‘ಬುರುಡೆ ಗ್ಯಾಂಗ್​ ಸದಸ್ಯರನ್ನು ಬಂಧಿಸುವುದಿಲ್ಲ ’ : ಸ್ಫೋಟಕ ಮಾಹಿತಿ ನೀಡಿದ ರಾಜ್ಯ ಸರ್ಕಾರ..!

ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಗ್ಯಾಂಗ್​ನ ನಿಜಾಂಶ ಒಂದೊಂದಾಗಿಯೇ ಹೊರಬರುತ್ತಿದ್ದರೂ ಸಹ ಏಕೆ ಬುರುಡೆ ಗ್ಯಾಂಗ್​ನ ಸದಸ್ಯರನ್ನು ಬಂಧಿಸುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಲೇ ಇತ್ತು. ಈ ಸಂಬಂಧ ಇದೀಗ ರಾಜ್ಯ ಸರ್ಕಾರದಿಂದಲೇ ಸ್ಪಷ್ಟನೆ ಹೊರಬಿದ್ದಿದ್ದು ಅರ್ಜಿದಾರರು ಆರೋಪಿಗಳಲ್ಲ ಎಂದು ಹೇಳಿದೆ.

ರಾಜ್ಯ ಹೈಕೋರ್ಟ್​ನಲ್ಲಿ ಇಂದು ಬುರುಡೆ ಗ್ಯಾಂಗ್​ ರಿಟ್​ ಅರ್ಜಿ ವಿಚಾರಣೆಯ ಹಿನ್ನೆಲೆಯಲ್ಲಿ ಹೈಕೋರ್ಟ್​ಗೆ ಸರ್ಕಾರ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಈ ಮಾಹಿತಿ ಹೊರಬಿದ್ದಿದೆ. ಎಸ್​ಐಟಿ ತನಿಖೆಗೆ ಸಹಕರಿಸಿದರೆ ಬುರುಡೆ ಗ್ಯಾಂಗ್​ ಬಂಧಿಸುವ ಮಾತೇ ಇಲ್ಲ. ಅವರು ಅರ್ಜಿದಾರರು, ಆರೋಪಿಗಳಲ್ಲ ಎಂದು ಸರ್ಕಾರ ಸ್ಪಷ್ಟೆ ನೀಡಿದೆ.
ಎಸ್​ಐಟಿ ತನಿಖೆಗೆ ಸಹಕರಿಸಿದರೆ ಬುರುಡೆ ಗ್ಯಾಂಗ್​ಗೆ ಬಂಧನದ ಭೀತಿ ಬೇಡ. ಮೂಲ ದೂರನ್ನು ಮೀಡಿ ಎಸ್​ಐಟಿ ತನಿಖೆ ನಡೆಯುತ್ತಿದೆ. ನಾವು ಚಿನ್ನಯ್ಯ ನೀಡಿದ ದೂರನ್ನು ಮೀರಿ ತನಿಖೆ ನಡೆಸುತ್ತಿದ್ದೇವೆ ಎಂದು ಸರ್ಕಾರ ಹೇಳಿದೆ. ಹೈಕೋರ್ಟ್‌ ರಿಟ್‌ ಪ್ರೊಸೀಡಿಂಗ್ಸ್‌ ರೂಲ್ಸ್‌ ನ ನಿಯಮ 21ರ ಅಡಿಯಲ್ಲಿ ಆಕ್ಷೇಪಣೆ ಸಲ್ಲಿಸಿರುವ ಸರ್ಕಾರವು ಸಂವಿಧಾನದ ಆರ್ಟಿಕಲ್‌ 226 ಮತ್ತು 227ರ ಅಡಿಯಲ್ಲಿ ಬುರುಡೆ ಗ್ಯಾಂಗ್ ಸಲ್ಲಿಸಿರುವ ಆಕ್ಷೇಪಣೆಗಳನ್ನು ರದ್ದುಪಡಿಸುವಂತೆ ಮನವಿ ಮಾಡಿದೆ.

ಎಸ್​ಐಟಿ ತನಿಖೆಗೆ ಅಸಹಕಾರ ತೋರಿದರೆ ಮಾತ್ರ ಅವರನ್ನು ಬಂಧಿಸಲಾಗುತ್ತದೆ. ಅರ್ಜಿದಾರರು ವಾಸ್ತವಾಂಶಗಳನ್ನು ಮರೆಮಾಚುವ ಮೂಲಕ ಕಾನೂನು ಬದ್ಧ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ. ಒಂದು ವೇಳೆ ಬಂಧನದ ಭೀತಿ ಉಂಟಾದರೆ ಕೂಡ ಅವರಿಗೆ ನಿರೀಕ್ಷಣಾ ಜಾಮೀನು ಪಡೆಯುವ ಅವಕಾಶ ಇದೆ. ಸರ್ಕಾರದಿಂದ ರಚನೆ ಮಾಡಲಾಗಿರುವ ಎಸ್​ಐಟಿ ಕೇವಲ ಚಿನ್ನಯ್ಯ ನೀಡಿದ ದೂರನ್ನು ತನಿಖೆ ನಡೆಸಲು ಮಾತ್ರವಲ್ಲ. ದಶಕಗಳ ಕಾಲ ಧರ್ಮಸ್ಥಳದಲ್ಲಿ ನಡೆದಿರುವ ಶವಗಳನ್ನು ಹೂತು ಹಾಕಿರುವ ಪ್ರಕರಣಗಳ ತನಿಖೆಯನ್ನೂ ಒಳಗೊಂಡಿದೆ.ಇತ್ತೀಚೆಗೆ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಮೂಳೆ ಮತ್ತು ತಲೆಬುರುಡೆಗಳು ಎಸ್ಐಟಿ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಿವೆ.ಡಿಜಿಪಿ ಪ್ರಣಬ್‌ ಮೊಹಂತಿ ನೇತೃತ್ವದ ಎಸ್‌ಐಟಿ ತನಿಖೆ ಪಾರದರ್ಶಕವಾಗಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಮಂಗಳೂರು : ಅಕ್ರಮ ಮರಳುಗಾರಿಕೆ ಜಾಲ ಬೇಧಿಸಿದ ಪೊಲೀಸರು

ನೇತ್ರಾವತಿ ಸ್ನಾನಘಟ್ಟದಲ್ಲಿ ಮ್ಯಾಜಿಸ್ಟ್ರೇಟ್‌ ಮತ್ತು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿದ ಉತ್ಖನನವು ಪಾರದರ್ಶಕವಾಗಿದೆ.ಈ ಸಂದರ್ಭದಲ್ಲಿ ವಿಡಿಯೋ ಮಾಡಲಾಗಿದೆ, ದೂರುದಾರರ ವಕೀಲರೂ ಹಾಜರಿದ್ದರು ಎಂಬ ಅಂಶವನ್ನೂ ಸರ್ಕಾರ ಉಲ್ಲೇಖಿಸಿದೆ.ಆದರೆ ನಂತರದ ಬೆಳವಣಿಗೆಗಳಲ್ಲಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ.ಅರ್ಜಿದಾರರ ಅಣತಿಯಂತೆ ಹೇಳಿಕೆ ನೀಡಿದ್ದಾಗಿ 183 ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ ಎದುರು ಹೇಳಿಕೆ ದಾಖಲಿಸಿದ್ದಾನೆ.ಆಗ ತಂದೊಪ್ಪಿಸಿದ ತಲೆ ಬುರುಡೆಯನ್ನೂ ಬೇರೊಬ್ಬರು ತನಗೆ ನೀಡಿದ್ದಾಗಿ ತಿಳಿಸಿದ್ದಾನೆ.
ಡಿಎನ್‌ಎ ಮತ್ತು ಮಣ್ಣು ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೈಕೋರ್ಟ್​ಗೆ ಸಲ್ಲಸಿರುವ ಅಫಿಡವಿಟ್​ನಲ್ಲಿ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories