ (Chin), ಮೇಲ್ತುಟಿ (Upper lip) ಅಥವಾ ಕೆನ್ನೆಯ ಭಾಗದಲ್ಲಿ ಪುರುಷರಂತೆ ಅತಿಯಾಗಿ ಕೂದಲು ಬೆಳೆಯುವುದು. ವೈದ್ಯಕೀಯ ಲೋಕದಲ್ಲಿ ಇದನ್ನು ‘ಹಿರ್ಸುಟಿಸಂ’ (Hirsutism) ಎಂದು ಕರೆಯಲಾಗುತ್ತದೆ.
ಹೆಚ್ಚಿನ ಮಹಿಳೆಯರು ಮುಖದ ಮೇಲೆ ಕೂದಲು ಕಾಣಿಸಿಕೊಂಡ ತಕ್ಷಣ ಬ್ಯೂಟಿ ಪಾರ್ಲರ್‌ಗೆ ಓಡಿ ವ್ಯಾಕ್ಸಿಂಗ್ ಅಥವಾ ಥ್ರೆಡಿಂಗ್ ಮಾಡಿಸಿಕೊಳ್ಳುತ್ತಾರೆ. ಆದರೆ, ಇದು ಕೇವಲ ಬಾಹ್ಯ ಸಮಸ್ಯೆಯಲ್ಲ, ದೇಹದ ಒಳಗಿನ ಹಾರ್ಮೋನ್‌ಗಳ ಏರುಪೇರಿನ ಮುನ್ಸೂಚನೆ ಎನ್ನುತ್ತಾರೆ ವೈದ್ಯರು.
ಮುಖದ ಮೇಲೆ ಅತಿಯಾದ ಕೂದಲು ಬರಲು ಪ್ರಮುಖ ಕಾರಣಗಳು:
1. ಪಿಸಿಓಎಸ್ ಅಥವಾ ಪಿಸಿಓಡಿ (PCOS / PCOD): ಇಂದಿನ ಬದಲಾದ ಜೀವನಶೈಲಿಯಲ್ಲಿ ಶೇಕಡಾ 70 ಕ್ಕೂ ಹೆಚ್ಚು ಮಹಿಳೆಯರಲ್ಲಿ ಕಂಡುಬರುವ ‘ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್’ (PCOS) ಇದಕ್ಕೆ ಪ್ರಮುಖ ಕಾರಣ. ಇದರಿಂದ ಮಹಿಳೆಯರ ಅಂಡಾಶಯದಲ್ಲಿ ಸಣ್ಣ ಸಣ್ಣ ಗಂಟುಗಳಾಗಿ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ.
2. ಆಂಡ್ರೋಜನ್ (ಪುರುಷ ಹಾರ್ಮೋನ್) ಹೆಚ್ಚಳ: ಮಹಿಳೆಯರ ದೇಹದಲ್ಲೂ ಪುರುಷ ಹಾರ್ಮೋನ್ ಆದ ‘ಆಂಡ್ರೋಜನ್’ ಅಥವಾ ‘ಟೆಸ್ಟೋಸ್ಟೆರಾನ್’ ಅತ್ಯಲ್ಪ ಪ್ರಮಾಣದಲ್ಲಿರುತ್ತದೆ. ಆದರೆ ಕೆಲವು ಹಾರ್ಮೋನ್ ವ್ಯತ್ಯಾಸಗಳಿಂದ ಈ ಹಾರ್ಮೋನ್ ಉತ್ಪತ್ತಿ ಹೆಚ್ಚಾದಾಗ, ಮುಖ ಮತ್ತು ದೇಹದ ಮೇಲೆ ಪುರುಷರಂತೆ ದಪ್ಪನೆಯ ಕೂದಲು ಬೆಳೆಯಲು ಪ್ರಾರಂಭವಾಗುತ್ತದೆ.
3. ಇನ್ಸುಲಿನ್ ರೆಸಿಸ್ಟೆನ್ಸ್ (Insulin Resistance): ನಾವು ಅತಿಯಾಗಿ ಸಿಹಿ, ಮೈದಾ ಮತ್ತು ಜಂಕ್ ಫುಡ್ ತಿಂದಾಗ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುತ್ತದೆ. ಈ ಹಾರ್ಮೋನ್ ಅಂಡಾಶಯದ ಮೇಲೆ ಒತ್ತಡ ಹಾಕಿ, ಹೆಚ್ಚು ಪುರುಷ ಹಾರ್ಮೋನ್ ಉತ್ಪತ್ತಿಯಾಗುವಂತೆ ಪ್ರೇರೇಪಿಸುತ್ತದೆ.
4. ಅತಿಯಾದ ಮಾನಸಿಕ ಒತ್ತಡ (Stress): ತೀವ್ರ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ‘ಕಾರ್ಟಿಸೋಲ್’ ಎಂಬ ಸ್ಟ್ರೆಸ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಇಡೀ ದೇಹದ ಹಾರ್ಮೋನ್ ಬ್ಯಾಲೆನ್ಸ್ ಅನ್ನೇ ಉಲ್ಟಾ-ಪಲ್ಟಾ ಮಾಡಿಬಿಡುತ್ತದೆ.
ಬ್ಯೂಟಿ ಪಾರ್ಲರ್ ಪದ್ಧತಿಗಳಿಂದಾಗುವ ತೊಂದರೆ ?
ಮುಖದ ಮೇಲೆ ಇರುವ ಕೂದಲನ್ನು ಪದೇ ಪದೇ ಥ್ರೆಡಿಂಗ್, ಪ್ಲಕ್ಕಿಂಗ್ ಹಾಗೂ ವ್ಯಾಕ್ಸಿಂಗ್ ಮಾಡಬೇಕು. ಇದರಿಂದ ಚರ್ಮದ ರಂಧ್ರಗಳು ದೊಡ್ಡದಾಗುತ್ತವೆ. ಅಷ್ಟೇ ಅಲ್ಲದೆ, ಮುಂದಿನ ಬಾರಿ ಬರುವ ಕೂದಲು ಮತ್ತಷ್ಟು ದಪ್ಪ ಹಾಗೂ ಗಟ್ಟಿಯಾಗಿ ಬೆಳೆಯಲು ಇದು ಕಾರಣವಾಗುತ್ತದೆ. ಇದರಿಂದ ಚರ್ಮದ ಬಣ್ಣ ಕಪ್ಪಾಗುವ ಸಾಧ್ಯತೆಯೂ ಇರುತ್ತದೆ.
ಇದನ್ನೂ ಓದಿ : ಮಸಾಲಾ ಪದಾರ್ಥಗಳ ಸೇವನೆಯಿಂದ ಮಾತ್ರ ಎಸಿಡಿಟಿ ಬರತ್ತಾ ? ತಜ್ಞರು ಹೇಳಿದ ಕಾರಣ ಮತ್ತು ಪರಿಹಾರ ತಿಳಿಯಿರಿ
ವೈದ್ಯರು ಕೊಡುವ ಸೂಕ್ತ ಪರಿಹಾರ?
- ಮೊದಲು ರಕ್ತ ಪರೀಕ್ಷೆ ಮಾಡಿಸಿ: ಬ್ಯೂಟಿ ಪಾರ್ಲರ್ ಚಿಕಿತ್ಸೆಗಿಂತ ಮೊದಲು ಹಾರ್ಮೋನ್ ತಜ್ಞರನ್ನು (Endocrinologist) ಕಂಡು ಹಾರ್ಮೋನ್ ಪ್ರೊಫೈಲ್ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ.
- ಆಹಾರ ಪದ್ಧತಿ ಬದಲಿಸಿ: ಸಕ್ಕರೆ, ಮೈದಾ ಮತ್ತು ಎಣ್ಣೆ ಪದಾರ್ಥಗಳಿಗೆ ಬೈ-ಬೈ ಹೇಳಿ. ಪ್ರತಿದಿನ ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಿ.
- ದಿನನಿತ್ಯದ ವ್ಯಾಯಾಮ: ತೂಕ ನಿಯಂತ್ರಣಕ್ಕೆ ತರುವುದರಿಂದ ಹಾರ್ಮೋನ್‌ಗಳು ನೈಸರ್ಗಿಕವಾಗಿಯೇ ಸಮತೋಲನಕ್ಕೆ ಬರುತ್ತವೆ.
- ಆಧುನಿಕ ಚಿಕಿತ್ಸೆ: ವೈದ್ಯರ ಸಲಹೆಯ ಮೇರೆಗೆ ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳುವುದು ಹಾಗೂ ಶಾಶ್ವತ ಪರಿಹಾರಕ್ಕಾಗಿ ‘ಲೇಸರ್ ಹೇರ್ ರಿಡಕ್ಷನ್’ (Laser Hair Reduction) ಚಿಕಿತ್ಸೆ ಪಡೆದುಕೊಳ್ಳಬಹುದು.
ಮುಖದ ಮೇಲೆ ಕೂದಲು ಬರುವುದು ಒಂದು ಶಾರೀರಿಕ ಬದಲಾವಣೆಯಷ್ಟೇ. ಇದಕ್ಕಾಗಿ ಯಾರೂ ಕೀಳರಿಮೆ ಅಥವಾ ಮುಜುಗರ ಪಡಬೇಕಾದ ಅಗತ್ಯವಿಲ್ಲ. ಸರಿಯಾದ ಚಿಕಿತ್ಸೆ ಮತ್ತು ಜೀವನಶೈಲಿಯಿಂದ ಇದನ್ನು ಖಂಡಿತವಾಗಿಯೂ ಗುಣಪಡಿಸಬಹುದು.

