ಎಸ್ಬಿಐ ಗ್ರಾಹಕರೇ ಗಮನಿಸಿ : ಅಕ್ಟೋಬರ್ 11ರಂದು ಯುಪಿಐ ಸೇರಿ ಡಿಜಿಟಲ್ ಸೇವೆ ಬಂದ್
SBI UPI Transfer: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಪ್ರಮುಖ ಸೂಚನೆ ನೀಡಿದೆ. ನಿಗದಿತ ತಾಂತ್ರಿಕ ನಿರ್ವಹಣಾ ಕಾರ್ಯಗಳ ಕಾರಣದಿಂದಾಗಿ ನಾಳೆ, ಅಂದರೆ ಅಕ್ಟೋಬರ್ 11, 2025 ರ ಮುಂಜಾನೆ ಒಂದು ಗಂಟೆಯವರೆಗೆ ಬ್ಯಾಂಕಿನ ಹಲವು ಪ್ರಮುಖ ಡಿಜಿಟಲ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಎಸ್ಬಿಐ ತಿಳಿಸಿದೆ.
ಅಕ್ಟೋಬರ್ 11 ರಂದು ಮುಂಜಾನೆ 1:10 ರಿಂದ 2:10 ಗಂಟೆಯವರೆಗೆ (ಒಟ್ಟು 60 ನಿಮಿಷಗಳು) ನಡೆಯಲಿದೆ. ಸಾಮಾನ್ಯವಾಗಿ, ಈ ಅವಧಿಯಲ್ಲಿ ಬ್ಯಾಂಕಿಂಗ್ ವ್ಯವಹಾರಗಳು ಕಡಿಮೆ ಇರುವುದರಿಂದ, ಗ್ರಾಹಕರಿಗೆ ಆಗುವ ಅನಾನುಕೂಲತೆಯನ್ನು ಕನಿಷ್ಠಗೊಳಿಸಲು ಈ ಸಮಯವನ್ನು ಆಯ್ಕೆ ಮಾಡಲಾಗಿದೆ.
Also Read: ರೇಷನ್ ಕಾರ್ಡ್- ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ?
ಯಾವ ಸೇವೆಗಳು ಸ್ಥಗಿತಗೊಳ್ಳುತ್ತವೆ ?
- ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI)
- ಯೋನೋ (YONO) ಅಪ್ಲಿಕೇಶನ್
- ಇಂಟರ್ನೆಟ್ ಬ್ಯಾಂಕಿಂಗ್
- ಐಎಂಪಿಎಸ್ (IMPS)
- ಎನ್ಇಎಫ್ಟಿ (NEFT) ಮತ್ತು ಆರ್ಟಿಜಿಎಸ್ (RTGS)
ತಾಂತ್ರಿಕ ಅಡಚಣೆಯಿಂದಾಗಿ ಯಾವುದೇ ತುರ್ತು ವಹಿವಾಟಿಗೆ ತೊಂದರೆ ಆಗದಂತೆ, ಬ್ಯಾಂಕ್ ಗ್ರಾಹಕರು ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸಬಹುದು:
Also read: ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ವರ್ಷದ ಅತಿದೊಡ್ಡ ಹಬ್ಬದ ಮಾರಾಟ ಪ್ರಾರಂಭ
ನಾಳೆ ಯಾವೆಲ್ಲಾ ಸೇವೆಗಳು ಲಭ್ಯ ?
ATM ಸೇವೆಗಳು: ಎಟಿಎಂ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ.
UPI Lite: ₹1000 ಕ್ಕಿಂತ ಕಡಿಮೆ ಮೌಲ್ಯದ ಸಣ್ಣ ಮೊತ್ತದ ವಹಿವಾಟುಗಳಿಗೆ ನೀವು UPI Lite ಸೇವೆಯನ್ನು ಬಳಸುವುದನ್ನು ಮುಂದುವರಿಸಬಹುದು.
ಯಾವುದೇ ತುರ್ತು ಹಣಕಾಸು ವಹಿವಾಟುಗಳಿದ್ದರೆ, ಅವುಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಅಥವಾ ನಿರ್ವಹಣೆ ಮುಗಿದ ನಂತರ ಪೂರ್ಣಗೊಳಿಸುವಂತೆ ಎಸ್ಬಿಐ ತನ್ನ ಗ್ರಾಹಕರಿಗೆ ಮನವಿ ಮಾಡಿದೆ.



