Tomato price : ಪಾತಾಳಕ್ಕಿಳಿದಿದ್ದ ಟೊಮ್ಯಾಟೋ ಬೆಲೆಯಲ್ಲಿ ದಿಢೀರ್​ ಏರಿಕೆ :ಶತಕದತ್ತ ದಾಪುಗಾಲು

Tomato price : ಕೇವಲ 10 ರೂಪಾಯಿ ಪ್ರತಿ ಕೆಜಿಗೆ ಮಾರಾಟವಾಗುತ್ತಿದ್ದ ಜವಾರಿ ಟೊಮ್ಯಾಟೋ ದರ ಏಕಾಏಕಿ ಏರಿಕೆ ಕಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಮ್ಯಾಟೋ ದರ ಕೆಜಿಗೆ 70 ರೂಪಾಯಿ ಆಗಿದ್ದು ಶೀಘ್ರದಲ್ಲಿಯೇ ಈ ದರ 100 ರೂಪಾಯಿಗೆ ತಲುಪಲಿದೆ ಎನ್ನಲಾಗಿದೆ.

ಕಳೆದ ತಿಂಗಳು ಟೊಮ್ಯಾಟೋ ದರ ಪಾತಾಳಕ್ಕೆ ಕುಸಿದ ಹಿನ್ನೆಲೆಯಲ್ಲಿ ಬೆಳೆಗಾರರು ರಸ್ತೆಗೆ ಟೊಮ್ಯಾಟೋ ಬಿಸಾಡಿ ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ಟೊಮ್ಯಾಟೋ ದರದಲ್ಲಿ ಏಕಾಏಕಿ ಏರಿಕೆ ಕಂಡಿದ್ದು ರೈತರ ಮೊಗದಲ್ಲಿ ಹರ್ಷ ಮೂಡಿದ್ದು ಗ್ರಾಹಕರ ಜೇಬು ಸುಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೆಪ್ಟೆಂಬರ್​ ಹಾಗೂ ಅಕ್ಟೋಬರ್​ ತಿಂಗಳಲ್ಲಿ ಭಾರೀ ಮಳೆಯಿಂದಾಗಿ ಟೊಮ್ಯಾಟೋ ಬೆಳೆಗಳು ಹಾಳಾಗಿದ್ದವು.ಹೀಗಾಗಿ ಟೊಮ್ಯಾಟೋ ಅಗತ್ಯ ಪ್ರಮಾಣದಲ್ಲಿ ಮಾರುಕಟ್ಟೆಗೆ ಪೂರೈಕೆಗಿರಲಿಲ್ಲ, ಇದರಿಂದ ಟೊಮ್ಯಾಟೋ ಹಣ್ಣುಗಳಿಗೆ ಬೇಡಿಕ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಕಂಡುಬಂದಿದೆ ಎಂದು ವ್ಯಾಪಾರಸ್ಥರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಸದಾ ಒಂದಿಲ್ಲೊಂದು ದರ ಏರಿಕೆಯ ಪಾಶಕ್ಕೆ ಸಿಲುಕಿಕೊಳ್ಳುವ ಗ್ರಾಹಕರು ಇದೀಗ ಟೊಮ್ಯಾಟೋ ದರ ಏರಿಕೆಯಿಂದ ಬೇಸರಗೊಂಡಿದ್ದಾರೆ. ಯಾವುದೇ ಅಡುಗೆಗೆ ಟೊಮ್ಯಾಟೋ ಬೇಕೇ ಬೇಕು. ಹೀಗಾಗಿ ಬೆಲೆ ಹೆಚ್ಚಾದರೂ ಸಹ ಕೊಳ್ಳದೇ ಬೇರೆ ದಾರಿಯಿಲ್ಲ ಎನ್ನುತ್ತಿದ್ದಾರೆ.

Tomato price suddenly rise

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories