ಸುದೀಪ್ ಕೋಪ ನೆತ್ತಿಗೇರಿಸಿದ್ರಾ ರಕ್ಷಿತಾ, ಏನು ಗೊತ್ತಿಲ್ಲದವರ ತರ ಮಾಡ್ತಾ ಇದ್ದಾರಾ ನಾಟಕ?

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅಂದ್ರೆ ತುಂಬಾ ಜನಕ್ಕೆ ಇಷ್ಟ. ಇಬ್ಬರಿಗೂ ಹೆಚ್ಚು ಫ್ಯಾನ್ಸ್ ಇದ್ದಾರೆ. ಆದ್ರೆ ಈ ಬಾರಿ ಇವರು ಮಾಡಿರುವ ಎಡವಟ್ಟಿನಿಂದ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ಅದರಲ್ಲೂ ರಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುದೀಪ್ ಅವರು ಹೇಳಿದ್ರು, ನಿಮಗೆ ಆ ರೀತಿ ಯಾವಾಗ ಅನ್ನಿಸ್ತು ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸುದೀಪ್ ಅವರ ಕೋಪ ನೆತ್ತಿಗೇರಿದೆ.

ರಕ್ಷಿತಾ ಮಾಡಿದ ಆ ತಪ್ಪೇನು?
ರಕ್ಷಿತಾ ಶೆಟ್ಟಿ ಈ ಬಾರಿ ನಾಮಿನೇಟ್ ಆಗಿ, ನಾಮಿನೇಟ್ ತಂಡದಲ್ಲಿದ್ರು. ಆದ್ರೆ ಅವರು ತಮ್ಮ ತಂಡ ಬಿಟ್ಟು ಬೇರೆ ತಂಡದಲ್ಲಿದ್ದ ಗಿಲ್ಲಿಯ ಜೊತೆಯೇ ಹೆಚ್ಚು ಮಾತನಾಡ್ತಾ ಇದ್ದರು. ಗಿಲ್ಲಿ ಸಹ ಅವಳಿಗೆ ಅದು , ಇದು, ಯಾವುದಕ್ಕೂ ಒಪ್ಪಿಕೊಳ್ಳಬೇಡ ಎಂದು ಹೇಳಿ ಕೊಡ್ತಾ ಇದ್ರು.

ಅಶ್ವಿನಿ ಕೋಪ
ಇನ್ನು ಗಿಲ್ಲಿ ನಟ ರಕ್ಷಿತಾ ಶೆಟ್ಟಿ ಕಿವಿಯಲ್ಲಿ ಏನೋ ಹೇಳ್ತಾ ಇರ್ತಾರೆ. ಆಗ ಅಶ್ವಿನಿ ಗೌಡ ನೀವು ಯಾವ ತಂಡ ರಕ್ಷಿತಾ? ಅವರು ನಮ್ಮ ಆಟ ಹಾಳು ಮಾಡಲು ಆ ರೀತಿ ಮಾಡ್ತಾ ಇದ್ದಾರೆ. ನೀವು ನಮ್ಮ ಟೀಮ್ ಜೊತೆ ಇರಿ ಎಂದು ಕೋಪದಿಂದ ಹೇಳಿದ್ರು.

ಸುದೀಪ್ ಸಹ ಗರಂ
ಇನ್ನು ಈ ಬಗ್ಗೆ ಇಂದಿನ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ನೀವು ಇಬ್ಬರು ಸೇರಿ ಅವರಿಗೆ ಇರಿಟೇಟ್ ಮಾಡಲು ಹೀಗೆ ಮಾಡಿದ್ರಾ ಎಂದು ರಕ್ಷಿತಾಗೆ ಕೇಳ್ತಾರೆ. ಅದಕ್ಕೆ ರಕ್ಷಿತಾ ಹೌದು ಎನ್ನುತ್ತಾರೆ. ನಿಮ್ಮ ಸ್ವಂತ ಟೀಮ್ ಗೆ ಏಕೆ ಹೀಗೆ ಮಾಡಿದ್ರಿ ಎಂದು ಕೇಳ್ತಾರೆ. ಅದಕ್ಕೆ ರಕ್ಷಿತಾ ಸುದೀಪ್ ಅವರಿಗೆ ನಿಮಗೆ ಯಾವಾಗ ಈ ರೀತಿ ಅನ್ನಿಸ್ತು ಎಂದು ಕೇಳ್ತಾರೆ. ಅದಕ್ಕೆ ಸುದೀಪ್ ಗರಂ ಆಗಿದ್ದಾರೆ.

ಅಲ್ಲದೇ ವಾರ ಪೂರ್ತಿ ರಕ್ಷಿತಾ ಶೆಟ್ಟಿ ತನ್ನ ಟೀಮ್ ಜೊತೆ ನಿಂತಿಲ್ಲ. ಬದಲಿಗೆ ಗಿಲ್ಲಿ ನಟ ಅವರ ಟೀಮ್ ಜೊತೆಯೇ ಇರುತ್ತಿದ್ದರು. ಅವರಿಗೊಬ್ಬರಿಗಾಗಿ ತಂಡ ಎಲ್ಲಾ ನಿರ್ಧಾರವನ್ನು ಬದಲಾಯಿಸಿದ್ದು ಇದೆ. ಇನ್ನು ಏನೇನ್ ಆಯ್ತು ಅಂತ ತಿಳಿಯೋಕೆ ಇಂದಿನ ಸಂಚಿಕೆಯನ್ನು ಎಲ್ಲರು ತಪ್ಪದೇ ನೋಡಬೇಕು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories