ಪೊಲೀಸ್ ಅಧಿಕಾರಿಯಿಂದ ಸರ್ಕಾರಿ ವೈದ್ಯೆ ಮೇಲೆ ನಿರಂತರ ಅತ್ಯಾ*ಚಾರ : ಅಂಗೈಯಲ್ಲಿ ಡೆತ್ ನೋಟ್ ಬರೆದು ಸಂತ್ರಸ್ತೆ ಸಾವು
Government doctor death: ನಿರಂತರ ಅತ್ಯಾಚಾರ ಹಾಗೂ ಮಾನಸಿಕ ಕಿರುಕುಳವನ್ನು ಸಹಿಸಲು ಸಾಧ್ಯವಾಗದೇ ಮಹಿಳಾ ವೈದ್ಯೆಯೊಬ್ಬರು ಹೋಟೆಲ್ ಕೋಣೆಯೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಐದು ತಿಂಗಳಿನಿಂದ ಪೊಲೀಸ್ ಅಧಿಕಾರಿಯೊಬ್ಬರು ನನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾರೆ ಹಾಗೂ ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ತಮ್ಮ ಕೈ ಮೇಲೆ ಡೆತ್ ನೋಟ್ ಬರೆದಿದ್ದು ವೈದ್ಯೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ವೈದ್ಯೆ ಈಕೆ ಎಂದು ತಿಳಿದುಬಂದಿದೆ.
ತಮ್ಮ ಕೈ ಮೇಲೆ ಬರೆದುಕೊಂಡಿರುವ ಡೆತ್ ನೋಟ್ನಲ್ಲಿ ವೈದ್ಯೆಯು ಪೊಲೀಸ್ ಅಧಿಕಾರಿ ಗೋಪಾಲ್ ಬದನೆ ಎಂಬವರೇ ತನ್ನ ಸಾವಿಗೆ ಕಾರಣ ಎಂದು ಬರೆದಿದ್ದಾರೆ. ಐದು ತಿಂಗಳ ಅವಧಿಯಲ್ಲಿ ಈತ ಹಲವು ಬಾರಿ ನನ್ನ ಮೇಲೆ ಅತ್ಯಾಚಾರಗೈದಿದ್ದಾನೆ.
ಈಕೆಯು ಬರೆದಿರುವ ಡೆತ್ ನೋಟ್ ಪ್ರಶಾಂತ್ ಬಂಕರ್ ಎಂಬ ಮತ್ತೊಬ್ಬ ವ್ಯಕ್ತಿಯ ಹೆಸರೂ ಇದ್ದು ಈತ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಮೃತ ವೈದ್ಯೆ ಉಲ್ಲೇಖಿಸಿದ್ದಾರೆ. ಪ್ರಶಾಂತ್ ಬಂಕರ್ ವೈದ್ಯೆ ವಾಸವಿದ್ದ ಬಾಡಿಗೆ ಮನೆಯ ಮಾಲೀಕನ ಪುತ್ರ ಎಂದು ತಿಳಿದುಬಂದಿದೆ. 28 ವರ್ಷದ ಮೃತ ವೈದ್ಯೆ ಬೀಡ್ ಜಿಲ್ಲೆಯವರಾಗಿದ್ದು, ಫಾಲ್ಟನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದರು.
Also Read: ಶಾಲಾ ಸಮವಸ್ತ್ರದಲ್ಲೇ ಸಾರಾಯಿ ಅಂಗಡಿಗೆ ತೆರಳಿ ಮದ್ಯ ಖರೀದಿಸಿದ ವಿದ್ಯಾರ್ಥಿನಿಯರು..!
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವೈದ್ಯೆಯ ಕೈಯಲ್ಲಿ ಬರೆದುಕೊಂಡಿರುವ ಆತ್ಮಹತ್ಯಾ ಪತ್ರದ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯ ತನಿಖೆ ಆರಂಭಿಸಿದೆ. ಈ ಎಲ್ಲದರ ನಡುವೆ ಆರೋಪಿ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹಾಗೂ ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ವಿಚಾರದ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅವರಿಬ್ಬರ ವಿರುದ್ಧ ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪಿಎಸ್ಐ ಆಗಿದ್ದು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಇಬ್ಬರೂ ಆರೋಪಿಗಳ ಪತ್ತೆಗಾಗಿ ನಮ್ಮ ತಂಡ ಶೋಧ ಕಾರ್ಯ ಚುರುಕುಗೊಳಿಸಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಿಎಂ ದೇವೇಂದ್ರ ಫಡ್ನವಿಸ್, ಸತಾರಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ ಮೃತ ವೈದ್ಯೆಯ ಡೆತ್ನೋಟ್ನಲ್ಲಿದ್ದ ಅಧಿಕಾರಿಯನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸುವಂತೆ ಸೂಚನೆ ನೀಡಿದ್ದರು.
ಆದರೆ ಸಂತ್ರಸ್ತೆ ಕುಟುಂಬಸ್ಥರು ಡೆತ್ನೋಟ್ನಲ್ಲಿರುವ ವ್ಯಕ್ತಿಗಳು ಅಪರಾಧ ನಡೆಸಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಆಸ್ಪತ್ರೆಯಲ್ಲಿ ತಪ್ಪು ಮರಣೋತ್ತರ ವರದಿಗಳನ್ನು ಸಿದ್ಧಪಡಿಸುವಂತೆ ಆಕೆಯ ಮೇಲೆ ಒತ್ತಡ ಹೇರಲಾಗುತ್ತಿತ್ತು.
Also Read: ಜಾತ್ರೆ ಮುಗಿಸಿ ಬರುತ್ತಿದ್ದ ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾ*ಚಾರ : ಆರೋಪಿಗಳ ಬಂಧನ
ಪೊಲೀಸರು ಹಾಗೂ ರಾಜಕೀಯ ಒತ್ತಡ ಆಕೆಯ ಮೇಲಿರುತ್ತಿತ್ತು. ಈ ಬಗ್ಗೆ ಆಕೆ ದೂರು ನೀಡಲು ಪ್ರಯತ್ನಿಸಿದ್ದಳು. ಆಕೆ ಪ್ರತಿಭಾನ್ವಿತ ವೈದ್ಯೆ. ನಾವು ಬಾಲ್ಯದಿಂದಲೂ ಆಕೆಯನ್ನು ನೋಡಿದ್ದೇವೆ. ಅವಳ ಕಲಿಕೆಗೆ ಬೆಂಬಲ ನೀಡಿದ್ದೇವೆ.
ಆದರೆ ಆಕೆಗೆ ಕೆಲಸದಲ್ಲಿ ತುಂಬಾ ಒತ್ತಡವಿತ್ತು. ಇದೇ ಕಾರಣಕ್ಕೆ ಆಕೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ. ನಮಗೆ ನ್ಯಾಯ ಸಿಗಬೇಕು. ಹಾಗೂ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ಎರಡು ದಿನಗಳ ಹಿಂದೆಯಷ್ಟೇ ತನಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳವಿದೆ ಎಂದು ಆಕೆ ಹೇಳಿಕೊಂಡಿದ್ದಳು. ಪೊಲೀಸರು ಈ ಆಯಾಮದಲ್ಲಿಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.



