ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಕ್ರಶ್? ಅಣ್ಣ ಅಲ್ಲ ಅವರು ನನ್ನ ಫ್ರೆಂಡ್ ಅಂದ್ರು!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ತುಂಬಾ ಫೇಮಸ್ ಅಂದ್ರೆ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅಂದ್ರೆ ತಪ್ಪಾಗಲಾರದು. ಗಿಲ್ಲಿ ನಟ ಕಾವ್ಯ ಅವರ ಹಿಂದೆ ಬಿದ್ದು ಕಾವು ಕಾವು ಅಂತ ತಿರುಗುತ್ತಿದ್ದಾರೆ. ಆದ್ರೆ ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಕ್ರಶ್ ಆಗಿದ್ಯಾ ಎಂಬ ಅನುಮಾನ ಕಾಡ್ತಾ ಇದೆ.

ಅವರು ನನ್ನ ಅಣ್ಣ ಅಲ್ಲ
ಇನ್ನು ಫ್ಯಾಮಿಲಿ ರೌಂಡ್ ಬಂದಾಗ ಸೂರಜ್ ಅವರ ಅಕ್ಕ ನಿನಗೆ ಇಲ್ಲಿ ಇರುವ ಎಲ್ಲರೂ ಅಣ್ಣನಾ ಎಂದು ಕೇಳ್ತಾರೆ. ಅದಕ್ಕೆ ರಕ್ಷಿತಾ ಶೆಟ್ಟಿ ಎಲ್ಲರೂ ಅಣ್ಣ. ಆದ್ರೆ ಗಿಲ್ಲಿ ಮಾತ್ರ ನನಗೆ ಫ್ರೆಂಡ್ ಅಂದಿದ್ದಾರೆ.

ಕಾವ್ಯ ಜೊತೆ ಇದ್ರೆ ಬೇಸರ
ಇನ್ನು ಗಿಲ್ಲಿ ನಟ ಅವರಿಗೆ ಕಾವ್ಯ ಇಷ್ಟ. ಯಾವಾಗಲೂ ಕಾವ್ಯ ಲವ್ ಯೂ ಎಂದು ಹೇಳ್ತಾ ಇರ್ತಾರೆ. ಅವರ ಜೊತೆಯೇ ಇರ್ತಾರೆ. ಆದ್ರೆ ರಕ್ಷಿತಾ ಅವರಿಗೆ ಕಾವ್ಯ ಜೊತೆ ಗಿಲ್ಲಿ ಇದ್ರೆ ಇಷ್ಟ ಆಗಲ್ಲ.

ವಿಡಿಯೋ ವೈರಲ್
ಅಲ್ಲದೇ ಕೆಲವೊಂದ ಕ್ಲಿಪ್ ಗಳಲ್ಲಿ ರಕ್ಷಿತಾ ಗಿಲ್ಲಿ ಅವರನ್ನು ಮಾತನಾಡಿಸುವುದು, ಅವರ ಮೈ ಮುಟ್ಟಿ ಮಾತನಾಡಿಸುವ ವಿಡಿಯೋ ವೈರಲ್ ಆಗಿವೆ.

ಜನಪ್ರಿಯ ಹಾಸ್ಯ ನಟ
ಗಿಲ್ಲಿ ನಟ ಕನ್ನಡದ ಜನಪ್ರಿಯ ಹಾಸ್ಯ ನಟ. ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದು, ಅವರ ಕಾಮಿಡಿ ಮತ್ತು ನಟನೆಗೆ ಹೆಸರಾಗಿದ್ದಾರೆ. ಗಿಲ್ಲಿ ನಟ ಅವರು ‘ಕ್ವಾಟ್ಲೆ ಕಿಚನ್’ ಮತ್ತು ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು.

ಇದನ್ನೂ ಓದಿ: https://kannada.newsnext.live/cinema/an-emotional-moment-in-the-bigg-boss-house/

ಕರಾವಳಿ ಮೂಲದವರು
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದಾರೆ. ಅವರು ಕರಾವಳಿ ಮೂಲದವರಾಗಿದ್ದು, ತುಳು, ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಮಿಕ್ಸ್ ಮಾಡಿ ಮಾತನಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ರಕ್ಷಿತಾ ಶೆಟ್ಟಿ ಯೂಟ್ಯೂಬ್ ಮತ್ತು ಇನ್‍ಸ್ಟಾಗ್ರಾಂ ವಿಡಿಯೊಗಳ ಮೂಲಕವೇ ಫೇಮಸ್ ಆದವರು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories