ಮುದ್ರಣ ಶಾಹಿಯಿಂದ ಕ್ಯಾನ್ಸರ್ ಅಪಾಯ..ಇನ್ಮುಂದೆ ತಿಂಡಿ ಜೊತೆ ಪೇಪರ್ ಬಳಕೆ ನಿಷೇಧ!
ದೇಶಾದ್ಯಂತ ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಈ ಮಹತ್ವದ ಆದೇಶವನ್ನು ಹೊರಡಿಸಲಾಗಿದ್ದು, ಯಾವುದೇ ತರಹದ ಆಹಾರ ಪದಾರ್ಥಗಳ ಪಾರ್ಸೆಲ್ ಕಟ್ಟಲು ಪೇಪರ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಹೋಟೆಲ್ಗಳು, ಬೇಕರಿಗಳು ಹಾಗೂ ಬೀದಿಬದಿ ವ್ಯಾಪಾರ ಕೇಂದ್ರಗಳಲ್ಲಿ ಬಿಸಿ ಬಿಸಿಯಾದ ತಿಂಡಿ ತಿನಿಸುಗಳನ್ನು ವೃತ್ತಪತ್ರಿಕೆಗಳಲ್ಲಿ ಸೃತ್ತಿ ಗ್ರಾಹಕರಿಗೆ ನೀಡುವ ದಶಕಗಳ ಹಳೆಯ ಅಭ್ಯಾಸಕ್ಕೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಕಟ್ಟುನಿಟ್ಟಿನ ಬ್ರೇಕ್ ಹಾಕಿದೆ. ದೇಶಾದ್ಯಂತ ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಈ ಮಹತ್ವದ ಆದೇಶವನ್ನು ಹೊರಡಿಸಲಾಗಿದ್ದು, ಯಾವುದೇ ತರಹದ ಆಹಾರ ಪದಾರ್ಥಗಳ ಪಾರ್ಸೆಲ್ ಕಟ್ಟಲು ಪೇಪರ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ವೃತ್ತಪತ್ರಿಕೆಗಳನ್ನು ಮುದ್ರಿಸಲು ಉಪಯೋಗಿಸುವ ಶಾಯಿಯಲ್ಲಿ ಸೀಸ, ಹೆವಿ ಮೆಟಲ್ ಹಾಗೂ ಇನ್ನುಳಿದ ಅಪಾಯಕಾರಿ ರಾಸಾಯನಿಕ ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡುಬರುತ್ತವೆ. ಬೋಂಡಾ, ಬಜ್ಜಿ, ಸಮೋಸಾದಂತಹ ತೈಲಮುಕ್ತ ಹಾಗೂ ಬಿಸಿಯಾದ ಆಹಾರಗಳನ್ನು ಇಂತಹ ಪತ್ರಿಕೆಗಳ ಮೇಲೆ ಇಟ್ಟಾಗ, ತಾಪಮಾನದ ತೀವ್ರತೆಗೆ ಶಾಯಿಯು ಕರಗಿ ನೇರವಾಗಿ ಆಹಾರವನ್ನು ಕಲುಷಿತಗೊಳಿಸುತ್ತದೆ. ಇಂತಹ ವಿಷಕಾರಿ ರಾಸಾಯನಿಕಯುಕ್ತ ಆಹಾರವನ್ನು ನಿರಂತರವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ತೊಂದರೆಗಳು, ನರಮಂಡಲದ ದೌರ್ಬಲ್ಯ, ರೋಗನಿರೋಧಕ ಶಕ್ತಿ ಕುಂಠಿತವಾಗುವುದು ಮಾತ್ರವಲ್ಲದೆ ಕ್ಯಾನ್ಸರ್ನಂತಹ ಭೀಕರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಇರುತ್ತವೆ ಎಂದು ವೈದ್ಯಕೀಯ ವರದಿಗಳು ಎಚ್ಚರಿಸಿವೆ.
ವ್ಯಾಪಾರಿಗಳು ಆರ್ಥಿಕ ಲಾಭದ ಉದ್ದೇಶದಿಂದ ಸಾರ್ವಜನಿಕರ ಜೀವದ ಜೊತೆ ಆಟವಾಡುವುದು ಸರಿಯಲ್ಲ ಎಂದು ಪ್ರಾಧಿಕಾರ ಆಕ್ರೋಶ ವ್ಯಕ್ತಪಡಿಸಿದೆ. ಪೇಪರ್ ಬಳಕೆಗೆ ಪರ್ಯಾಯವಾಗಿ ಪರಿಸರಸ್ನೇಹಿ ಹಾಗೂ ಆರೋಗ್ಯಕ್ಕೆ ಪೂರಕವಾದ ಬಾಳೆ ಎಲೆಗಳು ಅಥವಾ ಗುಣಮಟ್ಟದ ಫುಡ್-ಗ್ರೇಡ್ ಕವರ್ಗಳನ್ನು ಬಳಸುವಂತೆ ಮಾರ್ಗಸೂಚಿ ನೀಡಲಾಗಿದೆ. ಕೇವಲ ನಿಯಮ ಜಾರಿಗೊಳಿಸುವುದಷ್ಟೇ ಅಲ್ಲದೆ, ಗ್ರಾಹಕರು ಸಹ ಜಾಗೃತರಾಗಬೇಕಿದೆ. ಪತ್ರಿಕೆಗಳಲ್ಲಿ ಸುತ್ತಿ ಕೊಡುವ ಆಹಾರ ಪದಾರ್ಥಗಳನ್ನು ಖರೀದಿಸದೆ ತಿರಸ್ಕರಿಸುವ ಮೂಲಕ ಸಾರ್ವಜನಿಕರು ಈ ಹೊಸ ಆರೋಗ್ಯಕರ ಬದಲಾವಣೆಗೆ ಕೈಜೋಡಿಸಬೇಕೆಂದು ಮನವಿ ಮಾಡಲಾಗಿದೆ.



