ಹವಾಮಾನ ಇಲಾಖೆಯಲ್ಲಿ ಪ್ರಾಜೆಕ್ಟ್‌ ಸೈಂಟಿಸ್ಟ್‌ ಆಗುವ ಸುವರ್ಣಾವಕಾಶ: ಈ ದಿನದಿಂದ ಅರ್ಜಿ ಸಲ್ಲಿಕೆ ಪ್ರಾರಂಭ

IMD Recruitment 2025: ಸರ್ಕಾರಿ ಕೆಲಸದ ಕನಸು ಕಾಣುತ್ತಿರುವವರಿಗೆ ಗುಡ್‌ ನ್ಯೂಸ್‌. ಭಾರತ ಹವಾಮಾನ ಇಲಾಖೆ (IMD) ಖಾಲಿ ಇರುವ ಪ್ರಾಜೆಕ್ಟ್‌ ಸ್ಟಾಫ್‌ ಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ವಿಜ್ಞಾನ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್‌ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ನವೆಂಬರ್ 24 ರಿಂದ ಪ್ರಾರಂಭವಾಗಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಡಿಸೆಂಬರ್‌ 14, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಭಾರತ ಹವಾಮಾನ ಇಲಾಖೆಯ ಅಧಿಕೃತ ವೆಬ್‌ಸೈಟ್‌ mausam.imd.gov.in ಭೇಟಿ ನೀಡಿ ಫಾರ್ಮ್‌ ಭರ್ತಿ ಮಾಡಬಹುದು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತಾ ಮಾನದಂಡಗಳೇನು ಎಂದು ತಿಳಿಯೋಣ.

ಹುದ್ದೆಯ ಹೆಸರು ಮತ್ತು ವೇತನ

ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ವಿಭಿನ್ನ ವೇತನವನ್ನು ನೀಡಲಾಗುತ್ತದೆ.

ಪ್ರಾಜೆಕ್ಟ್‌ ಸೈಂಟಿಸ್ಟ್‌ ಇ : ರೂ.1,23,100/- + ಎಚ್‌ಆರ್‌ಎ

ಪ್ರಾಜೆಕ್ಟ್‌ ಸೈಂಟಿಸ್ಟ್‌ III: ರೂ.78,000/- + ಎಚ್‌ಆರ್‌ಎ

ಪ್ರಾಜೆಕ್ಟ್‌ ಸೈಂಟಿಸ್ಟ್‌ II: ರೂ.67,000/- + ಎಚ್‌ಆರ್‌ಎ

ಪ್ರಾಜೆಕ್ಟ್‌ ಸೈಂಟಿಸ್ಟ್‌ I: ರೂ.56,000/- + ಎಚ್‌ಆರ್‌ಎ

ವೈಜ್ಞಾನಿಕ/ಆಡಳಿತ ಸಹಾಯಕ : ರೂ.29,200/- + ಎಚ್‌ಆರ್‌ಎ

ವಿದ್ಯಾರ್ಹತೆ

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು, ವಿಜ್ಞಾನ, ಕಂಪ್ಯೂಟರ್, ಐಟಿ, ಎಲೆಕ್ಟ್ರಾನಿಕ್ಸ್, ಟೆಲಿಕಾಂ/ ಕಂಪ್ಯೂಟರ್ ಪದವಿಯೊಂದಿಗೆ ಎಂ.ಎಸ್ಸಿ./ ಬಿ.ಟೆಕ್ + ಡಾಕ್ಟರೇಟ್/ ಎಂ.ಟೆಕ್ (ಆದ್ಯತೆ)/ ಪದವಿ ಪಡೆದ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಕೆಲವು ಹುದ್ದೆಗಳಿಗೆ ನಿಗದಿತ ಅನುಭವದ ಅಗತ್ಯವಿರುತ್ತದೆ.

ಹವಾಮಾನ ಇಲಾಖೆ ಹೊರಡಿಸಿದೆ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ.

ವಯೋಮಿತಿ

ಹವಾಮಾನ ಇಲಾಖೆ ಹೊರಡಿಸಿರುವ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಯ ಗರಿಷ್ಠ ವಯಸ್ಸು ಡಿಸೆಂಬರ್ 14, 2025 ರಂತೆ 30/35/40/45/50 ವರ್ಷಗಳನ್ನು ಮೀರಬಾರದು.

ಇದನ್ನೂ ಓದಿ: ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳಲ್ಲಿ 14 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೊದಲು ಅವರ ಅರ್ಹತೆಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದ ಆಧಾರದ ಮೇಲೆ, ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಸಿದ್ಧಪಡಿಸಲಾಗುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories