ಕರ್ನಾಟಕದಲ್ಲಿ ಕನಿಷ್ಠ 30 ಮುಸ್ಲಿಂ ಶಾಸಕರು ಬೇಕು; ಹಿಂದೂ ಸ್ವಾಮೀಜಿಯಿಂದ ಕರೆ

ಜಮಖಂಡಿ: “ದೇಶದ 30 ಕೋಟಿ ಮುಸ್ಲಿಮರನ್ನು ಹೊರತುಪಡಿಸಿ ಭವಿಷ್ಯದ ಭಾರತದ ನಿರ್ಮಾಣ ಸಾಧ್ಯವಿಲ್ಲ. ಮುಸಲ್ಮಾನರು ಚುನಾವಣೆಯಲ್ಲಿ (Muslim MLA’s) ಸೋಲುವುದಿಲ್ಲ, ಬದಲಾಗಿ ಅವರನ್ನು ಸೋಲಿಸಲಾಗುತ್ತಿದೆ,” ಎಂದು ಮಹೇಶ್ವರಾನಂದ ಸ್ವಾಮೀಜಿ (Maheshwarananda Swamiji) ಹೇಳಿದ್ದಾರೆ.

ಜಮಖಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಸಮುದಾಯಗಳ ಜನಸಂಖ್ಯೆ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತು ಅಂಕಿ-ಅಂಶಗಳನ್ನು ನೀಡಿದರು. ರಾಜ್ಯದಲ್ಲಿ ಒಂದು ಕೋಟಿ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಜನ ಶಾಸಕರಿದ್ದಾರೆ. ಇದಕ್ಕೆ ವಿರುದ್ಧವಾಗಿ 66 ಲಕ್ಷ ಜನಸಂಖ್ಯೆ ಇರುವ ಲಿಂಗಾಯತ ಸಮುದಾಯದ 59 ಶಾಸಕರು, 60 ಲಕ್ಷ ಇರುವ ಒಕ್ಕಲಿಗರ 46 ಶಾಸಕರು ಹಾಗೂ 15 ಲಕ್ಷ ಇರುವ ಬ್ರಾಹ್ಮಣ ಸಮುದಾಯದ 10 ಶಾಸಕರಿದ್ದಾರೆ ಎಂದು ಅವರು ವಿವರಿಸಿದರು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕೇವಲ 15 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿದೆ. ಮುಂದಿನ ಬಾರಿ ಮುಸ್ಲಿಂ ಸಮುದಾಯದ ಕನಿಷ್ಠ 30 ಶಾಸಕರು ಆಯ್ಕೆಯಾಗಬೇಕು ಎಂದು ಅವರು ಕರೆ ನೀಡಿದರು. ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಮತ್ತು ವಿಜಯಪುರದಲ್ಲಿ ಹಮೀದ್ ಮುಷರಫ್ ಅವರನ್ನು ವ್ಯವಸ್ಥಿತವಾಗಿ ಸೋಲಿಸಲಾಗಿದೆ ಎಂದು ಆರೋಪಿಸಿದ ಸ್ವಾಮೀಜಿ, ಮುಂದಿನ ಬಾರಿ ಅವರನ್ನು ಸೋಲಿಸುವವರನ್ನೇ ಸೋಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಕುರಿತು ಟಿವಿ ೯ ಡಿಜಿಟಲ್‌ ವರದಿ ಮಾಡಿದೆ.

ಇದನ್ನೂ ಓದಿ: Karungali Mala: ಯಾರಾದ್ರೂ ಗಿಫ್ಟ್‌ ಕೊಟ್ರು ಅಂತ ಈ ಮಾಲೆ ಹಾಕೋಬೇಡಿ! ಅಪಾಯ ಎದುರಾದೀತು!!

ಇದೇ ವೇಳೆ ಟಿಪ್ಪು ಸುಲ್ತಾನ್ ಮತ್ತು ಅಬ್ದುಲ್ ಕಲಾಂ ಅವರ ಸಾಧನೆಯನ್ನು ಸ್ಮರಿಸಿದ ಅವರು, ಟಿಪ್ಪು ಸುಲ್ತಾನ್ ಜೀವನದ ಕುರಿತು ನಟ ಶಾರುಖ್ ಖಾನ್ ಸಿನಿಮಾ ಮಾಡಬೇಕೆಂದು ಮನವಿ ಮಾಡಿದರು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories