ಫ್ಯಾಕ್ಸ್‌ಕಾನ್‌ನಿಂದ ನಿಲ್ಲದ ಕನ್ನಡಿಗರಿಗೆ ವಂಚನೆ : ಬೃಹತ್‌ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಿದ್ದತೆ

ಬೆಂಗಳೂರು : ತೈವಾನ್‌ ಮೂಲದ ಐಪೋನ್‌ ತಯಾರಿಕಾ ಕಂಪೆನಿ ಫ್ಯಾಕ್ಸ್‌ಕಾನ್‌ (Faxconn Company) ನಲ್ಲಿ ಕನ್ನಡಿಗರಿಗೆ ಆಗುತ್ತಿರುವ ವಂಚನೆ ನಿಂತಿಲ್ಲ. ಈ ಹಿನ್ನೆಲೆಯಲ್ಲೀಗ ಪ್ರವೀಣ್‌ ಶೆಟ್ಟಿ ಅವರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಮತ್ತೊಮ್ಮೆ ಫ್ಯಾಕ್ಸ್‌ಕಾನ್‌ ವಿರುದ್ದ ಬೃಹತ್‌ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದೆ

ಪ್ರವೀಣ್‌ ಶೆಟ್ಟಿ ಅವರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಕ್ಟೋಬರ್‌ ತಿಂಗಳಿನಲ್ಲಿ ಫ್ಯಾಕ್ಸ್‌ಕಾನ್‌ ಕಂಪೆನಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡಿಗರಿಗೆ ಕಂಪೆನಿಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಉದ್ಯೋಗ ಒದಗಿಸುವಂತೆ ಆಗ್ರಹಿಸಿದ್ದರು.

ಆದರೆ ಭಾರತದ ಅತಿದೊಡ್ಡ ಐಫೋನ್ ಉತ್ಪಾದನಾ ಘಟಕಗಳಲ್ಲಿ ಒಂದಾದ ದೊಡ್ಡಬಳ್ಳಾಪುರದ ಫಾಕ್ಸ್‌ಕಾನ್‌ನಲ್ಲಿ ಯಾವುದೇ ಬದಲಾವಣೆಯೂ ನಡೆದಿಲ್ಲ ಎಂದು ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆರೋಪಿಸಿದ್ದಾರೆ.

ಕಳೆದ ಬಾರಿ ಪ್ರತಿಭಟನೆ ನಡೆಸಿ, ಫ್ಯಾಕ್ಸ್‌ಕಾನ್‌ ಕಂಪೆನಿಯ ಆಡಳಿತ ಮಂಡಳಿಗೆ ನಮ್ಮ ಬೇಡಿಕೆಯನ್ನು ತಿಳಿಸಿದ್ದೇವು. ಆದರೂ ಫ್ಯಾಕ್ಸ್‌ಕಾನ್‌ ಕಂಪೆನಿಯು ತಮಿಳುನಾಡು ಮೂಲದ ಕಂಪೆನಿಗಳ ಜೊತೆಗೆ ಕ್ಯಾಂಟೀನ್‌, ಸಾರಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣ್‌ ಶೆ್ಟ್ಟಿ ಅವರು ಆರೋಪಿಸಿದ್ದಾರೆ.

ಕನ್ನಡಿಗ ನೌಕರರನ್ನು ಕಂಪೆನಿಗೆ ನೇಮಕ ಮಾಡಿಕೊಳ್ಳುವುದು ಮಾತ್ರವಲ್ಲ, ಕರ್ನಾಟಕ ಜನರು ಸ್ಥಾಪಿಸಲಾದ ಕಂಪೆನಿಗಳಿಗೆ ಗುತ್ತಿಗೆಯನ್ನು ನೀಡಬೇಕು. ಇಲ್ಲದೇ ಇದ್ದರೆ ಫ್ಯಾಕ್ಸ್‌ಕಾನ್‌ ಕಂಪೆನಿ ಕರ್ನಟಕದಲ್ಲಿ ಹೂಡಿಕೆ ಮಾಡಿರುವ ಉದ್ದೇಶಕ್ಕೆ ಅರ್ಥವೇ ಇಲ್ಲದಂತಾಗುತ್ತದೆ ಎಂದು ಹೇಳಿದ್ದಾರೆ.

ತೈವಾನ್ ಮೂಲದ ಫಾಕ್ಸ್‌ಕಾನ್ ಕಂಪನಿಯಲ್ಲಿ ತಮಿಳುನಾಡಿಗರೇ ಪ್ರಮುಖ ಹುದ್ದೆಯಲ್ಲಿದ್ದಾರೆ. ಅಲ್ಲದೇ ಕಂಪೆನಿಯ ಎಲ್ಲಾ ನಿರ್ಧಾರಗಳನ್ನು ತಮಿಳುನಾಡಿಗರೇ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಅವಕಾಶಗಳನ್ನು ನಿರಾಕರಿಸುವ ಕೆಲಸ ಮಾಡುತ್ತಿದ್ದಾರೆ.

ಯಾವ ಬೆಲೆ ತೆತ್ತಾದರೂ ಸರಿ, ತಮಿಳುನಾಡಿಗರು ಕನ್ನಡಿಗರ ಮೇಲೆ ನಡೆಯುತ್ತಿರುವ ಅನ್ಯಾಯ, ದಬ್ಬಾಳಿಕೆಯನ್ನು ಕೊನೆಗೊಳಿಸುತ್ತೇವೆ. ಸೇವಾ ವಲಯದಲ್ಲಿ ನೆರೆಯ ರಾಜ್ಯದವರಿಗಿಂತ ಕನ್ನಡಿಗರೇ ಹೆಚ್ಚು ಉತ್ತಮರು ಎಂದು ಪ್ರವೀಣ್‌ ಶೆಟ್ಟಿ ಹೇಳಿದ್ದಾರೆ.

ಫ್ಯಾಕ್ಸ್‌ಕಾನ್‌ ಕಂಪೆನಿಯ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಸಾರಿಗೆ ಕಂಪೆನಿಯು ಸಿಬ್ಬಂದಿಗಳಿಗೆ ಮನೆ – ಮನೆಗೆ ಪಿಕ್‌ ಅಪ್‌ ಮತ್ತು ಡ್ರಾಫ್‌ ಸೌಲಭ್ಯವನ್ನು ಒದಗಿಸುತ್ತಿಲ್ಲ. ನಡು ರಸ್ತೆಯಲ್ಲಿಯೇ ಮಹಿಳಾ ಸಿಬ್ಬಂದಿಗಳನ್ನು ಇಳಿಸಿ ಹೋಗುತ್ತಿರುವುದು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಆರೋಪಿಸಿದ್ದಾರೆ.

ಒಂದೊಮ್ಮೆ ಮಹಿಳಾ ಸಿಬ್ಬಂದಿಗಳನ್ನು ನಡು ರಸ್ತೆಯಲ್ಲಿಯೇ ಇಳಿಸಿ ಹೋಗುವಾಗ, ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಅದು ಕರ್ನಾಟಕಕ್ಕೆ ಅಪಖ್ಯಾತಿ ತರುತ್ತದೆ. ಮಹಿಳಾ ಸಿ್ಬ್ಬಂದಿಗಳಿಗೆ ಮನೆ -ಮನೆಗೆ ಪಿಕ್‌ ಅಪ್‌ ಹಾಗೂ ಡ್ರಾಫ್‌ ಸೌಲಭ್ಯ ನೀಡದೇ ಇರುವುದಕ್ಕೆ ಟ್ರಾನ್ಸ್‌ಪೋರ್ಟ್‌ ಮ್ಯಾನೇಜರ್‌ ಪ್ರಭಾಕರನ್‌ ನೇರ ಕಾರಣ ಎಂದು ಪ್ರವೀಣ್‌ ಶೆಟ್ಟಿ ಅವರು ಆರೋಪಿಸಿದ್ದರೆ.

Faxconn Company : ಕರವೇಯಿಂದ ಬೃಹತ್‌ ಪ್ರತಿಭಟನೆ

ಒಂದು ಬಾರಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದರೂ ಕೂಡ ಕನ್ನಡಿಗರ ಮೇಲಿನ ದಬ್ಬಾಳಿಕೆಯನ್ನು ನಿಲ್ಲಿಸದ ಫ್ಯಾಕ್ಸ್‌ಕಾನ್‌ ಕಂಪೆನಿಯ ವಿರುದ್ದ ಕರವೇ ಬೃಹತ್‌ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಕಂಪೆನಿಯು ತಮಿಳುನಾಡಿಗರಿಗೆ ಮಣೆ ಹಾಕುವುದನ್ನು ನಿಲ್ಲಿಸಿ, ಕನ್ನಡಿಗರಿಗೆ ಅವಕಾಶ ಒದಗಿಸುವ ವರೆಗೆ ಕರ್ನಾಟಕ ರಕ್ಷಣಾ ವೇದಿಕೆ ಹಿಂದೆ ಸರಿಯುವುದಿಲ್ಲ ಎಂದಿದೆ.

ಭ್ರೂಣ ಹತ್ಯೆ ಸಂಕಷ್ಟಕ್ಕೆ ಸಿಲುಕಿದ ಫ್ಯಾಕ್ಸ್‌ಕಾನ್‌

ಒಂದೆಡೆ ಕನ್ನಡಿಗರಿಗೆ ಕಂಪೆನಿ ದೌರ್ಜನ್ಯ ಎಸಗುತ್ತಿದ್ರೆ, ಮತ್ತೊಂದೆಡೆಯಲ್ಲಿ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಲಿಬೆಲೆ ಪೊಲೀಸರು ಇತ್ತೀಚೆಗೆ ಕಂಪನಿಗೆ ನೋಟಿಸ್ ನೀಡಿದ್ದಾರೆ. ಫಾಕ್ಸ್‌ಕಾನ್‌ನ ಮುಖ್ಯಸ್ಥ ಅರುಣ್ ಅವರಿಗೆ ಪೊಲೀಸರು ನೀಡಿರುವ ನೋಟೀಸ್‌ ನಲ್ಲಿ ಕಂಪೆನಿಯ 2,100 ಉದ್ಯೋಗಿಗಳ ವಿವರಗಳನ್ನು ಕೋರಿದ್ದಾರೆ.

ಭ್ರೂಣ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸೂಲಿಬೆಲೆ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. 2025ರ ಮಾರ್ಚ್ ತಿಂಗಳಿನಲ್ಲಿ ಹೊಸಕೋಟೆಯ ಕಂಬಾಲಿಪುರದಲ್ಲಿರುವ ಬಿಸಿಡಿ ಅಪಾರ್ಟ್ ಮೆಂಟ್‌ನ ಒಳಚರಂಡಿ ನಿರ್ವಹಣಾ ಕಾರ್ಯದ ವೇಳೆಯಲ್ಲಿ ಭ್ರೂಣ ಪತ್ತೆಯಾಗಿತ್ತು.

ಇದೇ ಅಪಾರ್ಟ್‌ಮೆಂಟ್‌ ನಲ್ಲಿ ಫಾಕ್ಸ್‌ಕಾನ್ ಕಂಪೆನಿಯ ಮಹಿಳಾ ಉದ್ಯೋಗಿಗಳಿಗೆ ವಸತಿ ಸೌಕರ್ಯವನ್ನು ಒದಗಿಸಲಾಗಿತ್ತು . ಪೊಲೀಸರ ತನಿಖೆಯಲ್ಲಿ ಪತ್ತೆ ಆಗಿರುವುದು ಗಂಡು ಭ್ರೂಣ ಅನ್ನೋದು ದೃಢಪಟ್ಟಿತ್ತು.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರು ಸೂಲಿಬೆಲೆ ಪೊಲೀಸರು ಮಾರ್ಚ್‌ನಲ್ಲಿ ಕಂಪೆನಿಗೆ ನೋಟೀಸ್‌ ಜಾರಿ ಮಾಡಿದ್ದಾರೆ. ಆದರೆ ಬಿಸಿಡಿ ಮೇಲ್ವಿಚಾರಕರು ಫಾಕ್ಸ್‌ಕಾನ್‌ನಿಂದ ನೇರವಾಗಿ ಮಾಹಿತಿಯನ್ನು ಪಡೆಯಬೇಕೆಂದು ವಿನಂತಿಸಿದರು.

ದೊಡ್ಡಬಳ್ಳಾಪುರದಲ್ಲಿ ನಿರ್ಮಾಣಗೊಂಡಿರುವ ಫ್ಯಾಕ್ಸ್‌ಕಾನ್ ಕಂಪೆನಿ ದೇಶದ ಅತ್ಯುತ್ತಮ ಕಂಪೆನಿ ಅನ್ನೋದ್ರಲ್ಲಿ ಎರಡು ಮಾತಿ್ಲ್ಲ. ಆದರೆ ಕಂಪೆನಿಯ ಉನ್ನತ ಹುದ್ದೆಯಲ್ಲಿರುವ ಕೆಲವು ನೌಕರರ ತಮಿಳು ಪ್ರೇಮ ಇದೀಗ ಫ್ಯಾಕ್ಸ್ ಕಾನ್‌ ಕಂಪೆನಿಗೆ ಕೆಟ್ಟ ಹೆಸರು ತರುತ್ತಿದೆ. ಈ ಕುರಿತು ಕಂಪೆನಿ ಮುಖ್ಯಸ್ಥರು ಎಚ್ಚೆತ್ತುಕೊಳ್ಳಲೇ ಬೇಕಾಗಿದೆ.

Karnataka Rakshana Vedike prepare Protest Aginst Doddaballapur Faxconn Company

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories