ತುಮಕೂರು – ಬೆಂಗಳೂರು ಮೆಟ್ರೋ ವಿರೋಧಿಸಿದ ತೇಜಸ್ವಿ ಸೂರ್ಯ

ತುಮಕೂರು – ಬೆಂಗಳೂರು ಮೆಟ್ರೋಗೆ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು ಗೊತ್ತಾ?

ತುಮಕೂರು–ಬೆಂಗಳೂರು ಮೆಟ್ರೋ ವಿಸ್ತರಣೆಯ ಕಲ್ಪನೆ ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಅವರು ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಮೆಟ್ರೋ ಬದಲಿಗೆ ಉಪನಗರ ರೈಲುಗಳ ಅಭಿವೃದ್ಧಿಗೆ ಒತ್ತು ನೀಡುವಂತೆ ಹೇಳಿದ್ದಾರೆ. ಜೊತೆಗೆ ತುಮಕೂರಿನಿಂದ ಬೆಂಗಳೂರಿಗೆ ತ್ವರಿತ ಸಾರಿಗೆಯಂಥ ಸೌಲಭ್ಯವೊಂದು ಬರಬೇಕು. ಆದರೆ, ಮೆಟ್ರೋ ಬೇಡ ಎಂದಿರುವ ಸಂಸದರು ಸರ್ಕಾರಕ್ಕೊಂದು ಸಲಹೆಯನ್ನೂ ಕೊಟ್ಟಿದ್ದಾರೆ.

ಒಂದುಕಡೆ ಕಾಂಗ್ರೆಸ್ ಸರ್ಕಾರ, ಬೆಂಗಳೂರಿನಲ್ಲಿ ಅನವಶ್ಯಕವಾಗಿರುವ ಸುರಂಗ ರಸ್ತೆಯನ್ನು ಮಾಡಲು ಹೊರಟಿದೆ. ಮತ್ತೊಂದೆಡೆ ಇಂಟರ್ ಸಿಟಿ ಮಾದರಿಯ ಮೆಟ್ರೋ ಯೋಜನೆಯ ಪ್ರಸ್ತಾಪ ಮಾಡಿದೆ” ಎಂದು ಅವರು ಹೇಳಿದ್ದಾರೆ. ಮೆಟ್ರೋ ಯೋಜನೆ ಅವೈಜ್ಞಾನಿಕ, ದುಬಾರಿ ಮತ್ತು ನಗರ ಯೋಜನಾ ದುಃಸ್ವಪ್ನ ಎಂದು ಅವರು ಟೀಕಿಸಿದ್ದಾರೆ.

ದೆಹಲಿಯಿಂದ ಹರಿಯಾಣದ ಗುರುಗ್ರಾಮಕ್ಕೆ ಹೇಗೆ ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್(RRTS) ಮಾಡಿದ್ದಾರೋ ಅದೇ ರೀತಿ ಇಲ್ಲಿಯೂ ಮಾಡಬಹುದು. ಒಂದು ಕಿಲೋಮೀಟರ್ ಮೆಟ್ರೋ ವಿಸ್ತರಣೆಗೆ 450 ಕೋಟಿ ರೂಪಾಯಿ ಖರ್ಚಾಗುತ್ತದೆ. ಅದೇ RRTS ಅಥವಾ ಸಬ್ ಅರ್ಬನ್ ರೈಲು ಮಾಡುತ್ತೇವೆ ಅಂದರೆ 150 ಕೋಟಿ ರೂಪಾಯಿ ಆಗಲಿದೆ. ಕಡಿಮೆ ಜನ ಕುಳಿತುಕೊಳ್ಳುವುದು ಮತ್ತು ಜಾಸ್ತಿ ಜನ ನಿಲ್ಲಲು ಅವಕಾಶ ಇರುವ ರೀತಿ ಮೆಟ್ರೋ ಡಿಸೈನ್​ ಇದೆ. ವೈಟ್​ಫೀಲ್ಡ್​ನಿಂದ ವಿಜಯನಗರಕ್ಕೆ 26 ಕಿ.ಮೀ. ದೂರವನ್ನು ನಿಂತುಕೊಂಡು ಬರಬೇಕು. ಹೀಗಿರುವಾಗ ತುಮಕೂರಿನಿಂದಲೂ ಜನ ನಿಂತುಕೊಂಡು ಬರಬೇಕಾ? ನಿಮಗೆ ಸಲಹೆ ಕೊಡ್ತಾ ಇರೋದು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಮೂಲಕ 5ನೇ ಬಾರಿಗೆ ಯಶಸ್ವಿಯಾದ ಮಾನವ ಅಂಗಾಂಗ ಸಾಗಣೆ

ಇದರ ಬದಲು ಉಪನಗರ ಯೋಜನೆ ಪೂರ್ಣಗೊಳಿಸಿ..

ರಾಜ್ಯ ಸರ್ಕಾರ ದೀರ್ಘ ಕಾಲದಿಂದ ಬಾಕಿ ಇರುವ ಬೆಂಗಳೂರು ಉಪನಗರ ರೈಲು ಯೋಜನೆಗಳನ್ನು ಪೂರ್ಣಗೊಳಿಸಬೇಕು. ಕಾಮಗಾರಿಗೆ ವೇಗ ನೀಡಿ ತುಮಕೂರಿಗೆ ಸಂಪರ್ಕವನ್ನು ಸುಧಾರಿಸಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ವರ್ಷಗಳ ಕಾಲ ಸಮಯ ಬೇಕಾಗುವ ಮೆಟ್ರೋ ಯೋಜನೆಗೆ ಡಿಪಿಆರ್ ತಯಾರಿಸಲು ಕೋಟಿಗಟ್ಟಲೆ ಖರ್ಚು ಮಾಡಲು ಬಯಸುತ್ತದೆ ಎಂದು ಸರ್ಕಾರದ ವಿರುದ್ಧ ದೂರಿದರು.

ಇಂಥ ಅವೈಜ್ಞಾನಿಕವಾದ, ದುಬಾರಿಯ ಯೋಜನೆಗಳಿ ಹಣವನ್ನು ಸುರಿಯುವ ಮೂಲಕ ನಗರದ ನಾಯಕರಿಗೆ ಮೂಲಸೌಕರ್ಯಗಳನ್ನು ನೀಡುವುದು ಕಷ್ಟವಾಗುತ್ತದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಇಂತಹ ತರ್ಕಬದ್ಧವಲ್ಲದ ವಿಚಾರಗಳಿಂದ ಹೊರಬರುತ್ತದೆ ಎಂದು ಆಶಿಸುತ್ತೇವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories