ಮದ್ಯವೆಂದು ಭಾವಿಸಿ ಬ್ರೇಕ್ ಆಯಿಲ್ ಸೇವಿಸಿದ ವೃದ್ಧ ಸಾ*ವು..

ಉಡುಪಿ: Old man died: ಮದ್ಯಪಾನವೆಂದು ತಪ್ಪಾಗಿ ಭಾವಿಸಿ ವಾಹನದ ಬ್ರೇಕ್ ಫ್ಲುಯಿಡ್ (ಬ್ರೇಕ್ ಆಯಿಲ್) ಸೇವಿಸಿದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟ ದಾರುಣ ಘಟನೆ ಮುದ್ರಾಡಿ ಗ್ರಾಮದ ಬಲ್ಲಾಡಿ ಈಶ್ವರನಗರದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ತಮ್ಮು ಪೂಜಾರಿ (78) ಮೃತಪಟ್ಟವರು.

ನವೆಂಬರ್ 20ರಂದು ಮನೆಯಲ್ಲಿದ್ದ ಬ್ರೇಕ್ ಪ್ಯುಡ್ ಆಯಿಲ್ ಅನ್ನು ಮದ್ಯವೆಂದು ತಪ್ಪಾಗಿ ಭಾವಿಸಿ ಅವರು ಸೇವಿಸಿದ್ದರೆಂದು ತಿಳಿದುಬಂದಿದೆ. ವಿಷಮಯ ದ್ರವ ಸೇವನೆಯಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

Also Read: Car accident: ವೇಗದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ: ಇಂಜಿನಿಯರ್‌ ಸೇರಿದಂತೆ ಮೂವರಿಗೆ ಗಾಯ

ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 2ರ ಬೆಳಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories