ಯೂನಿಕ್ ಡಿಸೈನ್ನ ರಿಯಲ್ ಮಿ 15 ಪ್ರೊ ಗೇಮ್ ಆಫ್ ಥ್ರೋನ್ಸ್ ಆವೃತ್ತಿಯ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ
Realme 15 Pro 5G Game of Thrones: ಯೂನಿಕ್ ಡಿಸೈನ್ನ ಫೋನ್ ಅನ್ನು ನೀವು ಹುಡುಕುತ್ತಿದ್ದರೆ ರಿಯಲ್ಮಿ 15 ಪ್ರೊ ಗೇಮ್ ಆಫ್ ಥ್ರೋನ್ಸ್ ಆವೃತ್ತಿಯ ಸ್ಮಾರ್ಟ್ಫೋನ್ ಈ ವಾರ ಭಾರತದಲ್ಲಿ ಬಿಡುಗಡೆಯಾಗಿದೆ.
ಹೊಸ ವಿನ್ಯಾಸ ಮತ್ತು ಕೆಲವು ಬದಲಾವಣೆಗಳೊಂದಿಗೆ ಈ ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಫೋನ್ ಜುಲೈನಲ್ಲಿ ಬಿಡುಗಡೆಯಾದ ರಿಯಲ್ಮಿ 15 ಪ್ರೊ 5ಜಿಯ ಲಿಮಿಟೆಡ್ ಆವೃತ್ತಿಯಾಗಿದೆ.
ಹೊಸದಾಗಿ ಬಿಡುಗಡೆಯಾದ ರಿಯಲ್ಮಿ ಫೋನ್ನಲ್ಲಿ, ಸ್ಟ್ಯಾಂಡರ್ಡ್ ಮಾದರಿಯ ಅದೇ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ. ಆದರೆ ಸ್ಟೈಲಿಶ್ ನ್ಯಾನೋ-ಕೆತ್ತನೆಯ ಮೋಟಿಫ್ಗಳು ಮತ್ತು ಕಸ್ಟಮ್ ಬಳಕೆದಾರ ಇಂಟರ್ಫೇಸ್ (UI) ಥೀಮ್ ಸೇರಿದಂತೆ HBO ನ ಗೇಮ್ ಆಫ್ ಥ್ರೋನ್ಸ್ (Game of Thrones) ಸರಣಿಯಿಂದ ಪ್ರೇರಿತವಾದ ಕಾಸ್ಮೆಟಿಕ್ ಬದಲಾವಣೆಗಳನ್ನು ಇದರಲ್ಲಿ ಕಾಣಬಹುದಾಗಿದೆ.
ಹೊಸ ಡಿಸೈನ್ನ ಈ ಫೋನ್ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳು ಒಳಗೊಂಡಿವೆ ಎಂದು ನೋಡೋಣ.
ರಿಯಲ್ಮಿ 15 ಪ್ರೊ ಗೇಮ್ ಆಫ್ ಥ್ರೋನ್ಸ್ ಆವೃತ್ತಿಯ ಸ್ಮಾರ್ಟ್ಫೋನ್ ವಿನ್ಯಾಸ ಹೇಗಿದೆ?
ರಿಯಲ್ಮಿ 15 ಪ್ರೊ ಗೇಮ್ ಆಫ್ ಥ್ರೋನ್ಸ್ ಆವೃತ್ತಿಯ ಸ್ಮಾರ್ಟ್ಫೋನ್ ಲಿಮಿಟೆಡ್ ಎಡಿಷನ್ ಆಗಿದೆ. ಇದು ವಿಶೇಷ ಕಪ್ಪು ಮತ್ತು ಚಿನ್ನದ ವಿನ್ಯಾಸ ಹೊಂದಿದೆ. ಕ್ಯಾಮೆರಾ ಜಾಗದಲ್ಲಿ 3D ಡ್ರಾಗನ್ ಕ್ಲೌ ಬಾರ್ಡರ್ ಮತ್ತು ಮೋಟಿಪ್ಸ್ ಹೊಂದಿದೆ.
3 ಬೇರೆ ಬೇರೆ ಲನ್ಸ್ ಸುತ್ತ ಚಿನ್ನದ ರಿಂಗ್ ವಿನ್ಯಾಸವಿದೆ. ಪೋನ್ನ ಕೆಳಭಾಗದಲ್ಲಿ ಗೇಮ್ ಆಫ್ ಥ್ರೋನ್ಸ್ ಸರಣಿಯ ಹೌಸ್ ಟಾರ್ಗರಿಯನ್ ಲಾಂಛನ ಕಾಣಬಹುದಾಗಿದೆ. ಇದು 3 ತಲೆಯ ಡ್ರ್ಯಾಗನ್ ಅನ್ನು ಪ್ರತಿನಿಧಿಸುತ್ತದೆ.
ಕಂಪನಿಯ ಪ್ರಕಾರ ಫೋನ್ನ ಹಿಂಭಾಗವು ಬಣ್ಣ ಬದಲಾಯಿಸುವ ಲೆದರ್ ಬ್ಯಾಕ್ ಪೆನಲ್ ಅನ್ನು ಹೊಂದಿದೆ. ಫೋನ್ನ ಬ್ಯಾಕ್ ಪೆನಲ್ ಕಪ್ಪು ಬಣ್ಣದಲ್ಲಿ ಕಂಡುಬಂದರೂ ಅದು 42 ಡಿಗ್ರಿ ಸೆಲ್ಸಿಯಸ್ನಲ್ಲಿ ಅಥವಾ ಅದಕ್ಕಿಂತ ಹೆಚ್ಚು ತಾಪಮಾನದಲ್ಲಿದ್ದಾಗ ಅದರ ಬಣ್ಣವು ಕೆಂಪು ಬಣ್ಣದಲ್ಲಿ ಹೊಳೆಯುತ್ತದೆ.
ಈ ಫೋನ್ನಲ್ಲಿ ಬಳಕೆದಾರರಿಗಾಗಿ Game of Thrones ವಾಲ್ಪೇಪರ್ಗಳು ಮತ್ತು ಐಕಾನ್ಗಳು ಸಹ ಲಭ್ಯವಿರುತ್ತದೆ.
ಇದನ್ನೂ ಓದಿ: 50MP ಸೆಲ್ಪಿ ಕ್ಯಾಮೆರಾ, 200MP ಮೇನ್ ಕ್ಯಾಮೆರಾ ಇರುವ ವಿವೋ V60e ಸ್ಮಾರ್ಟ್ ಫೋನ್ ಭಾರತದಲ್ಲಿ ಬಿಡುಗಡೆ
ರಿಯಲ್ಮಿ 15 ಪ್ರೊ ಗೇಮ್ ಆಫ್ ಥ್ರೋನ್ಸ್ ಆವೃತ್ತಿಯ ಸ್ಮಾರ್ಟ್ಫೋನ್ ವೈಶಿಷ್ಟ್ಯಗಳೇನು?
ಈಗ ಬಿಡುಗಡೆಯಾಗಿರುವ ರಿಯಲ್ಮಿ 15 ಪ್ರೊ 5G ಗೇಮ್ ಆಫ್ ಥೋನ್ಸ್ ಲಿಮಿಟೆಡ್ ಎಡಿಷನ್ ಫೋನ್, ಸ್ಟ್ಯಾಂಡರ್ಡ್ ಮಾಡೆಲ್ನ ವೈಶಿಷ್ಟ್ಯಗಳನ್ನೇ ಎರವಲು ಪಡೆದುಕೊಂಡಿದೆ. ಡ್ಯುಯಲ್-ಸಿಮ್ (ನ್ಯಾನೋ + ನ್ಯಾನೋ) ಬೆಂಬಲದೊಂದಿಗೆ ಬರುತ್ತದೆ.
ರಿಯಲ್ಮಿ UI 6.0 ಆಧಾರಿತ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.8-ಇಂಚಿನ 1.5K (2800×1280 ಪಿಕ್ಸೆಲ್ಗಳು) AMOLED ಡಿಸ್ಪ್ಲೇ ಯನ್ನು 144Hz ವರೆಗಿನ ರಿಫ್ರೆಶ್ ದರ, 2500Hz ವರೆಗಿನ ಇನ್ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ದರ ಮತ್ತು 6500 nits ವರೆಗಿನ ಗರಿಷ್ಠ ಹೊಳಪನ್ನು ಹೊಂದಿದೆ.
ಇದರ ಡಿಸ್ಪ್ಲೇಯನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ನಿಂದ ರಕ್ಷಿಸಲಾಗಿದೆ. ಈ ಫೋನ್ ಸ್ನಾಪ್ಡ್ರಾಗನ್ 7ನೇ ಜನರೇಷನ್ 4 ಪ್ರೊಸೆಸರ್, 12GB ವರೆಗೆ LPDDR4x RAM ಮತ್ತು 512GB ವರೆಗೆ ಆಂತರಿಕ UFS 3.1 ಸಂಗ್ರಹಣೆಯನ್ನು ಹೊಂದಿದೆ.
ಕ್ಯಾಮೆರಾಗಳಿಗಾಗಿ, ಇದು 50-ಮೆಗಾಪಿಕ್ಸೆಲ್ ಸೋನಿ IMX896 ಪ್ರಾಥಮಿಕ ಹಿಂಭಾಗದ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಅಲ್ಪಾವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ ಸೆಲ್ಪಿ ಮತ್ತು ವೀಡಿಯೊ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಈ ಫೋನ್ನಲ್ಲಿನ 5G, 4G, Wi-Fi, ಬ್ಲೂಟೂತ್ 5.4, GPS ಮತ್ತು USB ಟೈಪ್-C ಪೋರ್ಟ್ ಸಂಪರ್ಕ ಆಯ್ಕೆಗಳು ಸೇರಿಕೊಂಡಿವೆ. ಸುರಕ್ಷತೆಗಾಗಿ, ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಇದೆ.
ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಫೋನ್ IP66+IP68+IP69 ರೇಟಿಂಗ್ ಅನ್ನು ಹೊಂದಿದೆ. ಈ ಫೋನ್ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7000mAh ಬ್ಯಾಟರಿಯೊಂದಿಗೆ ಬರುತ್ತದೆ.
ಬೆಲೆ ಎಷ್ಟು?
ರಿಯಲ್ಮಿ 15 ಪ್ರೊ 5G ಗೇಮ್ ಆಫ್ ಥೋನ್ಸ್ ಲಿಮಿಟೆಡ್ ಆವೃತ್ತಿಯನ್ನು ಭಾರತದಲ್ಲಿ 12GB RAM ಮತ್ತು 512GB ಸ್ಟೋರೇಜ್ನೊಂದಿಗೆ ಒಂದೇ ಕಾನ್ಸಿಗರೇಶನ್ನಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 44,999 ರೂ. ಆಗಿದೆ.
ಇದಕ್ಕೆ ಗ್ರಾಹಕರು 3,000 ರೂ. ಬ್ಯಾಂಕ್ ಆಫರ್ ಅನ್ನು ಪಡೆಯಬಹುದು. ಇದರಿಂದಾಗಿ ಈ ಫೋನ್ ನ ನೈಜ ಬೆಲೆ 41,999 ರೂ. ಕ್ಕೆ ಇಳಿಯುತ್ತದೆ. ಇದು ಫಿಪ್ಕಾರ್ಟ್ ಮತ್ತು ದೇಶಾದ್ಯಂತದ ರಿಟೇಲ್ ಅಂಗಡಿಗಳಲ್ಲಿ ಲಭ್ಯವಿರುತ್ತದೆ.
ವಿಶಿಷ್ಟ ಪ್ಯಾಕೇಜ್ನಲ್ಲಿ ಬರುತ್ತದೆ?
ಗ್ರಾಹಕರು ಈ ಫೋನ್ ಅನ್ನು ವಿಶಿಷ್ಟ ಪ್ಯಾಕೇಜಿಂಗ್ ಬಾಕ್ಸ್ನಲ್ಲಿ ಪಡೆದುಕೊಳ್ಳುತ್ತಾರೆ. ಅದನೇಂದರೆ ಇದರಲ್ಲಿ ಐರನ್ ಥ್ರೋನ್ ಫೋನ್ ಸ್ಟ್ಯಾಂಡ್, ಕಿಂಗ್ಸ್ ಹ್ಯಾಂಡ್ ಪಿನ್, ವೆಸ್ಟೆರೋಸ್ನ ಮಿನಿಯೇಚರ್ (ಇದನ್ನು ಕೂಡಾ ಮೊಬೈಲ್ ಸ್ಟ್ಯಾಂಡ್ ನಂತೆಯೇ ಬಳಸಿಕೊಳ್ಳಬಹುದಾಗಿದೆ), ಮತ್ತು ಗೇಮ್ ಆಫ್ ಥ್ರೋನ್ಸ್ ಬ್ರಾಂಡ್ ಸ್ಟಿಕ್ಕರ್ಗಳು, ಪೋಸ್ಟ್ ಕಾರ್ಡ್ಗಳು ಮತ್ತು ಇತರ ಪರಿಕರಗಳು ಸೇರಿಕೊಂಡಿವೆ.
ಇದನ್ನೂ ಓದಿ: ಸ್ಯಾಮ್ಸಂಗ್ನ ಅತ್ಯಂತ ಅಗ್ಗದ ಫೋನ್ ಗ್ಯಾಲಕ್ಸಿ S25 FE ಬಿಡುಗಡೆ: 4 ಕ್ಯಾಮೆರಾ, AI ತಂತ್ರಜ್ಞಾನ ಇದರ ವೈಶಿಷ್ಟ್ಯ
(Unique Design Realme 15 pro 5g game of thrones limited edition phone launched in India)



