ಧರ್ಮಸ್ಥಳ ಬುರುಡೆ ಪ್ರಕರಣ : ಇಂದು ಕೋರ್ಟ್ಗೆ ಎಸ್ಐಟಿಯಿಂದ ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಕೆ
dharmasthala burude case : ಕಳೆದ ಕೆಲವು ತಿಂಗಳಿನಿಂದ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಇಂದು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಈ ಪ್ರಕರಣದ ಮುಖ್ಯ ತನಿಖಾಧಿಕಾರಿ ಜಿತೇಂದ್ರ ಕುಮಾರ ದಯಾಮ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಎಸ್ಐಟಿ ತನಿಖಾಧಿಕಾರಿಗಳು ಮಾಜಿ ಮಾಸ್ಕ್ ಮ್ಯಾನ್ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣನವರ್, ಜಯಂತ್.ಟಿ, ವಿಠ್ಠಲಗೌಡ ಹಾಗೂ ಸುಜಾತಾ ಭಟ್ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಈ ಚಾರ್ಜ್ಶೀಟ್ನಲ್ಲಿ ಚಿನ್ನಯ್ಯ ತೆಗೆದುಕೊಂಡು ಬಂದಿದ್ದ ತಲೆಬುರುಡೆ, ಅದನ್ನು ಚಿನ್ನಯ್ಯನಿಗೆ ನೀಡಿದವರ ಬಗ್ಗೆ ಹೀಗೆ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ. ಈ ಬುರುಡೆ ಷಡ್ಯಂತ್ರ ನಡೆಸಲು ಪ್ರೇರಣೆ ನೀಡಿದ್ದು ಯಾರು ? ಬುರುಡೆ ವಿಚಾರದಲ್ಲಿ ಏನೆಲ್ಲ ತಂತ್ರ ರೂಪಿಸಲಾಗಿತ್ತು ? ಎಲ್ಲೆಲ್ಲಿಗೆ ಆ ಬುರುಡೆಯನ್ನು ಕೊಂಡೊಯ್ಯಲಾಗಿತ್ತು ? ಈ ಷಡ್ಯಂತ್ರ ನಡೆಸಲು ಎಲ್ಲೆಲ್ಲಿಂದ ಫಂಡಿಂಗ್ ಆಗಿತ್ತು ಹೀಗೆ ಸಂಪೂರ್ಣ ವಿವರಣೆಗಳನ್ನು ಒಳಗೊಂಡ ಬರೋಬ್ಬರಿ 4 ಸಾವಿರ ಪುಟಗಳ ಚಾರ್ಜ್ಶೀಟ್ನ್ನು ಇಂದು ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಶಬರಿಮಲೆ ದೇವಸ್ಥಾನ ಚಿನ್ನ ಕಳುವು ಪ್ರಕರಣ : ವೈಜ್ಞಾನಿಕ ಪರೀಕ್ಷೆಗೆ ನಡೆಸಲು ಹೈಕೋರ್ಟ್ ಅನುಮತಿ
ಚಿನ್ನಯ್ಯ ಎಂಬಾತ ನೀಡಿದ ದೂರಿನ ಆಧಾರವನ್ನಿಟ್ಟುಕೊಂಡು ಈ ಪ್ರಕರಣದ ತನಿಖೆ ಆರಂಭಗೊಂಡಿತ್ತು. ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂತಿದ್ದೇನೆ ಎಂದು ಚಿನ್ನಯ್ಯ ಹೇಳಿಕೊಂಡಿದ್ದ. ಇದಾದ ಬಳಿಕ ತಿಂಗಳುಗಟ್ಟಲೇ ಶವ ಹುಡುಕುವ ಪ್ರಕ್ರಿಯೆ ಧರ್ಮಸ್ಥಳದ ವಿವಿಧ ಭಾಗಗಳಲ್ಲಿ ಭರದಿಂದ ಸಾಗಿತ್ತು. ತನಿಖೆ ಚುರುಕುಗೊಳ್ಳುತ್ತಾ ಹೋದಂತೆ ಈ ಚಿನ್ನಯ್ಯ ಹಾಗೂ ಈತನ ಹಿಂದೆ ನಿಂತು ಕುಮ್ಮಕ್ಕು ನೀಡುತ್ತಿದ್ದವರ ಬಣ್ಣ ಬಯಲಾಗುತ್ತಾ ಹೋಗಿತ್ತು.
dharmasthala burude case



