ಡಿಗ್ರಿ ಆದವರಿಗೆ ಗುಡ್‌ ನ್ಯೂಸ್‌! ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿದೆ 1425 ಹುದ್ದೆಗಳು

ಭಾರತದ ಗ್ರಾಮೀಣ ಬ್ಯಾಂಕ್‌ ಗಳಲ್ಲಿ 3 ನೇ ಅತಿ ದೊಡ್ಡ ಬ್ಯಾಂಕ್‌ ಎಂದು ಹೆಸರು ಗಳಿಸಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಖಾಲಿ ಇರುವ 1425 ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

ಪದವಿ ಪೂರ್ಣಗೊಳಿಸಿ ಬ್ಯಾಂಕಿಂಗ್‌ ವಲಯದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದು ಸುರ್ವಣಾವಕಾಶವಾಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಆಫೀಸ್‌ ಅಸಿಸ್ಟಂಟ್‌, ಅಸಿಸ್ಟಂಟ್ ಮ್ಯಾನೇಜರ್‌ ಸ್ಕೇಲ್‌ –1 ಮತ್ತು ಸ್ಕೇಲ್‌ –2 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ibpsನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಕೊನೆಯ ದಿನ ಸೆಪ್ಟೆಂಬರ್‌ 21 ಆಗಿದೆ.

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತೆ ಮತ್ತು ಮಾನದಂಡಗಳು ಹೀಗಿವೆ.

ಹುದ್ದೆಯ ಹೆಸರು

ಆಫೀಸ್‌ ಅಸಿಸ್ಟಂಟ್‌ (ಮಲ್ಟಿಪರ್ಪಸ್‌), ಅಸಿಸ್ಟಂಟ್ ಮ್ಯಾನೇಜರ್‌ ಸ್ಕೇಲ್‌ –1, ಅಸಿಸ್ಟಂಟ್ ಮ್ಯಾನೇಜರ್‌ ಸ್ಕೇಲ್‌ –2

ಖಾಲಿ ಇರುವ ಹುದ್ದೆಗಳ ಸಂಖ್ಯೆ

ಆಫೀಸ್‌ ಅಸಿಸ್ಟಂಟ್‌ (ಮಲ್ಟಿಪರ್ಪಸ್‌) : 800
ಅಸಿಸ್ಟಂಟ್ ಮ್ಯಾನೇಜರ್‌ ಸ್ಕೇಲ್‌ –1 : 500
ಅಸಿಸ್ಟಂಟ್ ಮ್ಯಾನೇಜರ್‌ ಸ್ಕೇಲ್‌ – 2 : 125

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದಲ್ಲಿ ಪದವಿ, ಸಿಎ, ಎಂಬಿಎ ಶಿಕ್ಷಣ ಪೂರೈಸಿರಬೇಕು.

ಇದನ್ನೂ ಓದಿ: ಐಟಿಐ, ಡಿಪ್ಲೊಮಾ ಆದವರಿಗೆ ಗುಡ್ ನ್ಯೂಸ್! IOCL ನಲ್ಲಿ 537 ಅಪ್ರೆಂಟಿಸ್‌ ಹುದ್ದೆ ನೇಮಕಾತಿ

ವಯೋಮಿತಿ

ಆಫೀಸ್‌ ಅಸಿಸ್ಟಂಟ್‌ (ಮಲ್ಟಿಪರ್ಪಸ್‌): ಕನಿಷ್ಠ ವರ್ಷ 18 ಮತ್ತು ಗರಿಷ್ಠ ವರ್ಷ 28
ಅಸಿಸ್ಟಂಟ್ ಮ್ಯಾನೇಜರ್‌ ಸ್ಕೇಲ್‌ –1: ಕನಿಷ್ಠ ವರ್ಷ 18 ಮತ್ತು ಗರಿಷ್ಠ ವರ್ಷ 30
ಅಸಿಸ್ಟಂಟ್ ಮ್ಯಾನೇಜರ್‌ ಸ್ಕೇಲ್‌ – 2: ಕನಿಷ್ಠ ವರ್ಷ 18 ಮತ್ತು ಗರಿಷ್ಠ ವರ್ಷ 32

ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನಗಳನ್ನು ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪ.ಜಾತಿ/ ಪ.ಪಂ./ ಪಿಡಬ್ಲ್ಯೂಬಿಡಿ/ ಮಾಜಿ ಸೈನಿಕ ಅಭ್ಯರ್ಥಿಗಳು – 175 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಉಳಿದ ಅಭ್ಯರ್ಥಿಗಳು 850 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಕೆ ಹೇಗೆ?

– ಅಭ್ಯರ್ಥಿಗಳು ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಅದಕ್ಕಾಗಿ ಮೊದಲಿಗೆ ibps.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

– ಅಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು ಲಾಗಿನ್‌ ಆಗಿ.

– ಅರ್ಜಿ ನಮೂನೆಯಲ್ಲಿರುವ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.

– ಬಳಿಕ ಅರ್ಜಿ ಶುಲ್ಕವನ್ನು ಪಾವತಿಸಿ, ಪುನಃ ಅರ್ಜಿಯನ್ನು ಪರಿಶೀಲಿಸಿ ಅಂತಿಮಾಗಿ ಸಲ್ಲಿಸಿ.

– ಭವಿಷ್ಯದ ಉಲ್ಲೇಖಗಳಿಗಾಗಿ ಪ್ರಿಂಟ್‌ಔಟ್‌ ತೆಗೆದುಕೊಳ್ಳಲು ಮರೆಯಬೇಡಿ.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನೇಮಕಾತಿ ಅಧಿಸೂಚನೆ

ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ; ವೇತನ 1 ಲಕ್ಷಕ್ಕಿಂತಲೂ ಅಧಿಕ

(Karnataka Grameena Bank Recruitment 2025 apply for office assistant and assistant officer post)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories