ಎಲ್ಲರಿಗಾಗಿ ಅಲ್ಲ ಪಾಲಕ್‌: ಪಾಲಕ್‌ ಸೊಪ್ಪು ತಿನ್ನೋ ಮೊದಲು ಈ ವಿಚಾರ ತಿಳ್ಕೊಳ್ಳಿ

Drawback Of Palak: ಇತ್ತೀಚಿನ ದಿನಗಳಲ್ಲಿ ಹಸಿರು ತರಕಾರಿಗಳನ್ನು ತಿನ್ನುವುದರ ಬಗ್ಗೆ ಜನರು ಹೆಚ್ಚು ಗಮನಕೊಡುತ್ತಿದ್ದಾರೆ. ಆರೋಗ್ಯಕ್ಕೆ ಉತ್ತಮವೆಂದು ಪ್ರತಿದಿನ ಯಾವುದಾದರೂ ಒಂದು ಸೊಪ್ಪನ್ನು ತಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ ಎಂದು ವೈದ್ಯರೂ ಸಲಹೆ ನೀಡುತ್ತಿದ್ದಾರೆ.

ಹಸಿರು ತರಕಾರಿಗಳಲ್ಲಿ ಹೆಚ್ಚಿನ ಜೀವಸತ್ವಗಳು ಇರುವುದೇ ಇದಕ್ಕೆ ಕಾರಣವಾಗಿದೆ. ಹಸಿರು ತರಕಾರಿಗಳಲ್ಲಿ ಹೆಚ್ಚಾಗಿ ಮೆಂತೆ, ಪಾಲಕ್‌, ಸಬ್ಬಸ್ಸಿಗೆ, ರಾಜಗಿರ್‌ ಸೊಪ್ಪುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಅದರಲ್ಲೂ ಪಾಲಕ್‌ ಸೊಪ್ಪಿನಿಂದ ಬಗೆ ಬಗೆಯ ಭಕ್ಷಗಳನ್ನು ತಯಾರಿಸಲಾಗುತ್ತದೆ. ಪಾಲಕ್‌ ಫುಲಾವ್‌, ಪಾಲಕ್‌ ಪನ್ನೀರ್‌, ಆಲೂ ಪಾಲಕ್‌ ಮುಂತಾದವುಗಳು ರೆಸ್ಟೋರೆಂಟ್‌ಗಳಲ್ಲಿ ಜನಪ್ರಿಯ ವ್ಯಂಜನವಾಗಿದೆ.

ಪಾಲಕ್‌ ಸೊಪ್ಪಿನಿಂದ ತಯಾರಿಸಿದ ಅಡುಗೆಗಳು ಬಹಳ ರುಚಿಯಾಗಿರುವುದರಿಂದ ಎಲ್ಲರೂ ಅದನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಆದರೆ ಕೆಲವರಿಗೆ ಪಾಲಕ್‌ ಸೊಪ್ಪಿನಿಂದ ಅನುಕೂಲವಾಗುವುದರ ಬದಲಿಗೆ ಅನಾನುಕೂಲವಾಗುತ್ತದೆ.

ಅತ್ಯಂತ ಪೌಷ್ಠಿಕ ಮತ್ತು ಹೆಚ್ಚಿನ ನಾರಿನಾಂಶದಿಂದ ಸಮೃದ್ಧವಾಗಿರುವ ಪಾಲಕ್‌ ಸೊಪ್ಪಿನಿಂದ ಕೆಲವರಿಗೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅಂತಹವರು ಬಹಳ ಎಚ್ಚರಿಕೆಯಿಂದ ಅದನ್ನು ಸೇವಿಸಬೇಕು.

ಹಾಗಾದರೆ ಯಾರು ಪಾಲಕ್‌ ಸೊಪ್ಪು ತಿನ್ನುವ ಮೊದಲು ಯೋಚಿಸಬೇಕು ಎಂದು ನೋಡೋಣ.

ಮೂತ್ರಪಿಂಡದ ಕಲ್ಲು ಸಮಸ್ಯೆ ಇರುವವರು

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ಪಾಲಕ್‌ ಸೊಪ್ಪುನ್ನು ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಪಾಲಕ್‌ ಸೊಪ್ಪಿನಲ್ಲಿ ಆಕ್ಸಲೇಟ್‌ಗಳು ಅಧಿಕ ಮಾತ್ರದಲ್ಲಿ ಇರುತ್ತವೆ. ಇದರಿಂದ ಮೂತ್ರಪಿಂಡದ ಸಮಸ್ಯೆ ಉಲ್ಭಣಗೊಳ್ಳುತ್ತದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಔಷಧಿ ಸೇವಿಸುವವರು

ಪಾಲಕ್‌ ಸೊಪ್ಪು ವಿಟಮಿನ್‌ ಕೆ ಯಿಂದ ಸಮೃದ್ಧವಾಗಿದೆ. ಇದು ರಕ್ತ ಹೆಪ್ಪುಗಟ್ಟುವಿಕೆ ಸಹಾಯ ಮಾಡತ್ತದೆ. ಆದರೆ ವಾರ್ಫರಿನ್‌ ನಂತಹ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಔಷಧಿ ಸೇವಿಸುವವರು ಪಾಲಕ್ ಸೊಪ್ಪು ತಿನ್ನುವಾಗ ಎಚ್ಚರಿಕೆಯಿಂದರಿಬೇಕು. ಏಕೆಂದರೆ ಪಾಲಕ್‌ ಔಷಧದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯದ ಖಾಯಿಲೆಗಳು ಬರುತ್ತವೆ.

ಇದನ್ನೂ ಓದಿ: ಬೆಡ್ ಕಾಫಿ ಕುಡಿಯುವ ಅಭ್ಯಾಸ ಒಳ್ಳೆಯದಾ ? ಕೆಟ್ಟದ್ದಾ? ಇಲ್ಲಿದೆ ಇಂಟರಸ್ಟಿಂಗ್ ಮಾಹಿತಿ

ಸಂಧೀವಾತ ಇರುವವರು

ದೇಹದಲ್ಲಿ ಯೂರಿಕ್‌ ಆಮ್ಲದ ಮಟ್ಟ ಅಧಿಕವಾಗಿರುವವರಿಗೆ ಪಾಲಕ್‌ ಸೊಪ್ಪು ಹಾನಿಕಾರಕವಾಗಿದೆ. ಪಾಲಕ್‌ ಸೊಪ್ಪಿನಲ್ಲಿ ಫ್ಯೂರಿನ್‌ ಅಧಿಕವಾಗಿದ್ದು, ಇದು ದೇಹದಲ್ಲಿ ಯೂರಿಕ್‌ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಸಂಧೀವಾತ ಅಥವಾ ಗೌಟ್‌ ಸಮಸ್ಯೆ ಹೆಚ್ಚಾಗಬಹುದು.

ಕಬ್ಬಿಣದ ಅಂಶ ಅಧಿಕವಿರುವವರು

ಪಾಲಕ್ ಸೊಪ್ಪು ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ಆದರೆ ಈಗಾಗಲೇ ದೇಹದಲ್ಲಿ ಕಬ್ಬಿಣದ ಅಂಶ ಅಧಿಕವಾಗಿರುವವರು ಪಾಲಕ್‌ ಅನ್ನು ತಿನ್ನುವುದನ್ನು ತಪ್ಪಿಸಬೇಕು. ಕಬ್ಬಿಣದ ಅಂಶ ಅಧಿಕವಾದರೆ ಯಕೃತ್ತು ಮತ್ತು ಹೃದಯದ ಸಮಸ್ಯೆ ಉಲ್ಭಣವಾಗುತ್ತದೆ.

ಇದನ್ನೂ ಓದಿ: ಪ್ರತಿದಿನ ಕೇವಲ 10-15 ನಿಮಿಷ ವ್ಯಾಯಾಮ ಮಾಡಿ: ಹೃದಯದ ಆರೋಗ್ಯದಲ್ಲಾಗುವ ಮ್ಯಾಜಿಕ್ ನೀವೇ ನೋಡಿ

ಎಸಿಡಿಟಿ ಸಮಸ್ಯೆಯಿರುವವರು

ಪಾಲಕ್‌ ಸೊಪ್ಪು ಹೊಟ್ಟೆಯ ಅನಿಲ, ಆಮ್ಲೀಯತೆ ಮತ್ತು ಉಬ್ಬುರದಂತಹ ಸಮಸ್ಯೆಗಳನ್ನು ಹೆಚ್ಚು ಮಾಡುವ ಸಂಯುಕ್ತಗಳನ್ನು ಹೊಂದಿರುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಪಾಲಕ್‌ ಸೇವನೆಯನ್ನು ಮಿತಗೊಳಿಸಬೇಕು.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories