ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸದಾ ನೆನಪಿನಲ್ಲಿ ಉಳಿಯುವ ಚಲನಚಿತ್ರಗಳ ಪಟ್ಟಿ

ಕನ್ನಡ ಚಿತ್ರರಂಗದ ಶ್ರೇಷ್ಠ ಹಾಗೂ ಅತ್ಯಂತ ಜನಪ್ರಿಯ ನಟ ಎಂದರೆ ಡಾ. ಪುನಿತ್ ರಾಜ್ ಕುಮಾರ್. ಅಭಿಮಾನಿಗಳಿಂದ ‘ಅಪ್ಪು’ ಅಂತಲೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಇವರು ಬಾಲ್ಯದಲ್ಲಿಯೇ ನಟನೆಯನ್ನು ಮೈಗೂಡಿಸಿಕೊಂಡವರು. ನಟನೆಯ ಜೊತೆಜೊತೆಗೆ ಅದ್ಭುತ ನೃತ್ಯ, ಹಾಡುಗಾರಿಕೆ, ನಿರೂಪಣೆ ಮೂಲಕ ಜನಮಾನಸದಲ್ಲಿ ಅದ್ಭುತ ನಾಯಕನಾಗಿ ಉಳಿದಿದ್ದಾರೆ. ಅಲ್ಲದೇ ಅನಾಥಾಶ್ರಮ, ವೃದ್ಧಾಶ್ರಮಗಳನ್ನು ನಡೆಸುತ್ತಾ ದಾನ ದತ್ತಿ ಸೇರಿದಂತೆ ಹಲವು ಲೋಕೋಪಯೋಗಿ ಕಾರ್ಯ ಮಾಡಿದ್ದಾರೆ.

ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನಿತ್ ರಾಜ್ ಕುಮಾರ್ ಅವರು ಪ್ರೇಮದ ಕಾಣಿಕೆ, ವಸಂತ ಗೀತ, ಭಾಗ್ಯವಂತ, ಚಲಿಸುವ ಮೋಡಗಳು, ಬೆಟ್ಟದ ಹೂವು, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ ಎಂಬ ಪೌರಾಣಿಕ ಚಿತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಇವರ ಬೆಟ್ಟದ ಹೂವು ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಈ ಬಾಲ ಕಲಾವಿದನಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ.

ಸ್ಯಾಂಡಲ್ ವುಡ್ ನ ‘ಪವರ್ ಸ್ಟಾರ್’ ಎಂದೇ ಖ್ಯಾತಿ ಪಡೆದ ಪುನಿತ್ ರಾಜ್ ಕುಮಾರ್ ಅವರು 2002 ರಲ್ಲಿ ‘ಅಪ್ಪು’ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ಗುರು ಕಿರಣ್ ಅವರ ಸಂಗೀತ ಒಳಗೊಂಡ ಈ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸಿದರು. ಇದರಲ್ಲಿ ಕಾಲೇಜು ಹುಡುಗನ ಪಾತ್ರದಲ್ಲಿ ಪುನಿತ್ ಕಾಣಿಸಿಕೊಂಡರು. ಈ ಚಿತ್ರದ ಯಶಸ್ಸು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ರಿಮೇಕ್ ಗೆ ನಾಂದಿಯಾಯಿತು.

2003 ರಲ್ಲಿ ‘ಅಭಿ’ ಚಿತ್ರದಲ್ಲಿ ರಮ್ಯಾ ಜೊತೆಗೆ ನಟಿಸಿದರು.

2004 ರಲ್ಲಿ ‘ವೀರ ಕನ್ನಡಿಗ’ ಎಂಬ ಚಿತ್ರದಲ್ಲಿ ಅಭಿನಯಿಸಿದರು. ಹಾಗೆಯೇ ‘ಮೌರ್ಯ’ ದಲ್ಲಿ ನಟಿಸಿದರು. ಇದು ತೆಲುಗಿನಲ್ಲಿ ರಿಮೇಕ್ ಆಗಿದೆ. ಇದು ಅವರ ಖ್ಯಾತಿ ಹೆಚ್ಚಿಸಿತು.

2005 ರಲ್ಲಿ ‘ ಆಕಾಶ್ ‘ ಸಿನಿಮಾದಲ್ಲಿ ಮತ್ತೊಮ್ಮೆ ನಟಿ ರಮ್ಯಾ ಜೊತೆಗೆ ನಟಿಸಿದರು. ಹಾಗೆಯೇ ‘ ಬಸವ’ ಸಿನಿಮಾದಲ್ಲಿ ಗೌರಿ ಮಂಜಾಲ್ ಜೊತೆ ಕಾಣಿಸಿಕೊಂಡರು.

2006 ರಲ್ಲಿ ಅಜಯ್

2007 ರಲ್ಲಿ ‘ಅರಸು’ ಹಾಗೂ ಪ್ರಸಿದ್ಧ ಸಿನಿಮಾ ಗಳಲ್ಲಿ ಒಂದಾದ ‘ಮಿಲನ’

2008 ರಲ್ಲಿ ವಂಶಿ, ಬಿಂದಾಸ್, ರಾಮ್

2010 ರಲ್ಲಿ ‘ಪೃಥ್ವಿ’ ಇದರಲ್ಲಿ ಅವರು ಬಳ್ಳಾರಿಯಲ್ಲಿನ ಬೃಷ್ಟಾಚಾರದ ವಿರುದ್ಧ ಹೋರಾಡುವ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ‘ಜಾಕಿ’ ಎಂಬ ಯಶಸ್ವಿ ಸಿನಿಮಾ ಮಾಡಿದರು. ನಂತರ ‘ಹುಡುಗರು’ ಚಿತ್ರದಲ್ಲಿ ಅಭಿನಯಿಸಿದರು.

2011 ರಲ್ಲಿ ಪರಮಾತ್ಮ

2012 ರಲ್ಲಿ ಅಣ್ಣಾ ಬಾಂಡ್

2014 ರಲ್ಲಿ ‘ನಿನ್ನಿಂದಲೇ’ ಜೊತೆಗೆ ‘ಪವರ್’ ಸಿನಿಮಾ ಬಹಳ ಹೆಸರು ಮಾಡಿತು.

2015 ರಲ್ಲಿ ‘ರಣ ವಿಕ್ರಮ’ ಎಂಬ ಆಕ್ಷನ್ ಚಿತ್ರ

2016 ರಲ್ಲಿ ಚಕ್ರವ್ಯೂಹ, ದೊಡ್ ಮನೆ ಹುಡ್ಗ

2017 ರಲ್ಲಿ ರಾಜಕುಮಾರ ಹಾಗೂ ಅಂಜನಿ ಪುತ್ರ

2019 ರಲ್ಲಿ ನಟ ಸಾರ್ವಭೌಮ

2021 ರಲ್ಲಿ ‘ಯುವರತ್ನ’ ಇದು ಶಿಕ್ಷಣ ವ್ಯವಸ್ಥೆಯ ಖಾಸಗಿಕರಣದ ಮೇಲೆ ಕೇಂದ್ರಿತವಾದ ಚಿತ್ರವಾಗಿದೆ.

ಹೀಗೆ ಇವರು ನಟನೆಯ ಮೂಲಕ ಕನ್ನಡ ಚಿತ್ರರಂಗವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories