ಆಗಸ್ಟ್ನಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ಕ್ಲೋಸ್ ! ಇಲ್ಲಿದೆ ನೋಡಿ ರಜೆ ಪಟ್ಟಿ
ಆಗಸ್ಟ್ 2026 ರಲ್ಲಿ ಒಟ್ಟು 14 ದಿನ ಬ್ಯಾಂಕ್ಗೆ ರಜೆ ಇರಲಿದೆ. ಈ ಅವಧಿಯಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ಎಟಿಎಂ ಮತ್ತು ಡಿಜಿಟಲ್ ಬ್ಯಾಂಕಿಂಗ್ ತನ್ನ ಕಾರ್ಯನಿರ್ವಹಿಸುತ್ತವೆ. ಆಗಸ್ಟ್ 2026 ಬ್ಯಾಂಕ್ ರಜಾ ಪಟ್ಟಿ ಹೀಗಿದೆ:
ಇವತ್ತು ಏನೇ ಆದ್ರೂ ಸರಿ, ಬಾಕಿ ಉಳಿದಿದ್ದ ಬ್ಯಾಂಕ್ ನ ಕೆಲಸ ಎಲ್ಲ ಮುಗಿಸಲೇ ಬೇಕು ಎಂದು ಉಳಿದೆಲ್ಲ ಕೆಲಸಗಳನ್ನು ಬಿಟ್ಟು, ಆಫೀಸಿಗೆ ರಜೆ ಹಾಕಿ, ಬ್ಯಾಂಕ್ ಗೆ ಹೋದರೆ, ಅಲ್ಲಿ ಬ್ಯಾಂಕ್ ರಜೆ ಎಂಬ ಬೋರ್ಡ್ ಕಾಣಿಸುತ್ತದೆ. ಅಯ್ಯೋ! ಬ್ಯಾಂಕ್ ಗೆ ಇವತ್ತು ರಜಾ ಇದೆಯೋ ಅಥವಾ ಇಲ್ಲವೋ ಎಂದು ತಿಳಿದೇ ಬರಬೇಕಿತ್ತು ಅಂದುಕೊಂಡು ವಾಪಸ್ಸಾಗುತ್ತೇವೆ. ಅದಕ್ಕಾಗಿ ಬ್ಯಾಂಕ್ ರಜಾ ದಿನಗಳ ಪಟ್ಟಿ ತಿಳಿದು ಕೊಂಡರೆ ಈ ಗೊಂದಲಕ್ಕೆ ಜಾಗವೇ ಇರುವುದಿಲ್ಲ. ಎಂದಿನಂತೆ ಆರ್ಬಿಐ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ ರಜಾ ದಿನಗಳನ್ನು ಪಟ್ಟಿ ಮಾಡಿದೆ. ಅದರಂತೆ ಆಗಸ್ಟ 2026 ರ ಬ್ಯಾಂಕ್ ರಜೆ ಪಟ್ಟ ಹೀಗಿದೆ:
ಆಗಸ್ಟ್ 2026 ಬ್ಯಾಂಕ್ ರಜೆ ಪಟ್ಟಿ
ಆಗಸ್ಟ್ ತಿಂಗಳನಲ್ಲಿ ಬ್ಯಾಂಕ್ ಬರೋಬ್ಬರಿ 14 ದಿನಗಳ ಕಾಲ ಮುಚ್ಚಿರಲಿದೆ.
ಆಗಸ್ಟ್ 2 : ಭಾನುವಾರ, ದೇಶಾದ್ಯಂತ ಬ್ಯಾಂಕ್ ರಜೆ.
ಆಗಸ್ಟ್ 4 : ಮಂಗಳವಾರ, ಕೇರ್ ಪೂಜೆ ಅಗರ್ತಲಾದಲ್ಲಿ ಬ್ಯಾಂಕ್ ರಜೆ.
ಆಗಸ್ಟ್ 8 : ಎರಡನೇ ಶನಿವಾರ, ದೇಶಾದ್ಯಂತ ಎಲ್ಲ ಬ್ಯಾಂಕ್ ಶಾಖೆಗಳಿಗೆ ರಜೆ.
ಆಗಸ್ಟ್ 9 : ಭಾನುವಾರ, ದೇಶಾದ್ಯಂತ ಎಲ್ಲ ಬ್ಯಾಂಕ್ ಶಾಖೆಗಳಿಗೆ ರಜೆ.
ಆಗಸ್ಟ್ 13 : ಗುರುವಾರ, ದೇಶಭಕ್ತರ ದಿನದಂದು ಇಂಫಾಲ್ನಲ್ಲಿ ಎಲ್ಲಾ ಬ್ಯಾಂಕುಗಳಿಗೆ ರಜೆ.
ಆಗಸ್ಟ್ 15 : ಶನಿವಾರ, ಸ್ವಾತಂತ್ರ್ಯ ದಿನಾಚರಣೆ, ದೇಶಾದ್ಯಂತ ಸಾರ್ವತ್ರಿಕ ರಜೆ.
ಆಗಸ್ಟ್ 16 : ಭಾನುವಾರ, ದೇಶಾದ್ಯಂತ ಎಲ್ಲ ಬ್ಯಾಂಕ್ ಶಾಖೆಗಳಿಗೆ ರಜೆ.
ಆಗಸ್ಟ್ 19 : ಬುಧವಾರ, ಮಹಾರಾಜ ಬೀರ್ ಬಿಕ್ರಮ್ ಕಿಶೋರ್ ಮಾಣಿಕ್ಯ ಬಹದ್ದೂರ್ ಅವರ ಜನ್ಮದಿನಾಚರಣೆ, ಅಗರ್ತಲಾದಲ್ಲಿ ಬ್ಯಾಂಕ್ ರಜೆ.
ಆಗಸ್ಟ್ 22 : ನಾಲ್ಕನೇ ಶನಿವಾರ, ದೇಶಾದ್ಯಂತ ಎಲ್ಲ ಬ್ಯಾಂಕ್ ಶಾಖೆಗಳಿಗೆ ರಜೆ.
ಆಗಸ್ಟ್ 23 : ಭಾನುವಾರ, ದೇಶಾದ್ಯಂತ ಎಲ್ಲ ಬ್ಯಾಂಕ್ ಶಾಖೆಗಳಿಗೆ ರಜೆ.
ಆಗಸ್ಟ್ 25 : ಮಂಗಳವಾರ, ಮಿಲಾದ್-ಉನ್-ನಬಿ/ಮೊದಲ ಓಣಂ/ಮಿಲಾದ್-ಇ-ಶೆರಿಫ್ (ಪ್ರವಾದಿ ಮುಹಮ್ಮದ್ ಅವರ ಜನ್ಮದಿನ), ಕೊಚ್ಚಿ, ತಿರುವನಂತಪುರಂ ಮತ್ತು ವಿಜಯವಾಡದಲ್ಲಿ ಬ್ಯಾಂಕ್ ರಜೆ.
ಆಗಸ್ಟ್ 26 : ಬುಧವಾರ, ಈದ್-ಇ-ಮಿಲಾದ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ್, ಕೊಚ್ಚಿ, ಲಕ್ನೋ, ಮುಂಬೈ, ನಾಗ್ಪುರ್, ನವದೆಹಲಿ, ಪಾಟ್ನಾ, ರಾಯ್ಪುರ, ರಾಂಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ.
ಇದನ್ನೂ ಓದಿ: Indo-MIM IPO gmp today: ಇಂಡೋ-ಎಂಐಎಂ ಷೇರಿಗೆ ಮುಗಿಬಿದ್ದ ಹೂಡಿಕೆದಾರರು, ಬಂಪರ್ ಜಿಎಂಪಿ, ಶೇ. 40 ಲಾಭದ ನಿರೀಕ್ಷೆ
ಆಗಸ್ಟ್ 28 : ಶುಕ್ರವಾರ, ರಕ್ಷಾ ಬಂಧನ/ಪಾಂಗ್-ಲಬ್ಸೋಲ್/ಶ್ರೀ ನಾರಾಯಣ ಗುರು ಜಯಂತಿ, ಅಹಮದಾಬಾದ್, ಭೋಪಾಲ್, ಡೆಹ್ರಾಡೂನ್, ಗ್ಯಾಂಗ್ಟಾಕ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಲಕ್ನೋ, ಶಿಮ್ಲಾ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ.
ಆಗಸ್ಟ್ 30 : ಭಾನುವಾರ, ದೇಶಾದ್ಯಂತ ಎಲ್ಲ ಬ್ಯಾಂಕ್ ಶಾಖೆಗಳಿಗೆ ರಜೆ.
ಗಮನಿಸಿ: ಬ್ಯಾಂಕ್ನ ರಜಾ ವೇಳಾಪಟ್ಟಿಯನ್ನು ತಿಳಿದುಕೊಳ್ಳುವುದರಿಂದ ಕೊನೆಯ ಕ್ಷಣದ ಅವಸರವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಚೆಕ್ ಕ್ಲಿಯರೆನ್ಸ್, ನಗದು ವಹಿವಾಟು ಅಥವಾ ಬ್ಯಾಂಕ್ ಶಾಖೆಗಳಿಗೆ ಭೇಟಿ ಮುಂತಾದ ಕೆಲಸಗಳಿಗೆ ಮೊದಲೇ ಯೋಜನೆ ರೂಪಿಸಿಕೊಳ್ಳಬಹುದು. ಆಗಸ್ಟ್ ತಿಂಗಳಿನಲ್ಲಿ 14 ದಿನ ಬ್ಯಾಂಕ್ ಮುಚ್ಚಲ್ಪಟ್ಟಿದ್ದರೂ ಆನ್ಲೈನ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು 24/7 ಬಳಸಬಹುದಾಗಿದೆ.

