ಸಿಎಂ ಸ್ಥಾನಕ್ಕಾಗಿ ಮುಂದುವರಿದ ಡಿಕೆಶಿ ಸರ್ಕಸ್ : ರಾಹುಲ್, ಸೋನಿಯಾ ಜೊತೆ ಮಹತ್ವದ ಮೀಟಿಂಗ್

Karnataka CM Change Secrete Meeting : ನವದೆಹಲಿ : ಮತಗಳ್ಳತನ ವಿರುದ್ಧದ ಹೋರಾಟಕ್ಕಾಗಿ ದೆಹಲಿಗೆ ತೆರಳಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಈ ಸಂದರ್ಭದಲ್ಲಿಯೂ ತಮ್ಮ ಸಿಎಂ ಸ್ಥಾನದ ಲಾಬಿ ಪ್ರಯತ್ನ ಮುಂದುವರಿಸಿದ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.
ನಿನ್ನೆ ಸಂಜೆ ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಸಿಎಂ ಸ್ಥಾನಕ್ಕಾಗಿ ಮತ್ತೊಮ್ಮೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.
ಮತಗಳ್ಳತನ ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯ ಕೂಡ ದೆಹಲಿಯಲ್ಲೇ ಇದ್ದರು. ಪ್ರತಿಭಟನಾ ಸಮಾವೇಶ ಮುಗಿಸಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯತ್ತ ಮುಖ ಮಾಡಿದ್ರೆ, ಡಿಸಿಎಂ ಡಿ.ಕೆ ಶಿವಕುಮಾರ್ ಮಾತ್ರ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಭೇಟಿಗೆ ತೆರಳಿದ ಡಿ.ಕೆ ಶಿವಕುಮಾರ್ ಮತ್ತೊಮ್ಮೆ ಸಿಎಂ ಸ್ಥಾನದ ಅಭಿಲಾಷೆ ಹೊರ ಹಾಕಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಅಧಿಕಾರ ಬದಲಾವಣೆ ಕುರಿತಂತೆ ಶೀಘ್ರದಲ್ಲೇ ಮಹತ್ವದ ನಿರ್ಧಾರ ಹೊರಹಾಕುವ ಭರವಸೆಯನ್ನು ಸೋನಿಯಾ ಹಾಗೂ ರಾಹುಲ್ ನೀಡಿದ್ದಾರೆ ಎನ್ನಲಾಗಿದೆ.ಆದರೆ ಈ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಇದೊಂದು ಸೌಹಾರ್ದ ಭೇಟಿ ಅಷ್ಟೇ.
ಎಲ್ಲಾ ಮಾಹಿತಿಯನ್ನು ನಾನು ಇಲ್ಲಿ ಹಂಚಿಕೊಳ್ಳಲು ಆಗುವುದಿಲ್ಲ. ಹೇಳಿಕೊಳ್ಳುವ ಅನಿವಾರ್ಯತೆಯೂ ನನಗಿಲ್ಲ ಎಂದು ಹೇಳಿದ್ದಾರೆ.ಆದರೂ ಸಿಎಂ ಸಿದ್ದರಾಮಯ್ಯ ದೆಹಲಿಯಿಂದ ನಿರ್ಗಮಿಸುತ್ತಿದ್ದಂತೆಯೇ ಡಿ.ಕೆ ಶಿವಕುಮಾರ್ ವರಿಷ್ಠರ ಭೇಟಿಗೆ ಮುಂದಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿದೆ.
Karnataka CM Change DK Shivakumar Sonia Gandhi and Rahul Gandhi Secrete Meeting



