Karnataka software exports : ದೇಶದ ಸಾಫ್ಟ್‌ವೇ‌ರ್ ರಫ್ತಿನಲ್ಲಿ ಯಶ ಕಂಡ ಕರ್ನಾಟಕ

Karnataka software exports : ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್‌ವೇ‌ರ್ ಸೇವೆಗಳು ಆರ್ಥಿಕ ಪ್ರಗತಿಯ ಪ್ರಮುಖ ಅಂಶಗಳಾಗಿ ಬೆಳೆಯುತ್ತಿವೆ. ಭಾರತವು ವಿಶ್ವದ ಸಾಫ್ಟ್‌ವೇ‌ರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.

ಈ ಯಶಸ್ಸಿನಲ್ಲಿ ಕರ್ನಾಟಕ ರಾಜ್ಯದ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ. ಕರ್ನಾಟಕವು ದೇಶದ ಸಾಫ್ಟ್‌ವೇ‌ರ್ ರಫ್ತುಗಳಲ್ಲಿ ಪ್ರಮುಖ ಹಂಚಿಕೆಯುಳ್ಳ ರಾಜ್ಯವಾಗಿದ್ದು, ಅದರ ರಾಜಧಾನಿ ಬೆಂಗಳೂರು ಇಂದಿಗೆ “ಭಾರತದ ಸಿಲಿಕಾನ್ ವ್ಯಾಲಿ” ಎಂದು ಖ್ಯಾತಿಯಾಗಿದೆ.

ಕರ್ನಾಟಕವು 1980ರ ದಶಕದಿಂದಲೇ ತಂತ್ರಜ್ಞಾನದಲ್ಲಿ ಅಭಿವೃದ್ಧಿಯತ್ತ ಪಯಣ ಆರಂಭಿಸಿತು. ರಾಜ್ಯ ಸರ್ಕಾರವು ಐಟಿ ಮತ್ತು ಬಿಇಟಿ ಕ್ಷೇತ್ರಗಳಿಗೆ ವಿಶೇಷ ಪ್ರೋತ್ಸಾಹ ನೀಡಿದ ಪರಿಣಾಮ, ಅನೇಕ ದೇಶೀಯ ಹಾಗೂ ಅಂತರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಕಚೇರಿಗಳನ್ನು ಸ್ಥಾಪಿಸಿವೆ.

ಇನ್ಫೋಸಿಸ್, ವಿಪ್ರೋ, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್, ಅಕ್ಸೆಂಚರ್, ಹೆಚ್‌ಪಿಇ, ಮೈಂಡ್‌ಟ್ರೇ, ಟೆಕ್‌ ಮಹೀಂದ್ರ ಮುಂತಾದ ಅಗ್ರಗಣ್ಯ ಸಂಸ್ಥೆಗಳು ಕರ್ನಾಟಕದಿಂದಲೇ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಸುಮಾರು 35-40% ಸಾಫ್ಟ್‌ವೇರ್ ರಫ್ತುಗಳು ಕರ್ನಾಟಕದಿಂದಲೇ ಆಗುತ್ತವೆ. ಇದು ಕರ್ನಾಟಕದ ತಾಂತ್ರಿಕ ಸಾಮರ್ಥ್ಯ, ಮೂಲಸೌಕರ್ಯ ಮತ್ತು ಪರಿಣಿತ ಮಾನವ ಸಂಪನ್ಮೂಲದ ಬೆಳವಣಿಗೆಯ ಫಲವಾಗಿದೆ.

ಬೆಂಗಳೂರು ನಗರದಲ್ಲಿ ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಮಾನ್ಯಟೆಕ್‌ ಪಾರ್ಕ್, ಇನ್ಫೋಸಿಸ್ ಕ್ಯಾಂಪಸ್, ಬಯೋಟೆಕ್‌ ಪಾರ್ಕ್‌ ಈ ಮುಂತಾದ ವಲಯಗಳು ಸಾಫ್ಟ್‌ವೇ‌ರ್ ಅಭಿವೃದ್ಧಿ, ಸಂಶೋಧನೆ, ನವೀನತೆ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತಿವೆ.

ಬೆಂಗಳೂರು ಇಂದಿಗೆ ಭಾರತದ ಸ್ಟಾರ್ಟ್‌ಅಪ್ ಪ್ರಮುಖ ನೆಲೆಯಾಗಿದೆ. ಪ್ಲಿಪ್‌ಕಾರ್ಟ್, ಸ್ವಿಗ್ಗಿ, ಓಲಾ, ಝರೋಧಾ, ಫ್ರೆಶ್‌ವರ್ಕ್ಸ್ ಮುಂತಾದ ಯಶಸ್ವಿ ಕಂಪನಿಗಳು ಇಲ್ಲಿ ಹುಟ್ಟಿಕೊಂಡಿವೆ. ಈ ನವೀನ ಚಿಂತನೆಗಳು ಕರ್ನಾಟಕವನ್ನು ಸಾಫ್ಟ್‌ವೇ‌ರ್ ಸೇವೆಗಳ ರಪ್ತಿನಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಿದ್ಧಗೊಳಿಸಿವೆ.

ಸಾಫ್ಟ್‌ವೇರ್ ರಫ್ತುಗಳಿಂದ (Karnataka software exports) ಕರ್ನಾಟಕದ ಆರ್ಥಿಕ ಸ್ಥಿತಿ ಗಟ್ಟಿಯಾಗಿದೆ. ವಿದೇಶಿ ವಿನಿಮಯ, ಉದ್ಯೋಗಾವಕಾಶಗಳು, ಮತ್ತು ನವೀನ ತಂತ್ರಜ್ಞಾನಗಳ ಅಳವಡಿಕೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ದಾರಿಯಾಗಿದೆ. ಸಾವಿರಾರು ಯುವಕರು ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆದು ತಮ್ಮ ಜೀವನಮಟ್ಟವನ್ನು ಉತ್ತಮವಾಗಿಸಿಕೊಂಡಿದ್ದಾರೆ.

ಸರ್ಕಾರವು “ಬಿಯೋಂಡ್ ಬೆಂಗಳೂರು” ಯೋಜನೆಯಡಿ ಮೈಸೂರು, ಹುಬ್ಬಳ್ಳಿ, ಮಂಗಳೂರು ಮುಂತಾದ ನಗರಗಳಲ್ಲಿ ಹೊಸ ಐಟಿ ಹಬ್ಗಳನ್ನು ನಿರ್ಮಿಸುತ್ತಿದೆ. ಇದರಿಂದ ರಾಜ್ಯದ ವಿವಿಧ ಭಾಗಗಳಲ್ಲಿಯೂ ತಂತ್ರಜ್ಞಾನ ಮತ್ತು ಉದ್ಯೋಗಾವಕಾಶಗಳ ವಿಸ್ತರಣೆ ಸಾಧ್ಯವಾಗಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories