LIC ನೇಮಕಾತಿಗೆ ಇನ್ನೂ ಅರ್ಜಿ ಸಲ್ಲಿಸಿಲ್ವಾ? AAO, AE ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

LIC Recruitment 2025: ಭಾರತದ ಅತಿ ದೊಡ್ಡ ವಿಮೆ ಕಂಪನಿ ಎಲ್‌ಐಸಿ (ಜೀವ ವಿಮಾ ನಿಗಮ) ಖಾಲಿ ಇರುವ ಅಸಿಸ್ಟೆಂಟ್‌ ಆಫೀಸರ್‌ ಮತ್ತು ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಕೆಯು ಆಗಸ್ಟ್‌ 16 ರಿಂದ ಪ್ರಾರಂಭವಾಗಿದೆ. ಇದೀಗ ಈ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಸೆಪ್ಟೆಂಬರ್‌ 8, 2025 (ಇಂದು) ಕೊನೆಗೊಳ್ಳುತ್ತದೆ. ಆಸಕ್ತ ಪದವೀಧರರು ಸೂಕ್ತ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಿ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಎಲ್‌ಐಸಿ ಒಟ್ಟು 841 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ತಾತ್ಕಾಲಿಕ ದಿನಾಂಕವನ್ನು ಅಕ್ಟೋಬರ್‌ 3, 2025 ಎಂದು ನಿಗದಿಪಡಿಸಲಾಗಿದೆ. ಅದೇ ರೀತಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ದಿನಾಂಕವನ್ನು ನವೆಂಬರ್‌ 8, 2025 ಎಂದು ನಿಗದಿಪಡಿಸಿದೆ. ಅಭ್ಯರ್ಥಿಗಳು ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಇಂದೇ ಅರ್ಜಿ ಸಲ್ಲಿಸಿ.

ಅರ್ಹತೆ ಮತ್ತು ಮಾನದಂಡಗಳು

ಹುದ್ದೆಗಳು

ಅಸಿಸ್ಟೆಂಟ್‌ ಎಂಜಿನಿಯರ್‌ (AE) – 81 ಹುದ್ದೆಗಳು
ಅಸಿಸ್ಟೆಂಟ್‌ ಎಡ್ಮಿನಿಸ್ಟ್ರೇಟರ್‌ ಆಫೀಸರ್‌ (AAO) ಸ್ಪೆಷಲಿಸ್ಟ್‌ – 410 ಹುದ್ದೆಗಳು
ಅಸಿಸ್ಟೆಂಟ್‌ ಎಡ್ಮಿನಿಸ್ಟ್ರೇಟರ್‌ ಆಫೀಸರ್‌ (AAO) ಜರ್ನಲಿಸ್ಟ್‌ – 350 ಹುದ್ದೆಗಳು

ಶೈಕ್ಷಣಿಕ ಅರ್ಹತೆ

ಅಸಿಸ್ಟೆಂಟ್‌ ಎಂಜಿನಿಯರ್‌ ಹುದ್ದೆಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ/ ಬಿಟೆಕ್‌ (ಸಿವಿಲ್‌/ಎಲೆಕ್ಟ್ರಿಕಲ್‌) ಪದವಿ ಪಡೆದಿರಬೇಕು. ಅಸಿಸ್ಟೆಂಟ್‌ ಎಡ್ಮಿನಿಸ್ಟ್ರೇಟರ್‌ ಆಫೀಸರ್‌ (AAO) ಸ್ಪೆಷಲಿಸ್ಟ್‌ ಹಾಗೂ ಅಸಿಸ್ಟೆಂಟ್‌ ಎಡ್ಮಿನಿಸ್ಟ್ರೇಟರ್‌ ಆಫೀಸರ್‌ (AAO) ಜರ್ನಲಿಸ್ಟ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪದವಿ ಮುಗಿಸಿರಬೇಕು.

ಇದನ್ನೂ ಓದಿ: ಡಿಗ್ರಿ ಆದವರಿಗೆ ಗುಡ್ ನ್ಯೂಸ್! ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿದೆ 1425 ಹುದ್ದೆಗಳು

ವಯೋಮಿತಿ

ಈ ನೇಮಕಾತಿಯಲ್ಲಿ ಅರ್ಜಿ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ಮತ್ತು ಗರಿಷ್ಠ ವಯಸ್ಸು 32. ಮೀಸಲು ವರ್ಗದ ಅಭ್ಯಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಅರ್ಜಿ ಶುಲ್ಕ

SC/ST/PwBD: 85 ರೂ. ಜೊತೆಗೆ ವಹಿವಾಟು ಶುಲ್ಕಗಳು + GST
ಇತರ ಅಭ್ಯರ್ಥಿಗಳು: 700 ರೂ. ಜೊತೆಗೆ ವಹಿವಾಟು ಶುಲ್ಕಗಳು + GST

LIC AAO AE ನೇಮಕಾತಿ 2025 ಅಧಿಸೂಚನೆಗಾಗಿಇಲ್ಲಿ ಕ್ಲಿಕ್ಕಿಸಿ

ಅರ್ಜಿ ಹೀಗೆ ಸಲ್ಲಿಸಿ

– ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಮೊದಲಿಗೆ ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
– ಮುಖಪುಟದಲ್ಲಿರುವ ಹೊಸ ನೋಂದಣಿಯನ್ನು ಕ್ಲಿಕ್ಕಿಸಿ ಅಲ್ಲಿ ವಿವರಗಳನ್ನು ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
– ನಂತರ ಸೂಕ್ತ ಮಾಹಿತಿಗಳನ್ನು ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
– ಸಹಿ ಮತ್ತು ಫೋಟೋವನ್ನು ಅ‍ಪ್‌ಲೋಡ್‌ ಮಾಡಬೇಕು.
– ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಬೇಕು
– ಇದಾದ ನಂತರ ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಬೇಕು.
– ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯ ಪ್ರಿಂಟ್‌ಔಟ್‌ ತೆಗೆದುಕೊಳ್ಳಬೇಕು.

LIC recruitment 2025 today is the last date to apply AAO AE Post)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories