ಕಾಂಗ್ರೆಸ್​ ನಾಯಕ ಮಿಥುನ್​ ರೈ ಶಿಸ್ತು ಉಲ್ಲಂಘನೆ : ನೋಟಿಸ್​ ಜಾರಿ ಮಾಡಿದ ಎಐಸಿಸಿ

ಡಿಸೆಂಬರ್​ 3ರಂದು ಮಂಗಳೂರಿನ ವಿವಿ ಕ್ಯಾಂಪಸ್​ನಲ್ಲಿ ನಡೆದ ನಾರಾಯಣ ಗುರುಗಳು ಹಾಗೂ ಮಹಾತ್ಮ ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮ ಇದೀಗ ಡಿ.ಕೆ ಶಿವಕುಮಾರ್​ ಬೆಂಬಲಿಗರಿಗೆ ಸಂಕಷ್ಟ ತಂದಿದೆ. ಪಕ್ಷದ ಶಿಸ್ತು ಉಲ್ಲಂಘನೆ ಮಾಡಿರುವ ಆರೋಪದ ಅಡಿಯಲ್ಲಿ ಮಿಥುನ್​ ರೈಗೆ ಎಐಸಿಸಿಯಿಂದ ಶೋಕಾಸ್​ ನೋಟಿಸ್​ ನೀಡಲಾಗಿದೆ.
ಈ ಕಾರ್ಯಕ್ರಮಕ್ಕೆ ಹಾಜರಾಗಲೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​​ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ಸಂದರ್ಭದಲ್ಲಿ ಕೆ.ಸಿ ವೇಣುಗೋಪಾಲ್​ ಅವರನ್ನು ಸ್ವಾಗತಿಸಲು ಕಾಂಗ್ರೆಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥುನ್​ ರೈ ಕೂಡ ಏರ್​ಪೋರ್ಟ್​ಗೆ ತೆರಳಿದ್ದು. ಈ ವೇಳೆ ಅಲ್ಲಿ ಸೇರಿದ್ದ ಭಾರೀ ಸಂಖ್ಯೆಯ ಕಾಂಗ್ರೆಸ್​ ಕಾರ್ಯಕರ್ತರು ಕೆ.ಸಿ ವೇಣುಗೋಪಾಲ್​ ಅವರ ಎದುರಲ್ಲೇ ಡಿ.ಕೆ , ಡಿ.ಕೆ ಎಂದು ಘೋಷಣೆ ಕೂಗುವ ಮೂಲಕ ಕೆ.ಸಿ ವೇಣುಗೋಪಾಲ್​ ಅವರಿಗೆ ಇರಿಸು ಮುರಿಸು ಉಂಟಾಗುವಂತೆ ಮಾಡಿದ್ದಾರೆ.

ಇದನ್ನೂ ಓದಿ: DK Sivakumar fan hydrama: ಮಂಗಳೂರಿನಲ್ಲಿ ಡಿ.ಕೆ ಶಿವಕುಮಾ‌ರ್ ಅಭಿಮಾನಿಗಳ ಹೈಡ್ರಾಮಾ : ಕೆ.ಸಿ ವೇಣುಗೋಪಾಲ್ ಎದುರು ಡಿಕೆಶಿ ಜಯಘೋಷ

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥುನ್​ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್​ ಶೋಕಾಸ್​ ನೋಟಿಸ್​ ಜಾರಿ ಮಾಡಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘನೆ ಬಗ್ಗೆ ಕಾರಳ ಕೇಳಿ ಮಿಥುನ್​ ರೈಗೆ ಕಾಂಗ್ರೆಸ್​ ಹೈಕಮಾಂಡ್​ ನೋಟಿಸ್​ ನೀಡಿದೆ.
ಡಿ.ಕೆ ಶಿವಕುಮಾರ್​ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಿಥುನ್​ ರೈ, ರಾಜ್ಯದ ಸಿಎಂ ಸ್ಥಾನ ಡಿ.ಕೆ ಶಿವಕುಮಾರ್​ಗೆ ಲಭಿಸಬೇಕು ಎಂದು ಬೆಂಬಲಿಸುವವರ ಸಾಲಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಿಥುನ್​ ರೈ ಬೆಂಬಲಿಗರು ಡಿ.ಕೆ ಎಂದು ಘೋಷಣೆ ಕೂಗಿದ್ದರು.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories