ದಿನಭವಿಷ್ಯ : ಈ ರಾಶಿಯವರಿಗೆ ಅಷ್ಟಮ ಚಂದ್ರನ ಪ್ರಭಾವ

Horoscope Today 08 2025 : ದಿನಭವಿಷ್ಯ ಅಕ್ಟೋಬರ್‌ 08 2025, ಈ ರಾಶಿಯ ಮೇಲೆ ಅಷ್ಟಮ ಚಂದ್ರನ ಪ್ರಭಾವ ಇರಲಿದೆ. ಹಾಗಾದ್ರೆ ಯಾವ ರಾಶಿಗೆ ಇಂದು ಯಾವ ರೀತಿಯ ಶುಭಫಲ ದೊರೆಯಲಿದೆ ಎಂದು ತಿಳಿಯೋಣಾ.

ಮೇಷ ರಾಶಿ (Aries)
ನಿಮ್ಮಲ್ಲಿ ಹೊಸ ಉತ್ಸಾಹ, ಶಕ್ತಿ ಕಂಡುಬರುತ್ತದೆ. ಆರಂಭಿಸಿದ ಕೆಲಸಗಳಲ್ಲಿ ಸಕಾರಾತ್ಮಕ ಪ್ರಗತಿ ಕಾಣಲಿದೆ ಸೃಜನಾತ್ಮಕ ಕೆಲಸಗಳಿಗೆ ಉತ್ತಮವಾದಂತಹ ದಿನ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನಕ್ಕೆ ಮನ್ನಣೆ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.

ವೃಷಭ ರಾಶಿ (Taurus)
ಭಾವನಾತ್ಮಕ ವಿಚಾರಗಳಲ್ಲಿ ಗೊಂದಲ ಉಂಟಾಗಬಹುದು. ಮನಸ್ಸಿನ ಶಾಂತಿಗಾಗಿ ವಿಶ್ರಾಂತಿಯ ಜೊತೆಗೆ ಧ್ಯಾನಕ್ಕೆ ಆಧ್ಯತೆ ನೀಡಿ. ಮನೆಯವರೊಂದಿಗೆ ಮಾತನಾಡುವಾಗ ತಾಳ್ಮೆ ಇರಲಿ. ಕೆಲಸದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಆರ್ಥಿಕವಾಗಿ ಸ್ಥಿರತೆ ಇರುತ್ತದೆ, ಆದರೆ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ.

ಮಿಥುನ ರಾಶಿ (Gemini)
ನಿಮ್ಮ ಸಂಪರ್ಕ, ಸಂವಹನ ಕೌಶಲ್ಯಗಳು ನಿಮಗೆ ಪ್ರಯೋಜನ ನೀಡಲಿವೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಹೊಸ ಒಪ್ಪಂದಗಳಿಗೆ ಅಥವಾ ಮಾತುಕತೆಗಳಿಗೆ ಇಂದು ಉತ್ತಮವಾದ ದಿನ. ಆರ್ಥಿಕವಾಗಿ ಹೊಸ ಆದಾಯದ ಮೂಲಗಳು ಗೋಚರಕ್ಕೆ ಬಲಿದೆ.

ಕರ್ಕಾಟಕ ರಾಶಿ (Cancer)
ಕೌಟುಂಬಿಕ ವಿಷಯಗಳಿಗೆ ಹೆಚ್ಚು ಗಮನ ಕೊಡುವಿರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಭಾವನೆಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು, ಆದರೆ ಅದನ್ನು ಯಶಸ್ವಿಯಾಗಿ ನಿಭಾಯಿಸುವಿರಿ. ಹಣಕಾಸಿನ ಹೂಡಿಕೆಗಳ ಬಗ್ಗೆ ಎಚ್ಚರಿಕೆ ಇರಲಿ.

ಸಿಂಹ ರಾಶಿ (Leo)
ಆತ್ಮವಿಶ್ವಾಸ ಹೆಚ್ಚಿರುತ್ತದೆ ಮತ್ತು ನಾಯಕತ್ವ ಗುಣಗಳು ಎದ್ದು ಕಾಣುತ್ತವೆ. ನಿಮ್ಮ ಅಭಿಪ್ರಾಯಗಳಿಗೆ ಇತರರು ಮನ್ನಣೆ ನೀಡುತ್ತಾರೆ. ದೂರ ಪ್ರಯಾಣದ ಅವಕಾಶವಿದೆ. ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ಒಪ್ಪಂದಗಳು ನಡೆಯಬಹುದು.

ಕನ್ಯಾ ರಾಶಿ (Virgo)
ಅಷ್ಟಮ ಚಂದ್ರನ ಪ್ರಭಾವದಲ್ಲಿ ಇರುವುದರಿಂದ ಮನಸ್ಸಿಗೆ ಸ್ವಲ್ಪ ಆತಂಕ ಕಾಡಬಹುದು. ಪ್ರಮುಖ ನಿರ್ಧಾರಗಳನ್ನು ಮುಂದೂಡುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಗಮನವಿರಲಿ. ಕೆಲಸದಲ್ಲಿ ಹೆಚ್ಚು ಶ್ರಮ ಅಗತ್ಯ. ಆರ್ಥಿಕ ವ್ಯವಹಾರಗಳಲ್ಲಿ ಜಾಗರೂಕರಾಗಿರಿ, ಸಾಲ ನೀಡುವುದು ಅಥವಾ ತೆಗೆದುಕೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

ತುಲಾ ರಾಶಿ (Libra)
ವೈಯಕ್ತಿಕ ಸಂಬಂಧಗಳು ಮತ್ತು ಪಾಲುದಾರಿಕೆ ವ್ಯವಹಾರಕ್ಕೆ ಉತ್ತಮವಾದ ದಿನ. ಹೊಸ ಸಂಬಂಧಗಳು ಆರಂಭವಾಗಲಿದೆ. ಅಲ್ಲದೇ ಹಳೆಯ ಸಂಬಂಧಗಳು ಗಟ್ಟಿಯಾಗಲಿದೆ. ನ್ಯಾಯಯುತ ನಿರ್ಧಾರಗಳಿಂದ ಯಶಸ್ಸು. ವ್ಯಾಪಾರ ಪಾಲುದಾರಿಕೆಯಲ್ಲಿ ಉತ್ತಮ ಲಾಭ. ಹಣಕಾಸು ಹೂಡಿಕೆಗಳ ಬಗ್ಗೆ ಸಂಗಾತಿಯೊಂದಿಗೆ ಚರ್ಚಿಸುವುದು ಒಳ್ಳೆಯದು.

ವೃಶ್ಚಿಕ ರಾಶಿ (Scorpio)
ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ಆರೋಗ್ಯವು ಉತ್ತಮವಾಗಿರುತ್ತದೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಾಲ ಅಥವಾ ಕಾಯಿಲೆಗೆ ಸಂಬಂಧಿಸಿದ ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗಬಹುದು.

Horoscope Today 08 2025 : ಧನುಸ್ಸು ರಾಶಿ (Sagittarius)
ಅದೃಷ್ಟವು ನಿಮ್ಮ ಪರವಾಗಿ ಇರುತ್ತದೆ. ಮಕ್ಕಳು ಮತ್ತು ಪ್ರೀತಿಪಾತ್ರರ ಉತ್ತಮ ಸಮಯ ಕಳೆಯುವಿರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಶಿಕ್ಷಣ, ಸಲಹಾ ಮತ್ತು ಮಾರ್ಗದರ್ಶನ ನೀಡುವ ವೃತ್ತಿಗಳಲ್ಲಿ ಯಶಸ್ಸು. ಹೂಡಿಕೆಗಳಿಂದ ಲಾಭ ನಿರೀಕ್ಷೆ ಮಾಡಬಹುದು.

ಮಕರ ರಾಶಿ (Capricorn)
ಮನೆಯ ವಾತಾವರಣವು ಶಾಂತಿಯಿಂದ ಕೂಡಿರುತ್ತದೆ. ಭೂಮಿ, ಆಸ್ತಿ ಮತ್ತು ವಾಹನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸು. ನಿಮ್ಮ ಗುರಿಗಳ ಬಗ್ಗೆ ಸ್ಪಷ್ಟತೆ ಇರಲಿ. ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಕಠಿಣ ಪರಿಶ್ರಮದಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಕುಂಭ ರಾಶಿ (Aquarius)
ಸಂವಹನ ಮತ್ತು ಸಣ್ಣ ಪ್ರಯಾಣ ಲಾಭ. ಒಡಹುಟ್ಟಿದವರ ಸಹಕಾರ ದೊರೆಯಲಿದೆ. ಹೊಸ ಯೋಜನೆಗಳನ್ನು ರೂಪಿಸಲು ಉತ್ತಮ ದಿನ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ಆರ್ಥಿಕ ವಿಷಯಗಳಲ್ಲಿ ಗೊಂದಲ ನಿವಾರಣೆಯಾಗಲಿದೆ.

ಮೀನ ರಾಶಿ (Pisces)
ಕುಟುಂಬದ ಸದಸ್ಯರೊಂದಿಗೆ ಬಾಂಧವ್ಯ ಸುಧಾರಿಸುತ್ತದೆ. ಮಾತಿನ ಮೇಲೆ ಹಿಡಿತವಿರಲಿ. ಆರ್ಥಿಕ ಸ್ಥಿತಿಯನ್ನು ಬಲಪಡಿಸುವತ್ತ ಗಮನಹರಿಸುವಿರಿ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಮಾತು ಇತರರ ಮೇಲೆ ಪ್ರಭಾವ ಬೀರುತ್ತದೆ. ಹೂಡಿಕೆಗಳಿಗೆ ಉತ್ತಮ ಸಮಯ.

Horoscope Today 08 2025 Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories