ಕಿಚ್ಚನ ಮುಂದೆಯೇ ಕಿತ್ತಾಡಿಕೊಂಡ ಧ್ರುವಂತ್-ರಜತ್! ಸುದೀಪ್ ಮೌನವಾಗಿದ್ಯಾಕೆ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಇಂದು ಕಿಚ್ಚನ ಪಂಚಾಯಿತಿ ಇದೆ. ನಟ ಸುದೀಪ್ ಮುಂದೆಯೇ ಧ್ರುವಂತ್-ರಜತ್ ಕಿಶನ್ ಕಿತ್ತಾಡಿಕೊಂಡಿದ್ದಾರೆ. ಸುದೀಪ್ ಇಬ್ಬರನ್ನೂ ನೋಡುತ್ತಾ ಸುಮ್ಮನೇ ನಿಂತಿದ್ದಾರೆ. ಇವತ್ತಿನ ಸಂಚಿಕೆ ಭಾರೀ ಕುತೂಹಲ ಮೂಡಿಸಿದ್ದು ಪ್ರೇಕ್ಷಕರು ಸುದೀಪ್ ಉತ್ತರಕ್ಕಾಗಿ ಕಾಯ್ತಾ ಇದ್ದಾರೆ. ಹಾಗಾದ್ರೆ ಇಬ್ಬರ ಮಧ್ಯೆ ಆಗಿದ್ದೇನು ನೋಡಿ.
ವೀಕ್ಷಕರಿಂದ ಬಂದು ಪ್ರಶ್ನೆಗಳು
ಇಂದಿನ ಸಂಚಿಕೆಯಲ್ಲಿ ವೀಕ್ಷಕರು ಮನೆಯಲ್ಲಿರು ಸ್ಪರ್ಧಿಗಳಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ಧ್ರುವಂತ್ ಅವರು ಲೆಟರ್ ಓದಿದ್ದಾರೆ. ಮನೆ ಬಿಟ್ಟು ಹೋಗುವಂತದ್ದು ಏನಾಗಿದೆ ಎಂದು ಧ್ರುವಂತ್ ಗೆ ಪತ್ರ ಬಂದಿದೆ.
ನನಗೆ ಡ್ಯಾಮೇಜ್ ಆಗ್ತಿದೆ
ನಾವು ಅಲ್ಲದೇ ಇರುವ ಬ್ಲೇಮ್ಸ್ಗಳನ್ನು ತೆಗೆದುಕೊಳ್ಳಲು ಆಗಲ್ಲ. ಆ ರೀತಿ ಬ್ಲೇಮ್ ನಿರಂತರವಾಗಿ ಬಂದಿದೆ. ಅದರಿಂದ ಆಗುವ ಡ್ಯಾಮೇಜ್ ನನಗೆ ಬೇಕಾ ಎಂದು ಅನ್ನಿಸುತ್ತೆ. ಅದಕ್ಕೆ ಮನೆಗೆ ಹೋಗಬೇಕು ಎಂದು ಧ್ರುವಂತ್ ಹೇಳಿದ್ದಾರೆ.
ಅಸಭ್ಯವಾಗಿ ನಡೆದುಕೊಳ್ಳುವುದು ಧ್ರುವಂತ್
ಡ್ಯಾಮೇಜ್ ಮಾಡಿಕೊಳ್ಳುತ್ತಿರುವುದೇ ಧ್ರುವಂತ್. ಅಸಭ್ಯವಾಗಿ ಮಾತನಾಡುವುದು, ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದು ಧ್ರುವಂತ್ ಎಂದು ರಜತ್ ಕಿಶನ್ ಹೇಳಿದ್ದಾರೆ. ಅದಕ್ಕೆ ಧ್ರುವಂತ್ ಕೋಪ ಮಾಡಿಕೊಂಡಿದ್ದಾರೆ.
ಸುದೀಪ್ ಮುಂದೆ ಕಿತ್ತಾಟ
ರಜತ್ ಮಾತಿಗೆ ಧ್ರುವಂತ್ ಬೇಸರ ಮಾಡಿಕೊಂಡು ದಿಸ್ ಈಸ್ ವೆರೆ ರಾಂಗ್ ಸ್ಟೇಟ್ಮೆಂಟ್ ಎಂದು ಹೇಳ್ತಾರೆ. ಅದಕ್ಕೆ ರಜತ್ ನಾನು ನೇರವಾಗಿ ಮಾತನಾಡುತ್ತೇನೆ ತಡೆದುಕೋ ಎಂದು ಹೇಳ್ತಾರೆ. ನೀನು ತಡೆದುಕೋ ಎಂದು ಧ್ರುಂವತ್ ಹೇಳ್ತಾರೆ. ಈ ರೀತಿ ನನ್ನ ಹತ್ತಿರ ಮಾತನಾಡುವುದಕ್ಕೆ ಬರಬೇಡ ಎಂದು ಹೇಳ್ತಾರೆ. ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲಿ ಇರು ಎಂದು ಹೇಳ್ತಾರೆ.
ಇದನ್ನೂ ಓದಿ: https://kannada.newsnext.live/cinema/potato-fight-in-the-bigg-boss-house-who-gets-the-class-from-sudeep/
ಸುದೀಪ್ ಮೌನ
ಎಲ್ಲವನ್ನೂ ಕೇಳಿಸಿಕೊಂಡು ಸುದೀಪ್ ಮೌನವಾಗಿದ್ದಾರೆ. ಇಬ್ಬರಿಗೂ ಏನು ಹೇಳ್ತಾರೆ ಎಂದು ಸಂಚಿಕೆಯಲ್ಲಿ ನೋಡಬೇಕು. ಇಷ್ಟು ದಿನ ವಾದ್ರೂ ಯಾರೂ ಸಹ ಕಿಚ್ಚ ಸುದೀಪ್ ಮುಂದೆ ಮಾತನಾಡಲು ಸಹ ಭಯ ಪಡ್ತಾರೆ. ಆದ್ರೆ ಇವರು ಜಗಳವಾಡಿದ್ದಾರೆ. ಅದಕ್ಕೆ ಇಬ್ಬರಿಗೂ ಮಾರಿ ಹಬ್ಬ ಕಾದಿದೆ ಎಂದು ಪ್ರೇಕ್ಷಕರು ಹೇಳ್ತಾ ಇದ್ದಾರೆ.
ಇನ್ನು ಯಾರ್ಯಾರಿಗೆ, ಯಾವ ಯಾವ ರೀತಿ ಪತ್ರಗಳು ಬಂದಿವೆ, ಪ್ರಶ್ನೆಗಳು ಬಂದಿವೆ ಎಂದು ಕಾದು ನೋಡಬೇಕಿದೆ.



