KMF Nandini : ವಿದೇಶಗಳಲ್ಲೂ ‘ನಂದಿನಿ’ ಘಮಲು : ದೇಶದ ಗಡಿದಾಟಿದ ಕೆಎಂಎಫ್
KMF Nandini : ಬೆಂಗಳೂರು : ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿಗೆ ವಿದೇಶಗಳಲ್ಲಿ ಹೆಚ್ಚಿದ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳವು (ಕೆಎಂಎಫ್) ದೇಶದ ಗಡಿ ದಾಟಿದೆ. ಅಮೆರಿಕ, ಆಸ್ಪ್ರೇಲಿಯಾ ಹಾಗೂ ಸೌದಿ ಅರೇಬಿಯಾ ದೇಶದ ಮಾರುಕಟ್ಟೆಯನ್ನು ಸೆಳೆಯಲು ಸಜ್ಜಾಗಿದೆ.
ನಮ್ಮ ರಾಜ್ಯದ ಹೆಮ್ಮೆಯ ನಂದಿನಿ ತುಪ್ಪು ಇದೀಗ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಸೌದಿ ಅರೇಬಿಯಾ ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿದೆ. ಹಾಲು ಉತ್ಪಾದನೆಯಲ್ಲಿ ನಮ್ಮ ರಾಜ್ಯ ರಾಷ್ಟ್ರಮಟ್ಟದಲ್ಲಿ 2ನೆ ಸ್ಥಾನ ಪಡೆದಿದೆ. ಇದೀಗ ಕರ್ನಾಟಕದ ಹೈನೋದ್ಯಮ ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪಿರುವುದು ಹೆಮ್ಮೆಯ ಸಂಗತಿ ಎನಿಸಿದೆ.
ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಸೌದಿ ಅರೇಬಿಯಾ ರಾಷ್ಟ್ರಗಳಿಗೆ ತುಪ್ಪ ರಫ್ತು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ನಂದಿನಿ ಹಾಲು ವಿದೇಶಿ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿದೆ. ಇದೀಗ ಈ ಮೂರು ದೇಶಗಳಿಗೆ ರಾಜ್ಯದಿಂದ 15 ಟನ್ ತುಪ್ಪ ರಫ್ತಾಗಿರುವುದು ಕೆಎಂಎಫ್ಗೆ ಹೊಸ ಗರಿಮೆ ತಂದಿದೆ.
KMF Nandini : ವಿದೇಶಕ್ಕೆ ನಂದಿನಿಯ ಯಾವೆಲ್ಲಾ ಉತ್ಪನ್ನಗಳು ರಫ್ತು ?
ಪ್ರಮುಖವಾಗಿ ಯುಎಚ್ಟಿ ಹಾಲು (UHT Milk / ಟೆಟ್ರಾ ಪ್ಯಾಕ್ ಹಾಲು) ರಫ್ತಾಗುತ್ತಿದೆ. ಈ ಹಾಲು ಹೆಚ್ಚು ಕಾಲ ಹಾಳಾಗದಂತೆ ಸಂಸ್ಕರಿಸಿ ಇಡಬಹುದಾಗಿದೆ. ಪ್ರಮುಖವಾಗಿಮ ಈ ಹಾಲು ಗಾಪುರ, ಮಾಲ್ಡೀವ್ಸ್, ಬಹ್ರೇನ್, ದುಬೈ ಮತ್ತು ಕೆಲವು ಆಫ್ರಿಕನ್ ದೇಶಗಳಾದ ಸೆನೆಗಲ್, ಘಾನಾ ಮುಂತಾದೆಡೆ ಲಭ್ಯವಿದೆ.
ನಂದಿನಿ ಬ್ರ್ಯಾಂಡ್ನ ಸಿಹಿ ತಿಂಡಿಗಳು ಕೂಡ ವಿದೇಶಕ್ಕೆ ರಫ್ತಾಗಲಿದೆ. ಅದ್ರಲ್ಲೂ ನಂದಿನಿ ತುಪ್ಪ (Nandini Ghee), ಮೈಸೂರು ಪಾಕ್ (Mysore Pak), ಮಿಲ್ಕ್ ಪೇಡಾ (Milk Peda), ಕಾಜು ಬರ್ಫಿ (Cashew Burfi), ಕುಂದಾ (Kunda), ಮತ್ತು ಇತರ ಘನೀಕೃತ (Frozen) ಸಿಹಿತಿಂಡಿಗಳು ಒಳಗೊಂಡಿವೆ.
ಅಮೇರಿಕಾ ಹಾಗೂ ಸಿಂಗಾಪುರದಲ್ಲಿ ಭಾರತೀಯ ಸಮುದಾಯವನ್ನೇ ಕೇಂದ್ರೀಕರಿಸಿ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಹಾಲು, ಸಿಹಿ ತಿಂಡಿ ಮಾತ್ರವಲ್ಲದೇ, ಬೆಣ್ಣೆ (Butter), ಪನ್ನೀರ್ (Paneer), ಚೀಸ್ (Cheese), ಕುಕ್ಕೀಸ್ (Cookies), ಐಸ್ ಕ್ರೀಮ್ (Ice Cream)
ನಂದಿನಿ ಉತ್ಪನ್ನಗಳು ಲಭ್ಯವಿರುವ ಪ್ರಮುಖ ದೇಶಗಳು
- ಅಮೆರಿಕ (USA)
- ಯುಎಇ (United Arab Emirates – ದುಬೈ, ಕತಾರ್)
- ಸಿಂಗಾಪುರ (Singapore)
- ಮಾಲ್ಡೀವ್ಸ್ (Maldives)
- ಬಹ್ರೇನ್ (Bahrain)
- ಕೆಲವು ಆಫ್ರಿಕನ್ ದೇಶಗಳು
ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಆದ ನಂದಿನಿ, ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ, ಫ್ರಾನ್ಸ್, ಯುಕೆ (UK), ಜರ್ಮನಿ ಮತ್ತು ಸೌದಿ ಅರೇಬಿಯಾದಂತಹ ದೇಶಗಳಿಗೂ ವಿಸ್ತರಿಸಲು ಯೋಜನೆಗಳನ್ನು ಹೊಂದಿದೆ.
KMF Nandini Export America Australia Saudi Arabia



