ಐಫೋನ್‌, ಆಂಡ್ರಾಯ್ಡ್‌ ಫೋನ್‌ ಬೆಲೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z Fold 6: ಖರೀದಿಸುವುದು ಎಲ್ಲಿ?

Samsung Galaxy Z Fold 6 Price: ಈಗಂತೂ ಎಲ್ಲರಿಗೂ ಮೊಬೈಲ್‌ ಕ್ರೇಜ್‌. ಕೈಯಲ್ಲೊಂದು ಫೋನ್‌ ಇಲ್ಲದಿದ್ದರೆ ತಾವೆಲ್ಲೋ ಕಳೆದು ಹೋಗಿದ್ದೇವೆ ಎಂಬಷ್ಟರ ಮಟ್ಟಿಗೆ ಫೋನ್‌ ಎಲ್ಲರನ್ನೂ ಆವರಿಸಿದೆ.

ಸದ್ಯಕ್ಕೆ ಅದು ನಿಜವೂ ಹೌದು ಬಿಡಿ. ಡಿಜಿಟಲ್‌ ಪೇಮೆಂಟ್‌ನಿಂದ ಹಿಡಿದು ದಿನನಿತ್ಯದ ಅವಶ್ಯಕತೆಗಳವರೆಗೆ ನೆರವಾಗುತ್ತಿದೆ ಫೋನ್‌.

ಅದರ ಜೊತೆಗೆ ಕೈಯಲ್ಲಿ ಹೊಸ ಹೊಸ ಆವೃತ್ತಿಯ ಫೋನ್‌ ಹಿಡಿದು ಓಡಾಡುವುದು ಇಂದಿನ ಫ್ಯಾಷನ್‌ಗಳಲ್ಲೊಂದು.

ಅದಕ್ಕೆಂದೇ ಮಾರುಕಟ್ಟೆಯಲ್ಲಿ ಬಗೆ ಬಗೆಯ ವಿನ್ಯಾಸದ, ವೈಶಿಷ್ಟ್ಯದ ಫೋನ್‌ಗಳಿವೆ. ಸದ್ಯ ಭಾರಿ ಕುತೂಹಲ ಹೆಚ್ಚಿಸಿರುವ ಫೋನ್‌ ಎಂದರೆ ಫೋಲ್ಡ್‌ ಮಾಡುವ ಸ್ಮಾರ್ಟ್‌ಫೋನ್‌ಗಳು.

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z Fold 6 ಫೋನ್‌ ಯುವಜನತೆಯನ್ನು ತನ್ನತ್ತ ಆಕರ್ಷಿಸುತ್ತಿದೆ. ದುಬಾರಿಯಾದರೂ ಒಮ್ಮೆಯಾದರೂ ಅದನ್ನು ಕೊಳ್ಳುವ ಬಯಕೆ ಬಹಳ ಜನರ ಮನದಲ್ಲಿದೆ.

ಅದಕ್ಕೆ ಈಗ ಉತ್ತಮ ಅವಕಾಶ ಒದಗಿ ಬಂದಿದೆ. ಹೌದು, ಅದೇನೆಂದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್ 6 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಭಾರಿ ರಿಯಾಯಿತಿಯೊಂದಿಗೆ ಪಟ್ಟಿ ಮಾಡಲ್ಪಟ್ಟಿದೆ.

ಕಂಪನಿಯು ಈ ಫೋನ್‌ ಅನ್ನು ಸುಮಾರು 1,64,999 ರೂ. ಗಳ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತ್ತು. ಆದರೆ ಈಗ ಇದರ ಬೆಲೆ 1,10,000ರೂ. ಗಳಿಗಿಂತಲೂ ಕಡಿಮೆಯಾಗಿದೆ.

ಅಂದರೆ ಇದು ಸಾಂಪ್ರದಾಯಿಕ ಫ್ಲ್ಯಾಗ್‌ಶಿಪ್ ಫೋನ್‌ಗಳ ಬೆಲೆಯ ಸಮೀಪ ಬಂದಿದೆ. ಹಾಗಾದರೆ ಈ ಫೋನ್‌ ಖರೀದಿಸುವುದಾದರೂ ಎಲ್ಲಿ ಎಂದು ನೋಡೋಣ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z Fold 6 ರಿಯಾಯಿತಿ ಕೊಡುಗೆಗಳು

ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 1,09,799 ರೂ ಗಳಿಗೆ ಪಟ್ಟಿ ಮಾಡಲಾದ ಫೋನ್‌ ಆರಂಭಿಕ ಬೆಲೆಗಿಂತಲೂ ಗಮಾನಾರ್ಹವಾಗಿ ಕಡಿಮೆಯಾಗಿದೆ.

ಹಾಗಾಗಿ ಈ ಫೋನ್‌ ಕೊಳ್ಳುವ ಆಸೆ ಹೊತ್ತವರಿಗೆ ಇದು ಉತ್ತಮ ಅವಕಾಶವೆಂದೇ ಹೇಳಬಹುದು. ಇಷ್ಟೇ ಅಲ್ಲದೇ ಈ ಫೋನ್‌ ಮೇಲೆ ಕೆಲವು ರಿಯಾಯಿತಿ ಕೊಡುಗೆಗಳನ್ನು ಸಹ ಘೋಷಿಸಿದೆ.

ಮೊದಲನೇಯದಾಗಿ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಸಿ ಸಾಧನದ ಮೇಲೆ 4,000 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು.

ಇದರಿಂದಾಗಿ ಈ ಫೋನ್‌ನ ಬೆಲೆ 1,05,799 ರೂ. ಗಳಿಗೆ ಇಳಿಯುತ್ತದೆ. ಜೊತೆಗೆ EMI ಸೌಲಭ್ಯವನ್ನೂ ಒದಗಿಸಿದೆ. ತಿಂಗಳಿಗೆ 5,127 ರೂ. ದಿಂದ ಪ್ರಾರಂಭವಾಗುವ EMI ನಲ್ಲಿಯೂ ಖರೀದಿಸಬಹುದು.

ಹೆಚ್ಚುವರಿಯಾಗಿ, ಈ ಫೋನ್‌ಗೆ ವಿನಿಮಯ ಕೊಡುಗೆಯೂ ಲಭ್ಯವಿದೆ. ನೀವು ನಿಮ್ಮ ಹಳೆಯ ಫೋನ್‌ ನೀಡಿ ಹೆಚ್ಚಿನ ರಿಯಾಯಿತಿಗಾಗಿ ವಿನಿಮಯ ಮಾಡಿಕೊಳ್ಳುವ ಅವಕಾಶ ಇದರಲ್ಲಿದೆ.

ಫೋನ್‌ನ ಸ್ಥಿತಿ, ಮೌಲ್ಯ ಹಾಗೂ ರೂಪಾಂತರವನ್ನು ಅವಲಂಬಿಸಿ ಒಟ್ಟಾರೆಯಾಗಿ 60,200 ರೂ. ರಿಯಾಯಾತಿ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Facebook, Insta ಬಂದ್ ಆದ್ರೆ ಮುಂದೇನು ಪ್ಲಾನ್? ಶ್ರೀಧರ್ ವೇಂಬು ಹೊಸ ಐಡಿಯಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z Fold 6 ವೈಶಿಷ್ಟ್ಯಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z Fold 6 ಫೋನ್‌ನ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಈ ಸ್ಯಾಮ್‌ಸಂಗ್ ಸಾಧನವು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ 6.3-ಇಂಚಿನ ದೊಡ್ಡ AMOLED ಹೊರ ಪರದೆಯನ್ನು ಹೊಂದಿದೆ.

ಜೊತೆಗೆ 7.6-ಇಂಚಿನ AMOLED ಮುಖ್ಯ ಪರದೆಯನ್ನು ಹೊಂದಿದೆ. ಫೋನ್ ಶಕ್ತಿಯುತ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಿಂದ ಚಲಿಸುತ್ತದೆ ಹಾಗೂ ಇದು 12GB RAM ಮತ್ತು 512GB ಸಂಗ್ರಹಣೆಯೊಂದಿಗೆ ಬರುತ್ತದೆ.

ಈ ಫೋನ್‌ 4,400mAh ಬ್ಯಾಟರಿಯನ್ನು ಹೊಂದಿದೆ. ಕ್ಯಾಮೆರಾಗಳಲ್ಲಿ 50MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 10MP ಟೆಲಿಫೋಟೋ ಲೆನ್ಸ್ ಸೇರಿವೆ. ಮುಂಭಾಗದಲ್ಲಿ, ಫೋನ್ 10MP ಮತ್ತು 4MP ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ.

ಇದನ್ನೂ ಓದಿ: WhatsApp Money: ವಾಟ್ಸ್‌ಆಪ್‌ನಿಂದ ಹಣ ಗಳಿಸುವುದು ಹೇಗೆ? ಇಲ್ಲಿದೆ ನೀವು ಸಹ ದುಡ್ಡು ಮಾಡಬಹುದಾದ ಸುಲಭಟಿಪ್ಸ್

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories