ದೈನಂದಿನ ಬಳಕೆಗೆ ಬೆಸ್ಟ್ ರೆಡ್ಮಿ ನೋಟ್ 14 ಪ್ರೋ: ಭಾರಿ ರಿಯಾಯಿತಿಯೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ

Redmi Note 14 Pro: ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಅಗತ್ಯ ವಸ್ತುಗಳ ಸಾಲಿಗೆ ಸೇರಿದೆ. ಹಣದ ವ್ಯವಹಾರದಿಂದ ಹಿಡಿದು ಆರೋಗ್ಯದ ರಕ್ಷಣೆಯವರೆಗೆ ಸ್ಮಾರ್ಟ್‌ಫೋನ್‌ ಬಳಕೆ ಎಲ್ಲಡೆ ಕಾಣಸಿಗುತ್ತದೆ.

ದಿನನಿತ್ಯ ಬಳಸುವ ಫೋನ್‌ ಹಾಳಾಗಿದ್ದರೆ ಅಥವಾ ಹಳೆಯ ಆವೃತ್ತಿಯ ಫೋನ್‌ ಆಗಿದ್ದರೆ ಅದನ್ನು ಬದಲಾಯಿಸುವುದು ಅನಿವಾರ್ಯವಾಗಿರುತ್ತದೆ.

ಅದೇ ರೀತಿ ನೀವೂ ಒಂದು ಮಿಡ್‌ ರೇಂಜ್‌ನ ಫೋನ್‌ ಹುಡುಕಾಟದಲ್ಲಿದ್ದರೆ ನಿಮಗೀಗ ಒಳ್ಳೆಯ ಸುದ್ದಿ ಇದೆ. ಅದೇನೆಂದರೆ ರೆಡ್ಮಿ ನೋಟ್‌ 14 ಪ್ರೋ ಫೋನ್ ಅನ್ನು ನೀವೀಗ ಕೈಗೆಟಕುವ ದರದಲ್ಲಿ ಖರೀದಿಸಬಹುದು.

ಸದ್ಯ ಫ್ಲಿಪ್‌ಕಾರ್ಟ್‌ ಈ ಪೋನ್ ಮೇಲೆ ಉತ್ತಮ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ ಅನ್ನು ನೀವು 7000 ರೂ ಫ್ಲಾಟ್‌ ರಿಯಾಯಿತಿ, 2000 ರೂ ಬ್ಯಾಂಕ್‌ ಕೊಡುಗೆ ಪಡೆದುಕೊಂಡು ಖರೀದಿಸಬಹುದು.

ಇಷ್ಟೆಲ್ಲ ಕೊಡುಗೆ, ರಿಯಾಯಿತಿ ಪಡೆದುಕೊಂಡಿರುವ ಈ ಫೋನ್‌ ಅನ್ನು ನೀವು ಎಷ್ಟು ರೂಪಾಯಿ ಕೊಟ್ಟು ಖರೀದಿಸಿಬಹುದು ಹಾಗೂ ಈ ಫೋನ್‌ ನ ವೈಶಿಷ್ಟ್ಯಗಳೇನು ಎಂದು ತಿಳಿಯೋಣ.

ರೆಡ್ಮಿ ನೋಟ್‌ 14 ಪ್ರೋ ವೈಶಿಷ್ಟ್ಯ

ದೈನಂದಿನ ಬಳಕೆಗೆ ಹೆಚ್ಚು ಸೂಟ್‌ ಆಗಿರುವ ರೆಡ್ಮಿ ನೋಟ್‌ 14 ಪ್ರೋ ಫೋನ್‌ 6.67 ಇಂಚಿನ 1.5K AMOLED ಡಿಸ್ಪ್ಲೇಯನ್ನು ಹೊಂದಿದೆ. ಫೋನ್ ಶಾರ್ಪ್‌ ಇಮೇಜ್‌ಗಳನ್ನು ನೀಡುತ್ತದೆ.

ಯಾವುದೇ ಅಡೆತಡೆಗಳಲ್ಲಿದೇ ಸುಗಮವಾಗಿ ಚಲಿಸಲು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಇದು ಅತ್ಯುತ್ತಮ ಮಲ್ಟಿಟಾಸ್ಕಿಂಗ್‌, ಸ್ಟ್ರೀಮಿಂಗ್ ಮತ್ತು ಗೇಮಿಂಗ್ ಗೆ ಸೂಕ್ತವಾಗಿದೆ.

ಇನ್ನು ಕ್ಯಾಮೆರಾ ವಿಚಾರಕ್ಕೆ ಬಂದರೆ, ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಪ್ರಾಥಮಿಕ ಕ್ಯಾಮೆರಾ, ವೈಡ್-ಆಂಗಲ್ ಶಾಟ್‌ಗಳಿಗಾಗಿ 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಕ್ಲೋಸ್-ಅಪ್ ಶಾಟ್‌ಗಳಿಗಾಗಿ 2MP ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ.

ಹೆಚ್ಚುವರಿಯಾಗಿ, ಈ ಸಾಧನವು 45W ಚಾರ್ಜಿಂಗ್ ಬೆಂಬಲಿಸುವ 5,500mAh ಬ್ಯಾಟರಿಯೊಂದಿಗೆ ಬರುತ್ತದೆ.

ಇದನ್ನೂ ಓದಿ: ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ಶುಲ್ಕ: ಭಾರತದಲ್ಲಿ ಸ್ಟಾರ್‌ಲಿಂಕ್‌ ಇಂಟರ್ನೆಟ್‌ ಪ್ರೀಮಿಯಂ ದರ ಬಹಿರಂಗ

ರೆಡ್ಮಿ ನೋಟ್ 14 ಪ್ರೋ ಅನ್ನು ಎಷ್ಟಕ್ಕೆ ಖರೀದಿಸಬಹುದು?

ರೆಡ್ಮಿ ನೋಟ್‌ 14 ಪ್ರೊದ ಅಸಲಿ ಬೆಲೆಯು 28,999 ರೂ. ಆದರೆ ಇದೀಗ ನೀವು ಅದನ್ನು ಯಾವುದೇ ಬ್ಯಾಂಕ್‌ ರಿಯಾಯಿತಿ ಇಲ್ಲದಿದ್ದರೆ ಕೇವಲ 21,999 ರೂ.ಗೆ ಖರೀದಿಸಬಹುದು, ಅಂದರೆ ನೀವು ₹7,000 ವರೆಗೆ ನೇರ ರಿಯಾಯಿತಿಯನ್ನು ಪಡೆಯುತ್ತೀರಿ.

ಈ ಫೋನ್‌ಗೆ ಉತ್ತಮ ಬ್ಯಾಂಕ್ ಕೊಡುಗೆಗಳೂ ಇವೆ. ಅದನ್ನು ಸೇರಿಸಿದರೆ ಈ ಸಾಧನವನ್ನು ನೀವು ಇನ್ನೂ ಕಡಿಮೆ ಬೆಲೆಗೆ ಖರೀದಸಬಹುದು. HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಲ್ಲದ EMI ಆಯ್ಕೆಯು ₹1,750 ವರೆಗೆ ರಿಯಾಯಿತಿಯನ್ನು ನೀಡುತ್ತದೆ. ಆದರೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ಆಯ್ಕೆಯು ₹2,000 ವರೆಗೆ ರಿಯಾಯಿತಿಯನ್ನು ನೀಡುತ್ತದೆ, ಇದರಿಂದಾಗಿ ಫೋನ್‌ನ ಬೆಲೆ ₹19,999 ಕ್ಕೆ ಇಳಿಯುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.