ವೈಲ್ಡ್ ಕಾರ್ಡ್ ಆಗಿ ರಜತ್-ಚೈತ್ರಾ ಎಂಟ್ರಿ, ಈಗ ಅಸಲಿ ಆಟ ಶುರುನಾ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಈಗಾಗಲೇ 50 ದಿನಗಳನ್ನು ಪೂರೈಸಿದೆ. ಆದ್ರೆ ಈಗ ಶೋಗೆ ಒಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಹೌದು ಬಿಗ್ ಬಾಸ್ ಮನೆಗೆ ಕಳೆದ ಸೀಸನ್‍ನ ರಜತ್ ಕಿಶನ್ ಮತ್ತು ಚೈತ್ರಾ ಕುಂದಾಪುರ ಅವರು ಎಂಟ್ರಿ ಆಗ್ತಿದ್ದಾರೆ. ಗೆಸ್ಟ್ ಆಗಿ ಬಂದು ಐದು ಜನರಲ್ಲಿ ಇವರಿಬ್ಬರು ಸ್ಪರ್ಧಿಗಳಾಗಿ ಮುಂದುವರೆದಿದ್ದಾರೆ. ಅದನ್ನು ಸುದೀಪ್ ಅವರು ನಿನ್ನೆ ಸಂಚಿಕೆಯಲ್ಲಿ ಘೋಷಣೆ ಮಾಡಿದ್ದಾರೆ.
ಅತಿಥಿಗಳಾಗಿ ಬಂದವರು ಈಗ ಸ್ಪರ್ಧಿಗಳು
ಕಳೆದ ವಾರ ಬಿಬಿ ಹೌಸ್ ರೆಸಾರ್ಟ್ ಆಗಿ ಬದಲಾಗಿತ್ತು. ರಜತ್, ಉಗ್ರಂ ಮಂಜು, ವಿಕ್ರಮ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಅಥಿತಿಗಳಾಗಿ ಬಂದಿದ್ದರು. ಆದ್ರೆ ನಿನ್ನೆ ರಜತ್ ಮತ್ತು ಚೈತ್ರಾ ಅವರು ಸ್ಪರ್ಧಿಗಳು ಎಂದು ಸುದೀಪ್ ಹೇಳಿದ್ದಾರೆ.
ಇಬ್ಬರು ಮಾತಿನ ಮಲ್ಲರು
ರಜತ್ ಕಿಶನ್ ಮತ್ತು ಚೈತ್ರಾ ಕುಂದಾಪುರ ಇಬ್ಬರು ಮಾತಿನ ಮಲ್ಲರು. ಇಬ್ಬರು ಮಾತನಾಡಲು ಶುರು ಮಾಡಿದ್ರೆ ಜಗಳ ಅಂತ ಎಲ್ಲರಿಗೂ ಗೊತ್ತು. ಈ ಬಾರಿಯೂ ಅದೇ ಮುಂದುವರೆಯುವ ಸಾಧ್ಯತೆ ಇದೆ.
ಜಗಳದ ಮನೆಯಲ್ಲಿ ಮತ್ತೆ ಜಗಳ
ಬಿಗ್ ಬಾಸ್ ಈ ಬಾರಿ ವಿಭಿನ್ನವಾಗಿದ್ದು, ಯಾವಾಗ ನೋಡಿದ್ರೂ ಸ್ಪರ್ಧಿಗಳು ಜಗಳ ಆಡ್ತಾನೆ ಇರ್ತಾರೆ. ಅಶ್ವಿನಿ ಗೌಡ ಮತ್ತು ಗಿಲ್ಲಿ ಜಗಳ ಕಾಮನ್ ಆಗಿದೆ. ಈಗ ಮತ್ತೆ ಇವರಿಬ್ಬರು ಸೇರಿದ್ದು ಮತ್ತೆ ಜಗಳ ಆಗೋದ್ರಲ್ಲಿ ಅನುಮಾನ ಇಲ್ಲ. ಅದ್ರಲ್ಲೂ ಚೈತ್ರಾ ಮಾತಿಗೆ ಮಾತು ಕೊಡಲು ಆಗಲ್ಲ.
ಎರಡನೇ ಬಾರೀ ವೈಲ್ಡ್ ಕಾರ್ಡ್ ಎಂಟ್ರಿ
ಇನ್ನು 4 ವಾರಗಳ ಹಿಂದೆ ಮೂವರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ರಘು, ಸೂರಜ್, ರಿಷಾ ಬಂದಿದ್ರು. ಈಗ ಮತ್ತೆ ಐವತ್ತು ದಿನ ಆದ ಮೇಲೆ ರಜತ್ ಮತ್ತು ಚೈತ್ರಾ ಬಂದಿದ್ದಾರೆ.
ಇದನ್ನೂ ಓದಿ: https://kannada.newsnext.live/cinema/former-contestants-enter-the-bigg-boss-house-see-details/
ರಜತ್‍ಗೂ 2ನೇ ಬಾರಿ ಚಾನ್ಸ್
ಇನ್ನು ರಜತ್ ಕಿಶನ್ ಸಹ ಕಳೆದ ಬಾರಿ 50 ದಿನ ಆದ ಮೇಲೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಆಗಿದ್ದರು. ಆಗ ಟಾಪ್ 4 ನಲ್ಲಿ ಬಂದಿದ್ರು. ಈ ಬಾರಿ ಸಹ ವೈಲ್ಡ್ ಕಾರ್ಡ್ ಆಗಿ ಬಂದಿದ್ದು ಮೋಡಿ ಮಾಡ್ತಾರಾ ನೋಡಬೇಕು.



